ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2025 ಯಾವಾಗ ಪ್ರಾರಂಭ? ಯಾವುದಕ್ಕಿದೆ ಭರ್ಜರಿ ಆಫರ್‌?

Amazon Great Indian Festival Sale 2025: ಈ ವರ್ಷದ ಅಗಸ್ಟ್‌ನಲ್ಲಿ ಬಂದ ಅಮೆಜಾನ್‌ ಫ್ರೀಡಮ್‌ ಸೇಲ್‌ ತಪ್ಪಿಸಿಕೊಂಡವರು ಚಿಂತಿಸುವ ಅಗತ್ಯವಿಲ್ಲ.

ಏಕೆಂದರೆ ಅಮೆಜಾನ್‌ನ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2025 ಪ್ರಾರಂಭವಾಗಲಿದೆ.

ಈ ವರ್ಷದ ಬಹುನಿರೀಕ್ಷಿತ ಶಾಪಿಂಗ್‌ ಸೇಲ್‌ ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಇ–ಕಾಮರ್ಸ್‌ ದೈತ್ಯ ಸಂಸ್ಥೆ ಅಮೆಜಾನ್‌ ತನ್ನ ಮೈಕ್ರೋಸೈಟ್‌ನಲ್ಲಿ ಇದಕ್ಕೆ ಸಂಬಂಧಿಸಿದ ಅಧಿಕೃತ ಘೋಷಣೆಯನ್ನು ಮಾಡಿದೆ.

ಅದರ ಪ್ರಕಾರ ಈ ವರ್ಷದ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ವಿಶೇಷವಾಗಿರಲಿದೆ. ‌ಪ್ರೈಮ್‌ ಸದಸ್ಯರಿಗೆ ಆರಂಭಕ್ಕಿಂತಲೂ 24 ಗಂಟೆ‌ ಮುಂಚಿತವಾಗಿ ಡೀಲ್‌ಗಳನ್ನು ಪ್ರವೇಶಿಸಲು ಅವಕಾಶ ಸಿಗಲಿದೆ.

ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ಮೊಬೈಲ್‌ಗಳು, ಗೃಹೋಪಯೋಗಿ ವಸ್ತುಗಳು ಮತ್ತು ಫ್ಯಾಷನ್‌ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಗ್ರಾಹಕರು ಭಾರಿ ರಿಯಾಯಿತಿಗಳನ್ನು ನಿರೀಕ್ಷಿಸಬಹುದಾಗಿದೆ.

ಇದಲ್ಲದೇ ಪ್ರತಿ ದಿನ ರಾತ್ರಿ 8 ಗಂಟೆಗೆ ಹೊಸ ರಿಯಾಯಿತಿ ಡೀಲ್‌ ಪ್ರಾರಂಭವಾಗಲಿದೆ ಎಂದು ಪೋಸ್ಟರ್‌ ಮೂಲಕ ಹೇಳಿದೆ.

Amazon Great Indian Festival Sale 2025: ಬ್ಯಾಂಕ್‌ ಆಫರ್‌ಗಳು

ಅಮೆಜಾನ್‌ ಗ್ರೇಟ್ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2025 ತನ್ನ ಗ್ರಾಹಕರಿಗೆ ವಿಶೇಷ ಬ್ಯಾಂಕ್‌ ಆಫರ್‌ ಅನ್ನು ನೀಡಲಿದೆ. ಅದೇನೆಂದರೆ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಮತ್ತು ಡಬಿಟ್‌ ಕಾರ್ಡ್‌ ಬಳಸಿ ಖರೀದಿ ಮಾಡುವವರಿಗೆ 10% ತ್ವರಿತ ರಿಯಾಯಿತಿ ಪಡೆಯುತ್ತಾರೆ.

ಈ ಪ್ರಯೋಜನದಿಂದ ಹೆಚ್ಚಿನ ದರದ ಶಾಂಪಿಂಗ್‌ ಅನ್ನು ಕೈಗೆಟಕುವ ದರದಲ್ಲಿ ಮಾಡಬಹುದಾಗಿದೆ.

