ಏರ್‌ಪೋರ್ಟ್‌ ಲಗೇಜ್ ಕೌಂಟರ್‌ ನಲ್ಲಿ ನಕಲಿ ತೂಕ ಯಂತ್ರ ; ಪ್ರಯಾಣಿಕರನ್ನು ವಂಚಿಸಿತ್ತಾ ಇಂಡಿಗೋ ವಿಮಾನಯಾನ ಸಂಸ್ಥೆ ?

ಇಂಡಿಗೋ (indigo) ವಿಮಾನದಲ್ಲಿ ಗೋವಾದಿಂದ ಚಂಡೀಗಢಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಲಗೇಜ್ನ ತೂಕ ಅಂದಾಜು ತೂಕಕ್ಕಿಂತ ಹೆಚ್ಚು ಇರುವುದನ್ನು ಕಂಡು ವಿಮಾನಯಾನ ಸಂಸ್ಥೆಯು ಪ್ರಯಾಣಿಕರನ್ನು ವಂಚಿಸುತ್ತಿದೆ ಎಂದು ಆರೋಪಿಸಿದ್ದಾನೆ.

ವಿಮಾನ ಹತ್ತುವ ಮೊದಲು, ಪ್ರಯಾಣಿಕನು ವಿಮಾನ ನಿಲ್ದಾಣದಲ್ಲಿ ಮೂರು ವಿಭಿನ್ನ ಲಗೇಜ್ ಕೌಂಟರ್ಗಳಲ್ಲಿ ತನ್ನ ಲಗೇಜ್ ಅನ್ನು ತೂಕ ಮಾಡಲಾಗಿದ್ದು, ಆದರೆ ಅಲ್ಲಿ ಮೂರೂ ಕಡೆ ಬೇರೆ ಬೇರೆ ತೂಕವನ್ನು ತೋರಿಸಿದೆಯಂತೆ. ಹೀಗಾಗಿ ಈ ಘಟನೆಯನ್ನು ಪ್ರಯಾಣಿಕನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಂದಿನಿಂದ ಈ ಪೋಸ್ಟ್ ವೈರಲ್ ಆಗಿದೆ. ವೈರಲ್ ಆಗಿರುವ ಟ್ವೀಟ್ಗೆ ಇಂಡಿಗೋ ವಿಮಾನಯಾನ ಸಂಸ್ಥೆ ಪ್ರತಿಕ್ರಿಯಿಸಿದೆ.

ಪ್ರಯಾಣಿಕ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಎರಡು ಫೋಟೊಗಳನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಒಂದು ಫೋಟೊ ಅವನ ಬೋರ್ಡಿಂಗ್ ಪಾಸ್ ಆಗಿದ್ದರೆ ಇನ್ನೊಂದು ಅವನ ಕುಟುಂಬವು ಬ್ಯಾಗ್ಗಳನ್ನು ತೂಕದಿಂದ ಇಳಿಸಲು ಸಹಾಯ ಮಾಡುತ್ತಿರುವ ಫೋಟೊ. ಅಲ್ಲದೇ ಹೆಚ್ಚುವರಿ ಸಾಮಾನುಗಳಿಗೆ ₹11,900 ಪಾವತಿಸಿರುವುದಾಗಿ ಅವನು ಹೇಳಿಕೊಂಡಿದ್ದಾನೆ.

ಇದರಲ್ಲಿ ಕೇವಲ ಒಂದು ಛತ್ರಿ ಹೊತ್ತೊಯ್ಯಲು ₹1,500 ನೀಡಿರುವುದು ಕಂಡುಬಂದಿದೆ. ಹಾಗೇ ಅವನು ತನ್ನ ಲಗೇಜ್ ಬ್ಯಾಗ್ ಮೂರು ಕೌಂಟರ್ಗಳಲ್ಲಿ ಎಷ್ಟು ತೂಕ ತೋರಿಸಿದೆ ಎಂಬುದನ್ನು ಬರೆದಿದ್ದಾನೆ. ಮೊದಲು 18 ಕೆಜಿ ತೋರಿಸಲಾಗಿದೆ, ನಂತರ ಎರಡನೇ ಕೌಂಟರ್ನಲ್ಲಿ 16 ಕೆಜಿ ತೋರಿಸಲಾಗಿದೆ. ಮೂರನೇ ಕೌಂಟರ್ ಬ್ಯಾಗ್ನ ತೂಕ 15 ಕೆಜಿ ಎಂದು ತೋರಿಸಿದೆ ಎಂದು ತಿಳಿಸಿದ್ದಾನೆ.

