ಆರ್ ಎಸ್ ಎಸ್ ನಿರ್ಬಂಧ : ಕಾಂಗ್ರೆಸ್ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಬಂದ್ರು ಮೋಹನ್ ಭಾಗವತ್

RSS March Row: ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರುವ ಪ್ರಯತ್ನ ನಡೆದಿದೆ. ಪಥಸಂಚಲನ, ಬೈಠಕ್ ನಡೆಸೋಕು ಅನುಮತಿ ಪಡೆಯಬೇಕು ಎನ್ನುವ ನಿಯಮ ಬಂದಿದೆ.

ಹೀಗಿರುವಾಗಲೇ ಆರ್‌ಎಸ್‌ಎಸ್ ನ ಹಿರಿಯ ನಾಯಕ ಮೋಹನ ಭಾಗ್ವತ್ ರಾಜ್ಯ ಪ್ರವಾಸಕ್ಕೆ ಆಗಮಿಸಿದ್ದು ಆರ್ ಎಸ್ ಎಸ್ ನ್ನು ತಡೆಯೋ ತಾಕತ್ತು ನಿಮಗಿದ್ಯಾ ಎಂದು ಸವಾಲು ಎಸೆದಂತಿದೆ.

ನೂರನೆ ಸಂವತ್ಸರದ ಸಂಭ್ರಮದಲ್ಲಿರೋ RSS ದೇಶದಾದ್ಯಂತ ಸಂಭ್ರಮಾಚರಣೆ ಹಾಗೂ ಪಥಸಂಚಲನ ಹಮ್ಮಿಕೊಂಡಿದೆ. ಇದರ ಅಂಗವಾಗಿ ಆರ್ ಎಸ್ ಎಸ್ ಸರಸಂಘಸಂಚಾಲಕ ಮೋಹನ್ ಭಾಗ್ವತ್ ಕರ್ನಾಟಕ ಭೇಟಿಗೆ ಆಗಮಿಸಿದ್ದಾರೆ.

ಸದ್ಯ ಬೆಂಗಳೂರಿನ ಆರ್ ಎಸ್ ಎಸ್ ಕೇಂದ್ರ ಕಚೇರಿ ಕೇಶವಕೃಪಾದಲ್ಲಿರೋ ಮೋಹನ್ ಭಾಗ್ವತ್, ಸಂಜೆಯವರೆಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಳಿಕ‌ ನಾಳೆಯಿಂದ ಮೋಹನ್ ಭಾಗ್ವತ್ ರಾಜ್ಯದ ವಿವಿಧ ಕಡೆಯಲ್ಲಿ ನಡೆಯೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಶಾಲೆ ಸೇರಿದಂತೆ ಸರ್ಕಾರಿ ಜಾಗಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆ‌ ನಿರ್ಬಂಧಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಇದಕ್ಕೆ ಪೂರಕವಾಗಿ ಸರ್ಕಾರ ನೇರವಾಗಿ ಅಲ್ಲದೇ ಇದ್ದರೂ ಪರೋಕ್ಷವಾಗಿ ಆರ್ ಎಸ್ ಎಸ್ ನಿಯಂತ್ರಿಸುವ ಪ್ರಯತ್ನ ಮಾಡಿತ್ತು ಇದರ ಫಲವಾಗಿ ಯಾವುದೇ ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘಸಂಸ್ಥೆಗಳು ಯಾವುದೇ ಚಟುವಟಿಕೆ ನಡೆಸುವ ಮುನ್ನ ಅನುಮತಿ ಪಡೆಯುವುದು ಕಡ್ಡಾಯ ಎಂದು ಆದೇಶಿಸಿತ್ತು.

ಆರ್ ಎಸ್ ಎಸ್ ಮೇಲೆ‌ ನಿಯಂತ್ರಣ ಹೇರುವ ಈ ಪರೋಕ್ಷ ನಿಯಮದ ಕುರಿತು ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರು ಅಸಮಧಾನ ವ್ಯಕ್ತಪಡಿಸಿದ್ದರು.

ಈ ಮಧ್ಯೆ ಸರ್ಕಾರ, ಸರ್ಕಾರಿ ನೌಕರರು ಯಾವುದೇ ಸಂಘದ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ ಎಂದೂ ಸೂಚಿಸಿತ್ತು.

ಹೀಗಾಗಿ ರಾಜ್ಯದಲ್ಲಿ ಒಂದು ರೀತಿ ಆರ್ ಎಸ್ ಎಸ್ ನಿಯಂತ್ರಿಸುವ ವಾತಾವರಣ ಸೃಷ್ಟಿಯಾದ ಬೆನ್ನಲ್ಲೇ ಮೋಹನ್ ಭಾಗ್ವತ್ ರಾಜ್ಯಕ್ಕೆ ಆಗಮಿಸಿದ್ದಾರೆ.

ಇದು ರಾಜ್ಯ ಸರ್ಕಾರಕ್ಕೆ ಆರ್‌ಎಸ್‌ಎಸ್ ನ ಡೋಂಟ್ ಕೇರ್ ನೀತಿಗೆ ಸಾಕ್ಷಿ ಎಂದು ಅರ್ಥೈಸಲಾಗುತ್ತಿದೆ. ಆರ್ ಎಸ್ ಎಸ್ ಆರಂಭದಿಂದಲೂ ಕಾಂಗ್ರೆಸ್ ನ ವರ್ತನೆಯನ್ನು ಖಂಡಿಸುತ್ತಲೇ ಬಂದಿತ್ತು. ಅಲ್ಲದೇ ಕೇವಲ ಖರ್ಗೆ ಮಾತ್ರವಲ್ಲ ಈ ಹಿಂದೆಯೂ ಹಲವು ಕಾಂಗ್ರೆಸ್ ನಾಯಕರು ಆರ್ ಎಸ್ ಎಸ್ ನಿರ್ಬಂಧಿಸುವ ಪ್ರಯತ್ನ ಮಾಡಿದ್ದಾರೆ. ಅದರ ಫಲಶೃತಿ ಏನೆಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಮೋಹನ್ ಭಾಗ್ವತ್ ಇತ್ತೀಚಿಗೆ ಹೇಳಿದ್ದರು.

ಈಗ ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ದರ್ಬಾರಗೆ ಕಡಿವಾಣ ಹಾಕುವಂತ ಹೋರಾಟ ಸಂಘಟಿಸುವಂತೆ ಬಿಜೆಪಿ ಯನ್ನು ಸಜ್ಜುಗೊಳಿಸಲು ಹಾಗೂ ಸಂಘದ ಚಟುವಟಿಕೆಗಳಿಗಾಗಿ‌ಮೋಹನ್ ಭಾಗ್ವತ್ ರಾಜ್ಯಕ್ಕೆ ಆಗಮಿಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ ಬ್ಯಾಂಕ್‌ : ಫಲಾನುಭವಿಗಳಿಗೆ ಸಿಗಲಿದೆ 3 ಲಕ್ಷ ರೂಪಾಯಿ ಸಾಲ

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.