ನಿಮ್ಮ ವಾಟ್ಸಾಪ್ ಚಾಟ್‌ ಮೇಲೆ ಕಳ್ಳರ ಕಣ್ಣು! ಘೋಸ್ಟ್ ಪೇರಿಂಗ್ ಆಗುತ್ತೆ ಹುಷಾರ್

Ghost Pairing scams: ಜಗತ್ತಿನಾದ್ಯಂತ ಕೋಟ್ಯಂತರ ಜನರು ಬಳಸುವ ವಾಟ್ಸಾಪ್‌ನಲ್ಲಿ ಈಗ ಹೊಸ ಮಾದರಿಯ ಸೈಬರ್ ದಾಳಿ ಶುರುವಾಗಿದೆ. ಇದನ್ನು ‘ಘೋಸ್ಟ್ ಪೇರಿಂಗ್’ ಎಂದು ಕರೆಯಲಾಗುತ್ತಿದ್ದು, ಬಳಕೆದಾರರಿಗೆ ತಿಳಿಯದಂತೆಯೇ ಅವರ ವಾಟ್ಸಾಪ್ ಖಾತೆಯನ್ನು ವಂಚಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ಗೆ ಲಿಂಕ್ ಮಾಡಿಕೊಳ್ಳುತ್ತಿದ್ದಾರೆ.

ಏನಿದು ಘೋಸ್ಟ್ ಪೇರಿಂಗ್?

ಸಾಮಾನ್ಯವಾಗಿ ನಾವು ‘ವಾಟ್ಸಾಪ್ ವೆಬ್’ ಮೂಲಕ ನಮ್ಮ ಖಾತೆಯನ್ನು ಮತ್ತೊಂದು ಸಾಧನಕ್ಕೆ ಲಿಂಕ್ ಮಾಡುತ್ತೇವೆ. ಇದೇ ತಂತ್ರಜ್ಞಾನವನ್ನು ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಫೋನ್ ನಿಮ್ಮ ಕೈಯಲ್ಲೇ ಇದ್ದರೂ, ನಿಮ್ಮ ಎಲ್ಲಾ ಮೆಸೇಜ್‌ಗಳು, ಫೋಟೋಗಳು ಮತ್ತು ವಿಡಿಯೋಗಳನ್ನು ವಂಚಕರು ತಮ್ಮ ಸಾಧನದಲ್ಲಿ ಕುಳಿತು ಓದಬಹುದು. ಇದು ಅತ್ಯಂತ ಸದ್ದಿಲ್ಲದೆ ನಡೆಯುವುದರಿಂದ ಇದಕ್ಕೆ ‘ಘೋಸ್ಟ್’ (ಭೂತ) ಪೇರಿಂಗ್ ಎಂಬ ಹೆಸರು ಬಂದಿದೆ.

ವಂಚನೆ ನಡೆಯುವುದು ಹೇಗೆ?

ನಕಲಿ ಲಿಂಕ್‌ಗಳ ಬಳಕೆ: ನಿಮಗೆ ಪರಿಚಿತರಂತೆಯೇ ನಟಿಸುವ ವಂಚಕರು ಒಂದು ಲಿಂಕ್ ಕಳುಹಿಸುತ್ತಾರೆ. ಇದರಲ್ಲಿ ಆಕರ್ಷಕ ಫೋಟೋ ಅಥವಾ ಮುಖ್ಯ ಮಾಹಿತಿ ಇದೆ ಎಂದು ನಂಬಿಸಲಾಗುತ್ತದೆ.

ನಕಲಿ ಪೇಜ್: ನೀವು ಆ ಲಿಂಕ್ ಕ್ಲಿಕ್ ಮಾಡಿದಾಗ ವಾಟ್ಸಾಪ್ ಮಾದರಿಯೇ ಇರುವ ಒಂದು ನಕಲಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಖಾತೆ ದೃಢೀಕರಿಸಲು ಅಥವಾ ಒಂದು ಕೋಡ್ ನಮೂದಿಸಲು ಕೇಳಲಾಗುತ್ತದೆ.

ಲಿಂಕ್ ಆಗುವ ಖಾತೆ: ನೀವು ಆ ಕೋಡ್ ಅಥವಾ ಲಿಂಕ್ ಕ್ಲಿಕ್ ಮಾಡಿದ ತಕ್ಷಣ, ನಿಮ್ಮ ವಾಟ್ಸಾಪ್ ಖಾತೆಯು ವಂಚಕನ ಡಿವೈಸ್‌ಗೆ ‘ಲಿಂಕ್’ ಆಗಿಬಿಡುತ್ತದೆ.

    ಗಮನಿಸಬೇಕಾದ ಅಂಶ: ನಿಮ್ಮ ವಾಟ್ಸಾಪ್ ಫೋನ್‌ನಲ್ಲಿ ಎಂದಿನಂತೆ ಕೆಲಸ ಮಾಡುವುದರಿಂದ, ನಿಮ್ಮ ಖಾತೆ ಬೇರೆಯವರ ಕೈಯಲ್ಲಿದೆ ಎಂಬುದು ನಿಮಗೆ ಅನುಮಾನವೇ ಬರುವುದಿಲ್ಲ.‌

    ಕಾಂಗ್ರೆಸ್‌ ಮುಖಂಡನನ್ನೇ ಗಡಿಪಾರು ಮಾಡುತ್ತಾ ಕಾಂಗ್ರೆಸ್‌ ಸರ್ಕಾರ? ಶಿಡ್ಲಫಟ್ಟ ರಾಜೀವ್ ಗೌಡ ವಿರುದ್ಧ ಭಾರೀ ಆಕ್ರೋಶ

    ಸುರಕ್ಷಿತವಾಗಿರುವುದು ಹೇಗೆ?

    https://youtube.com/watch?v=tJPlElMwNQY%3Flist%3DPL6bwg8APMrOVaoisWRlLBIR9AOLFhro5P
    Exit mobile version