ಇನ್ನೊಂದು ಯುದ್ಧ ಶುರು? ಉತ್ತರ ಕೊರಿಯಾದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ

North Korea vs Japan: ಉತ್ತರ ಕೊರಿಯಾ ಸುಮಾರು 10 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ ಎಂದು ಯೋನಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಶ್ವದ ಗಮನವೆಲ್ಲಾ ಇಸ್ರೇಲ್-ಇರಾನ್ ಸಂಘರ್ಷದ (Iran Israel-US War) ಮೇಲಿರುವಾಗಲೇ, ಅತ್ತ ಉತ್ತರ ಕೊರಿಯಾ (North Korea) ಶನಿವಾರ ಸರಣಿ ಕ್ಷಿಪಣಿ ಉಡಾವಣೆಗಳನ್ನು ನಡೆಸಿದೆ ಎಂದು ದಕ್ಷಿಣ ಕೊರಿಯಾದ (South Korea) ಜಂಟಿ ಮುಖ್ಯಸ್ಥರು ವರದಿ ಮಾಡಿದ್ದಾರೆ.

ರಾಜಕೀಯ ಸಂಚಲನ
ಈ ಕ್ಷಿಪಣಿ ಉಡಾವಣೆಯು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಅವರು ಅಮೆರಿಕವನ್ನು ‘ಪರಮಾಣು ರಾಷ್ಟ್ರ’ ಎಂದು ಮಾನ್ಯ ಮಾಡುವಂತೆ ಒತ್ತಾಯಿಸಿದ ಬೆನ್ನಲ್ಲೇ ನಡೆದಿದೆ. ಅಲ್ಲದೆ, ಇರಾನ್ ಮೇಲೆ ಅಮೆರಿಕ ನಡೆಸುತ್ತಿರುವ ದಾಳಿಯನ್ನು ಉತ್ತರ ಕೊರಿಯಾ ತೀವ್ರವಾಗಿ ಖಂಡಿಸಿದೆ.

ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಿಮ್ ಜೊಂಗ್ ಉನ್ ಅವರನ್ನು ಭೇಟಿಯಾಗುವ ಆಶಯ ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ, ಪರಮಾಣು ಶಕ್ತಿಯಾಗಿ ತನ್ನನ್ನು ಗುರುತಿಸಿದರೆ ಮಾತ್ರ ಅಮೆರಿಕದೊಂದಿಗೆ ಸಂಬಂಧ ಸುಧಾರಿಸಲು ಸಾಧ್ಯ ಎಂದು ಕಿಮ್ ಈಗಾಗಲೇ ಷರತ್ತು ವಿಧಿಸಿದ್ದಾರೆ.

[youtube https://www.youtube.com/watch?v=ApMaJ-7pro4]

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.