ಎಸ್‌ಬಿಐ ಕ್ಲರ್ಕ್‌ ಪ್ರಿಲಿಮ್ನರಿ ಪರೀಕ್ಷೆಯ ಹಾಲ್ ಟಿಕೆಟ್‌ ಬಿಡುಗಡೆ: ಡೌನ್‌ಲೋಡ್‌ ಮಾಡುವುದು ಹೇಗೆ?

SBI Clerk Admit Card 2025: ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (SBI) ಕ್ಲರ್ಕ್‌ (ಜೂನಿಯರ್‌ ಅಸೊಸಿಯೇಟ್) ಪ್ರಿಲಿಮ್ನರಿ ಪರೀಕ್ಷೆ 2025 ರ ಹಾಲ್‌ ಟಿಕೆಟ್‌ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಇದರಿಂದ ಅಭ್ಯರ್ಥಿಗಳ ಬಹಳ ದಿನದ ಕಾಯುವಿಕೆ ಅಂತ್ಯವಾಗಿದೆ. ಈ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ತಮ್ಮ ಹಾಲ್‌ ಟಿಕೆಟ್‌ ಅನ್ನು ಎಸ್‌ಬಿಐ ನ ಅಧಿಕೃತ ವೆಬ್‌ಸೈಟ್‌ sbi.co.in ಗೆ ಭೇಟಿ ನೀಡಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಈ ಪ್ರಿಲಿಮ್ನರಿ ಪರೀಕ್ಷೆಗಳು ಸೆಪ್ಟೆಂಬರ್‌ 20, 21 ಮತ್ತು 27 ರಂದು ದೇಶದ ಬೇರೆ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. ಹಾಲ್‌ ಟಿಕೆಟ್‌ ಬಿಡುಗಡೆಯಾದ ನಂತರ ಅಭ್ಯರ್ಥಿಗಳು ತಮ್ಮ ಪರೀಕ್ಷಾ ದಿನಾಂಕ, ಸಮಯ ಮತ್ತು ಪರೀಕ್ಷೆ ನಡೆಯುವ ಸ್ಥಳಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬಹುದು.

ಅಷ್ಟೇ ಅಲ್ಲದೇ ಹಾಲ್‌ ಟಿಕೆಟ್‌ನಲ್ಲಿರುವ ವಿವರಗಳನ್ನು ಪರಿಶೀಲಿಸಬಹುದು ಮತ್ತು ಪರೀಕ್ಷಾ ಕೇಂದ್ರಕ್ಕೆ ಅಗತ್ಯ ತೆಗೆದುಕೊಂಡು ಹೋಗಲೇ ಬೇಕಾದ ದಾಖಲೆಗಳ ಬಗ್ಗೆ ತಿಳಿದುಕೊಳ್ಳಬಹುದು.

ಪರೀಕ್ಷೆಯ ದಿನದ ಕೊನೆಯ ಕ್ಷಣದ ತೊಂದರೆಗಳನ್ನು ತಪ್ಪಿಸಿ, ನಿರಾಳವಾಗಿ ಪರೀಕ್ಷೆ ಎದುರಿಸಲು ಅಭ್ಯರ್ಥಿಗಳು ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿ ಉಲ್ಲೇಖಿಸಿರುವ ವಿವರಗಳನ್ನು ಎಚ್ಚರಿಕೆಯಿಂದ ಓದಿ ಅರ್ಥೈಸಿಕೊಳ್ಳುವುದು ಅಗತ್ಯವಾಗಿದೆ.

ಎಸ್‌ಬಿಐ ಕ್ಲರ್ಕ್‌ ಹುದ್ದೆಗೆ ನಡೆಯಲಿರುವ ಪ್ರಿಲಿಮ್ನರಿ ಪರೀಕ್ಷೆಯ ಹಾಲ್ ಟಿಕೆಟ್‌ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಮತ್ತು ಅದರಲ್ಲಿ ಯಾವ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ತಿಳಿದುಕೊಳ್ಳೋಣ.

ಎಸ್‌ಬಿಐ ಕ್ಲರ್ಕ್‌ ಪ್ರಿಲಿಮ್ನರಿ ಪರೀಕ್ಷೆಯ ಹಾಲ್ ಟಿಕೆಟ್‌ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

– ಎಸ್‌ಬಿಐ ಕ್ಲರ್ಕ್‌ ಪ್ರಿಲಿಮ್ನರಿ ಪರೀಕ್ಷೆಯ ಹಾಲ್ ಟಿಕೆಟ್‌ ಡೌನ್‌ಲೋಡ್ ಮಾಡಿಕೊಳ್ಳಲು ಮೊದಲಿಗೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ sbi.co.in ಗೆ ಭೇಟಿ ಕೊಡಿ.

