ಆಸ್ತಿ ತೆರಿಗೆ ಪಾವತಿದಾರರಿಗೆ ಬಿಗ್​ ರಿಲೀಫ್​ – ಇಂದು ರಾತ್ರಿ 10ರವರೆಗೂ ಪಾಲಿಕೆ ಕಚೇರಿ ಓಪನ್​ – ಜಿಬಿಎ ಕಂದಾಯ ವಿಭಾಗ ವಿಶೇಷ ಆಯುಕ್ತರಿಂದ ಮಾಹಿತಿ

ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡದೇ ಬಾಕಿ ಉಳಿಸಿಕೊಂಡವರಿಂದ ಆಸ್ತಿ ತೆರಿಗೆ ಪಾವತಿ (Bengaluru Property Tax) ಮಾಡಿಸಲು ಜಿಬಿಎ ನಾನಾ ಹರಸಾಹಸ ಪಡುತ್ತಿದೆ. ಸದ್ಯ ಪಾಲಿಕೆಯು ಡಿಡಿ ಮೂಲಕ ಆಸ್ತಿ ತೆರಿಗೆ ಸ್ವೀಕಾರ ಮಾಡುತ್ತಿದೆ. ಇಂದಿಗೆ ಆಸ್ತಿ ತೆರಿಗೆ ಸ್ವೀಕಾರದ ಕೊನೆಯ ದಿನದ ಗಡುವು ಅಂತ್ಯಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಆಸ್ತಿ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಯವರೆಗೂ ಪಾಲಿಕೆ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎನ್ನಲಾಗಿದೆ.

ಆಸ್ತಿ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಂಡಿರುವುದಾಗಿ ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಷ್​ ಮೌದ್ಗಿಲ್​ ಮಾಹಿತಿ ನೀಡಿದ್ದಾರೆ. ಎಸ್​ಎಎಸ್​ ಆಸ್ತಿ ತೆರಿಗೆ ಹೊಂದಿರುವ ಐಡಿ ಹೊಂದಿರುವ ಆಸ್ತಿಗಳ ತೆರಿಗೆಯನ್ನು ಇಂದು ರಾತ್ರಿ 10 ಗಂಟೆಯವರೆಗೂ ಎಲ್ಲಾ ನಗರ ಪಾಲಿಕೆಗಳು ಡಿಮ್ಯಾಂಡ್​ ಡ್ರಾಫ್ಟ್​ ಮೂಲಕ ಸ್ವೀಕರಿಸಲಿವೆ.

ಇದನ್ನೂ ಓದಿ: ಶ್ರೀಗಂಧಕಾವಲ್​ ವಾಯುಪಡೆ ವಶದಲ್ಲಿರುವ ಜಾಗ ಶೀಘ್ರದಲ್ಲೇ ಮರುವಶ: ಸಚಿವ ಈಶ್ವರ ಖಂಡ್ರೆ

ಆನ್​ಲೈನ್​ ಮೂಲಕವೂ ಆಸ್ತಿ ತೆರಿಗೆ ಪಾವತಿ ಮಾಡಲು ಸಾಧ್ಯವಿದೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಪಾವತಿಯಲ್ಲಿ ದೋಷ ಕಂಡುಬಂದಲ್ಲಿ, ಆಸ್ತಿ ತೆರಿಗೆಯನ್ನು ಆನ್​ಲೈನ್​ಲ್ಲಿ ಪಾವತಿ ಮಾಡಲು ಸಾಧ್ಯವಾಗದೇ ಹೋದಲ್ಲಿ ಡಿಡಿ ಮೂಲಕ ಹಸ್ತಚಾಲಿತ ತೆರಿಗೆ ವಿಧಾನವನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹಸ್ತಚಾಲಿತ ಡಿಡಿ ಮೂಲಕ ಆಸ್ತಿ ತೆರಿಗೆಯನ್ನು ವಿವಿಧ ನಗರ ಪಾಲಿಕೆಗಳ ಕಚೇರಿಯಲ್ಲಿ ಇಂದು ರಾತ್ರಿ 10 ಗಂಟೆಯವರೆಗೂ ಸ್ವೀಕಾರ ಮಾಡಲಾಗುತ್ತದೆ. ಅದೇ ರೀತಿ ಆನ್​ಲೈನ್​ ಮೂಲಕ ತೆರಿಗೆ ಪಾವತಿಗೆ ಇಚ್ಛಿಸುವವರಿಗೆ ಇಂದು ರಾತ್ರಿ 11:59ರವರೆಗೂ ಅವಕಾಶ ನೀಡಲಾಗಿದೆ. ನಿಗದಿತ ಸಮಯದಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿದಲ್ಲಿ ಯಾವುದೇ ದಂಡಗಳಿಂದ ಬಚಾವಾಗಲು ಸಾಧ್ಯವಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »