Brahmavar: ಮನೆ ನಿರ್ಮಾಣ ಸ್ಥಳದಲ್ಲಿದ್ದ ₹2 ಲಕ್ಷ ಮೌಲ್ಯದ ಕಾಂಕ್ರೀಟ್ ಶೀಟ್‌ ಕಳವು

Brahmavar: ನಿರ್ಮಾಣ ಹಂತದ ಮನೆಯ ಜಾಗದಲ್ಲಿದ್ದ ಕಾಂಕ್ರೀಟ್‌ ಶೀಟ್‌ಗಳನ್ನು ಕಳವು ಮಾಡಿದ ಪ್ರಕರಣ ಬ್ರಹ್ಮಾವರದಲ್ಲಿ ನಡೆದಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ(Brahmavar) ತಾಲೂಕಿನ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಧರ್ಮಾವರಂ ಬಳಿ ನಿರ್ಮಾಣ ಹಂತದಲ್ಲಿರುವ ಮನೆ ಜಾಗದಲ್ಲಿ ಇಟ್ಟಿದ್ದ ಸುಮಾರು ₹ 2 ಲಕ್ಷ ಮೌಲ್ಯದ ಕಬ್ಬಿಣದ ಕಾಂಕ್ರೀಟ್ ಶೀಟ್‌ಗಳನ್ನು ಕಳ್ಳರು ಕಳವು ಮಾಡಿದ್ದಾರೆ.

Also Read: ಕಾಪು: ರಸ್ತೆ ಮಧ್ಯೆ ಬಸ್‌ ನಿಲ್ಲಿಸಿ ಜಗಳ : ಖಾಸಗಿ ಬಸ್‌ ಚಾಲಕ, ನಿರ್ವಾಹಕ, ಟೈಮ್‌ ಕೀಪರ್‌ ಅರೆಸ್ಟ್‌

ಗುಂಡ್ಮಿಯ ನಿವಾಸಿ ಆಗಿರುವ ಮಹೇಂದ್ರ ಎಂಬವರು ಧರ್ಮಾವರಂ ಬಳಿಯ ಪ್ರಮೀಳಾ ಅವರ ಮನೆ ನಿರ್ಮಾಣದ ಸಂಬಂಧ ಒಟ್ಟು 250 ಕಬ್ಬಿಣದ ಕಾಂಕ್ರೀಟ್ ಶೀಟ್‌ಗಳನ್ನು ಸ್ಥಳದಲ್ಲಿ ಇರಿಸಿದ್ದರು. ಈ ಪೈಕಿ 180 ಶೀಟುಗಳು ಇದೀಗ ಕಳವಾಗಿದೆ.

ಮಹೇಂದ್ರ ಎಂಬವರಿಗೆ ಸೇರಿದ ಕೆಲಸದವರು ಈ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕಳುವಾದ 180 ಕಬ್ಬಿಣದ ಕಾಂಕ್ರೀಟ್ ಶೀಟುಗಳ ಅಂದಾಜು ಮೌಲ್ಯ ರೂ 2 ಲಕ್ಷ ಎಂದು ಅಂದಾಜಿಸಲಾಗಿದೆ.

Also Read: ಕುಂದಾಪುರ: Crane accident Kundapur: ಖಾಸಗಿ ಬಸ್​ ಚಾಲಕನ ನಿರ್ಲಕ್ಷ್ಯ​ , ಕ್ರೇನ್ ಹರಿದು ಯುವಕ ಮೃತ್ಯು

ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಬ್ರಹ್ಮಾವರ ಠಾಣೆಯ ಪೊಲೀಸರು ತನಿಖೆ ಮೂಡಿದೆ. ಸಾರ್ವಜನಿಕ ಸ್ಥಳದಲ್ಲಿ ನಡೆದಿರುವ ಈ ಕಳವು ಪ್ರಕರಣ ಗುತ್ತಿಗೆದಾರರಿಗೆ ಆತಂಕ ಮೂಡಿಸಿದೆ. ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Exit mobile version