– ಕೆರಿಯರ್ಸ್‌ ವಿಭಾಗಕ್ಕೆ ಹೋಗಿ. ಅಥವಾ ಲೆಟೆಸ್ಟ್‌ ಅನೌನ್ಸ್‌ಮೆಂಟ್‌ಗೆ ಹೋಗಿ.

– ಅಲ್ಲಿ ನಿಮ್ಮ ರೆಜಿಸ್ಟ್ರೇಷನ್‌ ನಂಬರ್‌, ಪಾಸ್‌ವರ್ಡ್ ಅಥವಾ ಡೇಟ್‌ ಆಫ್‌ ಬರ್ತ್‌ ನಮೂದಿಸಿ. ನಂತರ ಕ್ಯಾಪ್ಚಾವನ್ನು ಸರಿಯಾಗಿ ನಮೂದಿಸಿ.

– ಬಳಿಕ ಲಾಗಿನ್‌ ಆಗಿ. ನಿಮ್ಮ ಹಾಲ್‌ ಟಿಕೆಟ್ ಸ್ಕ್ರೀನ್‌ ಮೇಲೆ ಬರುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ಅದರ ಪ್ರಿಂಟ್‌ಔಟ್‌ ತೆಗೆದುಕೊಳ್ಳಿ.

ಇದನ್ನೂ ಓದಿ: ಕ್ರೀಡಾಪಟುಗಳಿಗೆ ಗುಡ್ ನ್ಯೂಸ್! ದಕ್ಷಿಣ ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿ ನೇಮಕಾತಿ

ಹಾಲ್‌ ಟಿಕೆಟ್‌ನಲ್ಲಿ ಏನು ಚೆಕ್‌ ಮಾಡಬೇಕು?

  • ನಿಮ್ಮ ಹೆಸರು, ರೋಲ್‌ ನಂಬರ್‌, ಮತ್ತು ಭಾವಚಿತ್ರ.
  • ಪರೀಕ್ಷೆ ದಿನಾಂಕ, ಸಮಯ, ಶಿಫ್ಟ್‌, ರಿಪೋರ್ಟಿಂಗ್‌ ಸಮಯ ಮತ್ತು ಪರೀಕ್ಷೆ ನಡೆಯುವ ಸ್ಥಳದ ವಿಳಾಸ.
  • ಇವುಗಳಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣ ಎಸ್‌ಬಿಐ ಅಧಿಕಾರಿಗಳಿಗೆ ವರದಿ ಮಾಡಿ.

ಪರೀಕ್ಷೆಯ ದಿನ ಅಗತ್ಯವಾಗಿ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು

  • ಎಸ್‌ಬಿಐ ಕ್ಲರ್ಕ್‌ ಪ್ರಿಲಿಮ್ನರಿ ಹಾಲ್‌ ಟಿಕೆಟ್‌.
  • ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಥವಾ ಚಾಲನಾ ಪರವಾನಗಿಯಂತಹ ಮಾನ್ಯವಾದ ಫೋಟೋ ಐಡಿ ಪುರಾವೆಗಳು.
  • ಅರ್ಜಿ ಸಲ್ಲಿಕೆಯ ಸಮಯದಲ್ಲಿ ಅಪ್‌ಲೋಡ್‌ ಮಾಡಿದ ಭಾವಚಿತ್ರಕ್ಕೆ ಹೊಂದಿಕೆಯಾಗುವ ಇತ್ತೀಚಿನ ಭಾವಚಿತ್ರ.

ಇದನ್ನೂ ಓದಿ: ಡಿಗ್ರಿ ಆದವರಿಗೆ ಆಫೀಸರ್ ಆಗುವ ಸುವರ್ಣಾವಕಾಶ: ಬ್ಯಾಂಕ್‌ ಆಫ್ ಮಹಾರಾಷ್ಟ್ರಕ್ಕೆ ಇಂದೇ ಅರ್ಜಿ ಸಲ್ಲಿಸಿ

(How to download SBI Clerk Admit Card 2025 and how to check hall ticket information)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.