ವರಮಹಾಲಕ್ಷ್ಮೀ ವೃತ : ಯಾವ ರಾಶಿಗೆ ಶುಭಫಲ, ಹೇಗಿದೆ ಇಂದಿನ ದಿನಭವಿಷ್ಯ

ವರಮಹಾಲಕ್ಷ್ಮೀ (Varamahalakshmi) ಹಬ್ಬದ ದಿನದಂದು ಕೆಲವು ರಾಶಿಗಳಿಗೆ ಶುಭಫಲವನ್ನು ತರುತ್ತದೆ. ಯಾವುದೇ ರಾಶಿಯವರಾದರೂ, ಭಕ್ತಿ ಮತ್ತು ಶ್ರದ್ಧೆಯಿಂದ ಲಕ್ಷ್ಮೀ ದೇವಿಯನ್ನು ಪೂಜಿಸಿದರೆ ಜೀವನದಲ್ಲಿ ಸುಖ-ಶಾಂತಿ, ಸಮೃದ್ಧಿ ಮತ್ತು ಐಶ್ವರ್ಯ ವೃದ್ಧಿಸುತ್ತೆ. ಆದರೆ ಕೆಲವು ಜ್ಯೋತಿಷ್ಯ ವರದಿಗಳ ಪ್ರಕಾರ, ವೃಷಭ, ಕಟಕ, ಕನ್ಯಾ, ತುಲಾ ಮತ್ತು ಮೀನ ರಾಶಿಯವರಿಗೆ ಈ ದಿನ ವಿಶೇಷವಾಗಿ ಶುಭವಾಗಲಿದೆ.

ವೃಷಭ ರಾಶಿ: ಈ ರಾಶಿಯವರು ಆರ್ಥಿಕ ವಿಚಾರಗಳಲ್ಲಿ ಸ್ಥಿರತೆ ಮತ್ತು ಬೆಳವಣಿಗೆಯನ್ನು ಕಾಣಬಹುದು.

ಕಟಕ ರಾಶಿ: ಇವರು ಭಾವನಾತ್ಮಕ ಮತ್ತು ಆರ್ಥಿಕ ವಿಚಾರಗಳಲ್ಲಿ ಸಮೃದ್ಧಿಯನ್ನು ಅನುಭವಿಸಬಹುದು.

ಕನ್ಯಾ ರಾಶಿ: ಇವರ ಶ್ರಮ ಮತ್ತು ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಾಧ್ಯತೆ ಹೆಚ್ಚಿದೆ.

ತುಲಾ ರಾಶಿ: ಈ ರಾಶಿಯವರಿಗೆ ಆರ್ಥಿಕ ಸಮತೋಲನವನ್ನು ಸಾಧಿಸಲು ಉತ್ತಮ ಅವಕಾಶಗಳು ದೊರೆಯುತ್ತವೆ.

ಮೀನ ರಾಶಿ: ಇವರಿಗೆ ಅಂತರ್ಬೋಧೆಯು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ, ಇದರಿಂದ ಲಾಭವಾಗುತ್ತದೆ.

ಇದನ್ನೂ ಓದಿ : ಏರ್‌ಪೋರ್ಟ್‌ನಲ್ಲಿ ನಕಲಿ ತೂಕಯಂತ್ರ : ಪ್ರಯಾಣಿಕರಿಗೆ ವಂಚಿಸಿತಾ ಇಂಡಿಗೋ

ದಿನಭವಿಷ್ಯ : ಅಗಸ್ಟ್‌ 08 2025

ಮೇಷರಾಶಿ : ದಿನ ನಿಮ್ಮ ಮೇಲೆ ನಿಮಗೆ ನಂಬಿಕೆಯಿಡಿ. ಸೋಮಾರಿತನವನ್ನು ತಪ್ಪಿಸಿ. ಆರೋಗ್ಯವು ಸಾಮಾನ್ಯವಾಗಿರುತ್ತದೆ, ಆದರೆ ವೆಚ್ಚಗಳು ಹೆಚ್ಚಾಗಬಹುದು. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಕುಟುಂಬದಲ್ಲಿ ಸಹಕಾರದ ವಾತಾವರಣವಿರುತ್ತದೆ.

ವೃಷಭರಾಶಿ : ಯಾಪಾರದಲ್ಲಿ ಲಾಭದ ಸಾಧ್ಯತೆ ಇದೆ. ಆರ್ಥಿಕ ವಿಚಾರಗಳಲ್ಲಿ ಸ್ಥಿರತೆ ಮತ್ತು ಬೆಳವಣಿಗೆಯನ್ನು ಕಾಣಬಹುದು.

ಮಿಥುನರಾಶಿ : ಉದ್ಯೋಗದಲ್ಲಿ ಸ್ಥಿರತೆ ಲಭ್ಯವಾಗಲಿದೆ. ವೃತ್ತಿಜೀವನಕ್ಕೆ ಸಂಬಂಧಿಸಿದ ಜನರು ನಿಮಗೆ ಸ್ವಲ್ಪ ತೊಂದರೆ ನೀಡಬಹುದು.

ಕರ್ಕಾಟಕ ರಾಶಿ : ನೀವು ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಸಮೃದ್ಧಿಯನ್ನು ಅನುಭವಿಸಬಹುದು.

ಸಿಂಹರಾಶಿ : ನಿಮ್ಮ ನಿರ್ಧಾರವನ್ನು ಮೇಲಿನ ಅಧಿಕಾರಿಗಳು ನಿಮ್ಮನ್ನು ಕೇಳದೆಯೇ ಬದಲಿಸಬಹುದು. ಇದರಿಂದ ಮನಸ್ಸಿಗೆ ಬೇಸರವಾಗಬಹುದು.

ಕನ್ಯಾರಾಶಿ : ನಿಮ್ಮ ಶ್ರಮ ಮತ್ತು ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ : 5000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ

ತುಲಾರಾಶಿ : ಆರ್ಥಿಕ ಸಮತೋಲನವನ್ನು ಸಾಧಿಸಲು ಉತ್ತಮ ಅವಕಾಶಗಳು ದೊರೆಯುತ್ತವೆ. ಅನಗತ್ಯ ಖರ್ಚುಗಳಿಂದ ಮನಸ್ಸು ಸ್ವಲ್ಪ ವಿಚಲಿತವಾಗಬಹುದು.

ವೃಶ್ಚಿಕರಾಶಿ : ಅತಿಯಾದ ಕೋಪವು ಕಡಿಮೆಯಾದರೂ ನಷ್ಟವಾಗಬಹುದು. ಅನಗತ್ಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ.

ಧನಸ್ಸುರಾಶಿ : ಈ ದಿನ ನಿಮ್ಮ ಅದೃಷ್ಟ ಪ್ರಕಾಶಮಾನವಾಗಿ ಹೊಳೆಯುತ್ತಿದೆ.

ಮಕರರಾಶಿ : ನೀವು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗಬಹುದು.

ಕುಂಭರಾಶಿ : ನೀವು ಹಣ ಹೂಡಿಕೆಗಳಿಂದ ಉತ್ತಮ ಲಾಭ ಗಳಿಸುವ ಸಾಧ್ಯತೆಯಿದೆ.

ಮೀನರಾಶಿ : ನಿಮ್ಮ ಅಂತರ್ಬೋಧೆಯು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ, ಇದರಿಂದ ಲಾಭವಾಗುತ್ತದೆ.

Varalakshmi Vratha Horoscope Today August 08

Exit mobile version