ಗ್ಯಾರಂಟಿ ಯೋಜನೆಯಿಂದ ಆಪತ್ತು : ಸಿಎಂ ವೇತನಕ್ಕೂ ಇಲ್ಲ ಹಣ

ಹಿಮಾಚಲಯ ಪ್ರದೇಶ ಸರಕಾರ ಉಚಿತ ವಿದ್ಯುತ್‌ ಯೋಜನೆ, ಮಹಿಳೆಯರ ಆರ್ಥಿಕ ಸಹಕಾರದ ಯೋಜನೆ ಜೊತೆಗೆ ಹಳೆಯ ಪೆನ್ಶನ್‌ ಯೋಜನೆ ಸರಕಾರದ ಬೊಕ್ಕಸಕ್ಕೆ ಬಾರೀ ಹೊಡೆತ ಕೊಟ್ಟಿದೆ.

ಹಿಮಾಚಲ ಪ್ರದೇಶ : ಕರ್ನಾಟಕದ ಬೆನ್ನಲ್ಲೇ ಹಿಮಾಚಲ ಪ್ರದೇಶದಲ್ಲೂ ಗ್ಯಾರಂಟಿ ಯೋಜನೆಗಳ ಅಬ್ಬರ ಶುರುವಾಗಿತ್ತು. ಆದರೆ ಈಗ ಅಲ್ಲಿನ ಪರಿಸ್ಥಿತಿ ಕೈ ಮೀರಿ ಹೋಗಿದೆ. ಗ್ಯಾರಂಟಿ ಯೋಜನೆಗಳ ಹೊರೆ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಹಿಮಾಚಲ ಪ್ರದೇಶದ ಸರ್ಕಾರ ದಿವಾಳಿಯ ಅಂಚಿಗೆ ಬಂದು ನಿಂತಿದೆ.

ರಾಜ್ಯದ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ಸ್ವತಃ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರೂ ಕೂಡ ತಮ್ಮ ವೇತನವನ್ನು ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಮಾಚಲ ಪ್ರದೇಶದ ವಿಧಾನಸಭೆಯಲ್ಲಿ ಇತ್ತೀಚೆಗೆ ಮಂಡನೆಯಾದ ಮಾಹಿತಿ ಜನರನ್ನು ಬೆಚ್ಚಿಬೀಳಿಸಿದೆ.

ಮುಖ್ಯಮಂತ್ರಿ ಸುಖು ಅವರು ತಮ್ಮ ಸಂಪುಟದ ಸಚಿವರು ಮತ್ತು ಶಾಸಕರು ಕನಿಷ್ಠ ಎರಡು ತಿಂಗಳ ಕಾಲ ವೇತನ ಮತ್ತು ಭತ್ಯೆಗಳನ್ನು ಪಡೆಯುವುದಿಲ್ಲ ಎಂದು ಘೋಷಿಸಿದ್ದಾರೆ. ಇದು ಕೇವಲ ಆರಂಭವಷ್ಟೇ; ರಾಜ್ಯದ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಮತ್ತು ನಿವೃತ್ತ ನೌಕರರಿಗೆ ಪೆನ್ಷನ್ ನೀಡಲು ಕೂಡ ಸರ್ಕಾರದ ಬಳಿ ಹಣವಿಲ್ಲದಂತಾಗಿದೆ.

ಇದನ್ನೂ ಓದಿ: ಶುರುವಾಯ್ತು ಆಪರೇಷನ್​ ಕಮಲ : ರೆಸಾರ್ಟ್ ರಾಜಕಾರಣದತ್ತ ಕಾಂಗ್ರೆಸ್​ ಚಿತ್ತ

ಹಿಮಾಚಲಯ ಪ್ರದೇಶ ಸರಕಾರ ಉಚಿತ ವಿದ್ಯುತ್‌ ಯೋಜನೆ, ಮಹಿಳೆಯರ ಆರ್ಥಿಕ ಸಹಕಾರದ ಯೋಜನೆ ಜೊತೆಗೆ ಹಳೆಯ ಪೆನ್ಶನ್‌ ಯೋಜನೆ ಸರಕಾರದ ಬೊಕ್ಕಸಕ್ಕೆ ಬಾರೀ ಹೊಡೆತ ಕೊಟ್ಟಿದೆ. ಹಿಮಾಚಲ ಪ್ರದೇಶ ಸರಕಾರದ ಮೇಲೆ ಸದ್ಯ ಸುಮಾರು 80,000 ಕೋಟಿ ರೂ. ಗೂ ಅಧಿಕ ಸಾಲವಿದೆ.

ಆದಾಯಕ್ಕಿಂತ ಖರ್ಚು ಹತ್ತು ಪಟ್ಟು ಹೆಚ್ಚಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸದ್ಯ ಗಂಭೀರವಾಗಿದ್ದು ಶಿಸ್ತು ಕಾಪಾಡಿಕೊಳ್ಳಲು ನಾವು ಕಠಿಣ ಕ್ರಮ ಕೈಗೊಳ್ಳಲೇಬೇಕಿದೆ. ಅದಕ್ಕಾಗಿಯೇ ನಾವು ಮೊದಲು ವೇತನ ತ್ಯಾಗ ಮಾಡಲು ಮುಂದಾಗಿದ್ದೇವೆ ಎಂದು – ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ. ಕರ್ನಾಟಕದಲ್ಲಿ ಹಿಮಾಚಲ ಪ್ರದೇಶಕ್ಕಿಂತಲೂ ಅಧಿಕ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.