ಹೆಜಮಾಡಿ ಟೋಲ್​​ ಬಳಿ ಕೇರಳ ವಿದ್ಯಾರ್ಥಿಗಳ ಪುಂಡಾಟ – ಮದ್ಯ ಸೇವಿಸಿ, ಪಟಾಕಿ ಸಿಡಿಸಿ ಹುಚ್ಚಾಟ

ಉಡುಪಿ: ಕೇರಳದಿಂದ ಉಡುಪಿಗೆ ಎರಡು ಬಸ್​ಗಳಲ್ಲಿ ಆಗಮಿಸಿದ್ದ ಕೇರಳದ ವಿದ್ಯಾರ್ಥಿಗಳು ಹೆಜಮಾಡಿ ಟೋಲ್​ ಬಳಿ ಪುಂಡಾಟ ನಡೆಸಿರುವ ಘಟನೆಯು ವರದಿಯಾಗಿದೆ. ವಿದ್ಯಾರ್ಥಿಗಳು ಟೋಲ್​ ಗೇಟ್​ ಬಳಿ ವಾಹನಗಳನ್ನು ನಿಲ್ಲಿಸಿ ಹುಚ್ಚಾಟ ಪ್ರದರ್ಶಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ರಸ್ತೆ ಮಧ್ಯದಲ್ಲಿಯೇ ಪಟಾಕಿ ಸಿಡಿಸಿದ ವಿದ್ಯಾರ್ಥಿಗಳು, ಮದ್ಯ ಸೇವನೆಯನ್ನೂ ಮಾಡಿ ಅವಾಂತರ ಮಾಡಿದ್ದಾರೆ. ನೆರೆ ರಾಜ್ಯದ ವಿದ್ಯಾರ್ಥಿಗಳ ಈ ಹುಚ್ಚಾಟ ಪ್ರಯಾಣಿಕರು ಹಾಗೂ ಸ್ಥಳೀಯರಿಗೆ ತೀವ್ರ ಕಿರಿಕಿರಿ ಉಂಟುಮಾಡಿದೆ. ಈ ಸಂಬಂಧ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ಪುನೀತ್ ಕೆರೆಹಳ್ಳಿ, ವಸಂತ್ ಗಿಳಿಯಾರ್ ಮತ್ತು ಕಿರಿಕ್ ಕೀರ್ತಿ ವಿರುದ್ಧ ಎಫ್‌ಐಆರ್ ದಾಖಲು

ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ನೆರೆ ರಾಜ್ಯದವರು ಸಭ್ಯತೆ ಕಾಯ್ದುಕೊಳ್ಳಬೇಕು. ಈ ರೀತಿ ಹುಚ್ಚಾಟ ಪ್ರದರ್ಶನ ನಾಗರಿಕ ಪ್ರಜ್ಞೆಗೆ ಮಾಡುವ ಅವಮಾನವಾಗಿದೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

Exit mobile version