ಇದನ್ನೂ ಓದಿ: ಡಿಗ್ರಿ ಆದವರಿಗೆ ಗುಡ್ ನ್ಯೂಸ್! ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿದೆ 1425 ಹುದ್ದೆಗಳು

ಯಾವುದರ ಮೇಲೆ ಅತಿ ಹೆಚ್ಚು ರಿಯಾಯಿತಿ?

ಈ ವರ್ಷದ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಸ್ಮಾರ್ಟ್‌ಫೋನ್‌, ಇಲೆಕ್ಟ್ರಾನಿಕ್ಸ್‌ ಉಪಕರಣಗಳ ಮೇಲಿನ ಭಾರಿ ಡೀಲ್‌ನ ಆಗಮನವನ್ನು ಸೂಚಿಸುತ್ತದೆ.

ಅಮೆಜಾನ್‌ ಈ ಕೆಳಗಿನ ಬ್ರ್ಯಾಂಡ್‌ಗಳಿಗೆ ಭಾರಿ ರಿಯಾಯಿತಿ ಘೋಷಿಸಬಹುದು ಎಂದು ಅಂದಾಜಿಸಬಹುದಾಗಿದೆ.

ಇದಿಷ್ಟೇ ಅಲ್ಲದೇ ಎಲೆಕ್ಟ್ರಾನಿಕ್ಸ್‌ ಮತ್ತು ಇತರ ವಸ್ತುಗಳ ಮೇಲೆ 80% ವರೆಗಿನ ರಿಯಾಯಿತಿಯನ್ನು ನಿರೀಕ್ಷಿಸಬಹುದಾಗಿದೆ. ಸೋನಿ, ಹೆಚ್‌ಪಿ, ಲಿನೊವೊ, ಎಲ್‌ಜಿ ಯಂತಹ ಜನಪ್ರಿಯ ಬ್ರ್ಯಾಂಡ್‌ಗಳ ಮೇಲೆ ಭಾರಿ ಡಿಸ್ಕೌಂಟ್‌ ಸಿಗುವ ಸಾಧ್ಯತೆಯಿದೆ. ಇದು ಗ್ಯಾಜೆಟ್‌ಗಳನ್ನು ಅಪ್‌ಗ್ರೇಡ್ ಮಾಡಲು ಸೂಕ್ತ ಸಮಯವಾಗಲಿದೆ.

ಈ ಪ್ರಯೋಜನಗಳ ಹೊರತಾಗಿ ಕೂಪನ್‌, ಕ್ಯಾಶ್‌ಬ್ಯಾಕ್‌, ಹಳೆ ಸಾಧನಗಳ ವಿನಿಮಯ ರಿಯಾಯಿತಿ ಮತ್ತು EMI ಆಯ್ಕೆಗಳು ಇರಲಿದೆ. ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಭಾರಿ ರಿಯಾಯಿತಿ ಖರೀದಿಗಳನ್ನು ನೀಡುವುದಲ್ಲದೇ ಉಳಿತಾಯದ ಯೋಜನೆ ಮತ್ತು ಆರಾಮದಾಯಕ ಶಾಪಿಂಗ್‌ ಪ್ರಯೋಜನವನ್ನು ನೀಡುತ್ತದೆ.

ಮುಂಬರುವ ಹಬ್ಬಗಳಲ್ಲಿ ಮನೆಗೆ ಹೊಸ ವಸ್ತು ಖರೀದಿಸಿಬೇಕೆಂಬ ಯೋಚನೆಯಿದ್ದರೆ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಸೂಕ್ತವಾಗಿದೆ.

ಇದನ್ನೂ ಓದಿ: ಮಾರುಕಟ್ಟೆಗೆ ಬಂದ ಮಿಡ್‌ರೇಂಜ್ ಫೋನ್: ರಿಯ 15ಟಿ 5ಜಿ ಫೋನ್ ಬೆಲೆ ಮತ್ತು ವೈಶಿಷ್ಟ್ಯ

(When Will be Amazon Great Indian Festival Sale 2025 begin and what will be the expectations)

Exit mobile version