ಸರ್ಕಾರಿ ಆಸ್ಪತ್ರೆಗಳು ಡಿಜಟಲೀಕರಣ : ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಲ್ತ್​ ಟ್ರ್ಯಾಕ್​ ವ್ಯವಸ್ಥೆ ಜಾರಿ

ಇನ್ನು ಮುಂದೆ ನಾಗರಿಕರು ಆಸ್ಪತ್ರೆಗಳಿಗೆ ಅಲೆಯುವಾಗ ಹಳೆಯ ಪ್ರಿಸ್ಕ್ರಿಪ್ಷನ್, ಲ್ಯಾಬ್ ವರದಿಗಳು ಹಾಗೂ ಡಿಸ್ಚಾರ್ಜ್ ಸಮ್ಮರಿಗಳ ದೊಡ್ಡ ಕಡತಗಳನ್ನು ಕೈಯಲ್ಲಿ ಹೊತ್ತು ಹೋಗುವ ಕಿರಿಕಿರಿ ಇರುವುದಿಲ್ಲ. ರೋಗಿಯ 14 ಅಂಕಿಗಳ ವಿಶಿಷ್ಟ 'ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್' ಸಂಖ್ಯೆಯೊಂದಿಗೆ ಈ ಎಲ್ಲ ಮಾಹಿತಿಗಳು ಸುರಕ್ಷಿತವಾಗಿ ಜೋಡಿಸಲ್ಪಟ್ಟಿರುತ್ತವೆ.

ಬೆಂಗಳೂರು : ಕರ್ನಾಟಕದ ಎಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ‘ಡಿಜಿಟಲ್ ಹೆಲ್ತ್ ಟ್ರ್ಯಾಕ್ ಕಾರ್ಡ್’ ವ್ಯವಸ್ಥೆ ಜಾರಿಗೆ ಬರಲಿದೆ. ಸಾರ್ವಜನಿಕರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ಕರ್ನಾಟಕ ಸರ್ಕಾರ ಈ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಯೋಜನೆಯನ್ನು ಕೈಗೆತ್ತಿಕೊಂಡಿದೆ. ರೋಗಿಗಳ ಹಳೆಯ ವೈದ್ಯಕೀಯ ಇತಿಹಾಸ ಮತ್ತು ಚಿಕಿತ್ಸೆಯ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವುದು ಈ ಹೆಲ್ತ್ ಕಾರ್ಡ್‌ಗಳ ಪ್ರಮುಖ ಉದ್ದೇಶವಾಗಿದೆ.

ಈ ನೂತನ ವ್ಯವಸ್ಥೆಯಿಂದಾಗಿ ಇನ್ನು ಮುಂದೆ ನಾಗರಿಕರು ಆಸ್ಪತ್ರೆಗಳಿಗೆ ಅಲೆಯುವಾಗ ಹಳೆಯ ಪ್ರಿಸ್ಕ್ರಿಪ್ಷನ್, ಲ್ಯಾಬ್ ವರದಿಗಳು ಹಾಗೂ ಡಿಸ್ಚಾರ್ಜ್ ಸಮ್ಮರಿಗಳ ದೊಡ್ಡ ಕಡತಗಳನ್ನು ಕೈಯಲ್ಲಿ ಹೊತ್ತು ಹೋಗುವ ಕಿರಿಕಿರಿ ಇರುವುದಿಲ್ಲ. ರೋಗಿಯ 14 ಅಂಕಿಗಳ ವಿಶಿಷ್ಟ ‘ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್’ ಸಂಖ್ಯೆಯೊಂದಿಗೆ ಈ ಎಲ್ಲ ಮಾಹಿತಿಗಳು ಸುರಕ್ಷಿತವಾಗಿ ಜೋಡಿಸಲ್ಪಟ್ಟಿರುತ್ತವೆ. ವೈದ್ಯರು ರೋಗಿಯ ಅನುಮತಿ ಪಡೆದು, ಕೇವಲ ಒಂದು ಒಟಿಪಿ ಸಹಾಯದಿಂದ ಅವರ ಸಂಪೂರ್ಣ ಆರೋಗ್ಯದ ಪೂರ್ವಾಪರವನ್ನು ಕಂಪ್ಯೂಟರ್ ಪರದೆಯ ಮೇಲೆ ವೀಕ್ಷಿಸಿ ನಿಖರ ಚಿಕಿತ್ಸೆ ನೀಡಬಹುದು.

ಜೊತೆಗೆ, ಆಸ್ಪತ್ರೆಯ ಒಪಿಡಿ ಕೌಂಟರ್‌ಗಳಲ್ಲಿ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ‘ಸ್ಕ್ಯಾನ್ ಅಂಡ್ ಶೇರ್’ ಸೌಲಭ್ಯವಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳ ಬಹುದಾಗಿದೆ. ರೋಗಿಗಳ ಆರೋಗ್ಯ ಮಾಹಿತಿಯ ಸಂಪೂರ್ಣ ಮಾಲೀಕತ್ವ ಅವರ ಬಳಿಯೇ ಇರಲಿದ್ದು, ಖಾಸಗಿತನಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಈಗಾಗಲೇ ತುಮಕೂರು, ಉಡುಪಿ, ಬಳ್ಳಾರಿ, ಮೈಸೂರು ಹಾಗೂ ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದರ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಶೀಘ್ರದಲ್ಲೇ ರಾಜ್ಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಲಿದೆ.

 

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »