ಗುಡ್‌ ನ್ಯೂಸ್‌! ಪರೀಕ್ಷೆ ಬರೆಯದೇ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ

IPPB GDS Recruitment 2025: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗ್ರಾಮೀಣ ಡಾಕ್ ಸೇವಕರ(GDS) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಉತ್ತಮ ಅವಕಾಶ ಒದಗಿಸಿದೆ.

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) 300 ಕ್ಕೂ ಹೆಚ್ಚು ಖಾಲಿ ಇರುವ GDS ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 9 ರಂದು ಪ್ರಾರಂಭವಾಗಿದ್ದು, ಅಭ್ಯರ್ಥಿಗಳು ಅಕ್ಟೋಬರ್ 29, 2025 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ippbonline.com ಗೆ ಭೇಟಿನ ನೀಡಿ ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಇರುವ ಅರ್ಹತೆ ಮತ್ತು ಮಾನದಂಡಗಳೇನು ಎಂದು ತಿಳಿಯೋಣ.

ಹುದ್ದೆಯ ಹೆಸರು

ಗ್ರಾಮೀಣ ಡಾಕ್ ಸೇವಕ (ಕಾರ್ಯನಿರ್ವಾಹಕ)

ಒಟ್ಟು ಹುದ್ದೆಗಳು

ಈ ನೇಮಕಾತಿಯಲ್ಲಿ 348 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.

ವಯೋಮಿತಿ

ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಹಾಗೂ ಗರಿಷ್ಠ ವಯಸ್ಸು 35 ವರ್ಷಗಳು.

ವೇತನ

ಮಾಸಿಕ 30,000 ರೂ.

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ.

ಇದನ್ನೂ ಓದಿ: ರೈಲ್ವೆಯಲ್ಲಿದೆ ಅತಿ ದೊಡ್ಡ ಅವಕಾಶ : 11,813 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ

ಆಯ್ಕೆ ಪ್ರಕ್ರಿಯೆ

ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 750 ರೂ.ಗಳಾಗಿದೆ.

ಈ ಹುದ್ದೆಗೆ ಯಾವುದೇ ಪರೀಕ್ಷೆಗಳಿರುವುದಿಲ್ಲ. ಪದವಿಯಲ್ಲಿ ಪಡೆದ ಅಂಕದ ಅರ್ಹತೆಯ ಮೇಲೆ ಆಯ್ಕೆ ನಡೆಸಲಾಗುತ್ತದೆ.

ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಕ್ಕಿಸಿ.

ಅರ್ಜಿ ಸಲ್ಲಿಕೆ ಹೇಗೆ?

  • ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲಿಗೆ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬೇಕು.
  • ಅಲ್ಲಿ ಪ್ರಸ್ತುತ ಉದ್ಯೋಗಾವಕಾಶಗಳ ವಿಭಾಗದಲ್ಲಿ, ಅಂಚೆ ಇಲಾಖೆಯಿಂದ IPPB ಗೆ ಕಾರ್ಯನಿರ್ವಾಹಕರಾಗಿ ‘ಗ್ರಾಮೀಣ ಡಾಕ್ ಸೇವಕ’ ಮೇಲೆ ಕ್ಲಿಕ್ಕಿಸಿ.
  • ಇದು IBPS ಅರ್ಜಿ ಸಲ್ಲಿಕೆ ವೆಬ್‌ಸೈಟ್‌ಗೆ ಮರುನಿರ್ದೇಶಿಸುತ್ತದೆ.
  • ನೀವು ಈಗಾಗಲೇ ಇಲ್ಲಿ ನೋಂದಾಯಿಸಿಕೊಂಡಿದ್ದರೆ, ನೇರವಾಗಿ ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ ಲಾಗಿನ್ ಆಗಬಹುದಾಗಿದೆ.
  • ಇಲ್ಲವಾದರೆ, ಹೊಸ ನೋಂದಣಿ ಆಯ್ಕೆ ಆಯ್ದುಕೊಳ್ಳಿ. ಅಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿಯನ್ನು ಭರ್ತಿ ಮಾಡಿದ ನಂತರ, ಭದ್ರತಾ ಕೋಡ್ ಅನ್ನು ಸಹ ನಮೂದಿಸಿ.
  • ಈಗ ನೋಂದಣಿ ಸಂಖ್ಯೆಯ ಮೂಲಕ ಲಾಗಿನ್ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಬಳಿಕ ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ವಿಭಾಗದಲ್ಲಿ ಸರಿಯಾದ ಗಾತ್ರದಲ್ಲಿ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
    ಈಗ ಅರ್ಜಿ ಶುಲ್ಕ ಪಾವತಿಸಿ ಮತ್ತು ಅಂತಿಮವಾಗಿ ಇನ್ನೊಮ್ಮೆ ಫಾರ್ಮ್ ಪರಿಶೀಲಿಸಿ ಸಲ್ಲಿಸಿ.

ಇದನ್ನೂ ಓದಿ: RRB NTPC ಗ್ರಾಜುಯೇಟ್ ಲೆವಲ್ ಸಿಬಿಟಿ 2 ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ: ಡೌನ್‌ಲೋಡ್ ಮಾಡುವುದು ಹೇಗೆ?

(IPPB GDS Recruitment 2025 invites application from degree holders for 348 posts)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.