ಆದರೆ ವಿಮಾನಯಾನ ಸಂಸ್ಥೆ 18 ಕೆಜಿ ಬ್ಯಾಗ್ನ ಸರಿಯಾದ ತೂಕ ಎಂದು ಆತನಿಗೆ ಹೇಳಿ ಹೆಚ್ಚುವರಿ ಮೊತ್ತವನ್ನು ಪಾವತಿಸಲು ಕೇಳಿದೆ ಎಂದು ಅವನು ತಿಳಿಸಿದ್ದಾನೆ. ಆದರೆ ಅವನು ತಾನು ತಂಗಿದ್ದ ಹೋಟೆಲ್ನಲ್ಲಿ ಬ್ಯಾಗ್ಗಳ ತೂಕವನ್ನು ಪರಿಶೀಲಿಸಿದಾಗ ಅದು 15 ಕೆಜಿ ಎಂದು ತೋರಿಸಿದೆ ಎಂದು ಹೇಳಿದ್ದಾನೆ. ಇದು ಹಗಲು ದರೋಡೆ. ಪ್ರಯಾಣಿಕರನ್ನು ಅವರಿಗೆ ತಿಳಿಯದಂತೆ ಇಂಡಿಗೋ ಸುಲಿಗೆ ಮಾಡುತ್ತಿದೆ ಎಂದು ಆತ ಆರೋಪಿಸಿದ್ದಾನೆ.

Also Read : ಟೆಕ್ನಾಸ್ ಮನೆಯಲ್ಲಿ ಹೋಮ ಮಾಡಿದ ಭಾರತೀಯರು !

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಒಂದು ಮಿಲಿಯನ್ಗಿಂತಲೂ ಹೆಚ್ಚು ವ್ಯೂವ್ಸ್ ಮತ್ತು ಸಾವಿರಾರು ಕಾಮೆಂಟ್ಗಳನ್ನು ಗಳಿಸಿದೆ. ವೈರಲ್ ಟ್ವೀಟ್ಗೆ ಇಂಡಿಗೋದ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಪ್ರತಿಕ್ರಿಯಿಸಿ ಆರೋಪಗಳನ್ನು ನಿರಾಕರಿಸಿದೆ.

“ಪ್ರಯಾಣಿಕರ ಒಟ್ಟು ಚೆಕ್-ಇನ್ ಬ್ಯಾಗೇಜ್ 52 ಕೆಜಿ ಆಗಿತ್ತು. ನಮ್ಮ ಸಾಗಣೆಯ ಷರತ್ತುಗಳಿಗೆ ಅನುಗುಣವಾಗಿ, ಮೂವರು ಪ್ರಯಾಣಿಕರಿಗೆ ಅನುಮತಿಸಲಾದ 45 ಕೆಜಿ ಮಿತಿಯನ್ನು ಮೀರಿದೆ. ಹಾಗಾಗಿ ಹೆಚ್ಚುವರಿ ಸಾಮಾನುಗಳಿಗೆ ಶುಲ್ಕವನ್ನು ವಿಧಿಸಲಾಗಿದೆ” ಎಂದು ತಿಳಿಸಿದೆ.

ಇಂಡಿಗೋದ ವಿವರಣೆಯನ್ನು ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಬಲಿಸಿದೆ. ಎಲ್ಲಾ ರೀತಿಯ ಚೆಕ್-ಇನ್ ಕೌಂಟರ್‌ ನಲ್ಲಿ ಇರುವ ತೂಕದ ಯಂತ್ರಗಳನ್ನು‌ ಪ್ರತಿವರ್ಷ ಗೋವಾ ಸರಕಾರದ ಲೀಗಲ್ ಮೆಟ್ರೋಲಜಿ ಡಿಪಾರ್ಟ್ಮೆಂಟ್ (Legal Metrology Department ) ಪರಿಶೀಲಿಸುತ್ತದೆ ಮತ್ತು ಪ್ರಮಾಣೀಕರಿಸುತ್ತದೆ ಎಂದು ಹೇಳಿದೆ.

Also Read :

ಯಂತ್ರಗಳಲ್ಲಿ ಯಾವುದೇ ದೋಷವಿಲ್ಲ ಎಂದು ಇಂಡಿಗೋ ಹೇಳಿಕೊಂಡರೂ, ಪ್ರಯಾಣಿಕನ ಪೋಸ್ಟ್ ದೇಶೀಯ ವಿಮಾನ ಪ್ರಯಾಣದಲ್ಲಿ ಹೊಣೆಗಾರಿಕೆ ಮತ್ತು ಗ್ರಾಹಕರ ಹಕ್ಕುಗಳ ಬಗ್ಗೆ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಕಟ್ಟುನಿಟ್ಟಾದ ಸ್ವತಂತ್ರ ಲೆಕ್ಕಪರಿಶೋಧನೆಗಳು ಮತ್ತು ಪ್ರಯಾಣಿಕರಿಗೆ ಗೋಚರಿಸುವಂತಹ ಪಾರದರ್ಶಕ ತೂಕ ವ್ಯವಸ್ಥೆಗಳನ್ನು ಸ್ಥಾಪನೆ ಮಾಡುವಂತೆ ಕರೆ ನೀಡಲಾಗಿದೆ.

Fake weighing machine at Airport luggage counter; Did IndiGo airline cheat passengers ?