ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸುವ ಪ್ರತಿಷ್ಠಿತ ಕಂಪನಿ ಸೋನಿ ವೈರ್‌ಲೆಸ್ ಹೆಡ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಬರೋಬ್ಬರಿ 10 ವರ್ಷಗಳಾಗಿದೆ. ಈ ಪ್ರೀಮಿಯಂ ವಾರ್ಷಿಕೋತ್ಸವದ ಆವೃತ್ತಿಯಾಗಿ ಸೋನಿ ಹೊಸ ಹೆಡ್‌ಫೋನ್ ಒಂದನ್ನು ಬಿಡುಗಡೆ ಮಾಡಿದೆ. ‘ದಿ ಕಲೆಕ್ಷನ್’ ಹೆಡ್‌ಫೋನ್ ಐಕಾನಿಕ್ 1000X ಸರಣಿಯ ಲೈನ್‌ಅಪ್ ಆವೃತ್ತಿಯಾಗಿದೆ. ಈಗ ಬಿಡುಗಡೆಯಾಗಿರುವ ಸೋನಿಯ ಹೆಡ್‌ಫೋನ್ ಆಡಿಯೋ ಶ್ರೇಣಿಯ ಪ್ರಮುಖ ಮೈಲಿಗಲ್ಲಾಗಿದೆ. 2016 ರಲ್ಲಿ ಬಿಡುಗಡೆಯಾಗಿದ್ದ MDR-1000X ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಇದು ನಾಯ್ಸ್ ಲೆಸ್ ಹೆಡ್‌ಫೋನ್ ಫ್ಯಾಮಿಲಿಗೆ ಸೇರಿತ್ತು. ಈಗ ಬಿಡುಗಡೆಯಾಗಿರುವ 1000X ದಿ ಕಲೆಕ್ಷನ್ ಹೆಡ್‌ಫೋನ್ ಇನ್ನೂ ಮುಂದುವರಿದು ಉತ್ತಮ ಸೌಂಡ್ ಕ್ವಾಲಿಟಿ, ಹೊಸ ವಿನ್ಯಾಸ, ನವೀಕರಿಸಿದ ಆಡಿಯೊ ಟ್ಯೂನಿಂಗ್ ಸಂಯೋಜನೆಗಳೊಂದಿಗೆ ಇನ್ನಷ್ಟು ಆಕರ್ಷಕವಾಗಿ ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ.
ಸೋನಿ 1000X ದಿ ಕಲೆಕ್ಷನ್ ಬೆಲೆ
ಸೋನಿ ಬಿಡುಗಡೆ ಮಾಡಿರುವ 1000X ದಿ ಕಲೆಕ್ಷನ್‌ನ ಬೆಲೆ US ನಲ್ಲಿ $649.99. ಅಂದರೆ ಭಾರತದಲ್ಲಿ ಸರಿಸುಮಾರು ₹63,000 ಆಗಿದೆ. ಕೆನಡಾದಲ್ಲಿ, ಬೆಲೆ CAD 849.99 (ಸರಿಸುಮಾರು ₹59,800). ಈ ಹೆಡ್‌ಫೋನ್ ಮೇ 2026 ರಿಂದ ಸೋನಿಯ ವೆಬ್‌ಸೈಟ್, ಅಮೆಜಾನ್ ಮತ್ತು ಬೆಸ್ಟ್ ಬೈನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಕಂಪನಿಯು ಈ ಹೆಡ್‌ಫೋನ್‌ಗಳನ್ನು ಪ್ಲಾಟಿನಂ ಮತ್ತು ಕಪ್ಪು ಬಣ್ಣಗಳಲ್ಲಿ ಪರಿಚಯಿಸಿದೆ.
ಇದನ್ನೂ ಓದಿ: ಭಾರತಕ್ಕೆ ಬಂದ ಮೊಟೊರೊಲಾದ 2 ಪವರ್‌ಫುಲ್ 5ಜಿ ಫೋನ್‌ಗಳು! ಬೆಲೆ ಕೇಳಿದ್ರೆ ಇಷ್ಟೇನಾ ಅನ್ನೋದು ಗ್ಯಾರಂಟಿ!
ಸೋನಿ 1000X ದಿ ಕಲೆಕ್ಷನ್ ವೈಶಿಷ್ಟ್ಯ
ಸೋನಿ ತನ್ನ ಹೊಸ ಹೆಡ್‌ಫೋನ್ ಅನ್ನು ಇನ್ನಷ್ಟು ಯೂಸರ್ ಫ್ರೆಂಡ್ಲಿಯನ್ನಾಗಿಸಿದೆ. ಬಹಳ ಸಮಯದವರೆಗೆ ಹೆಡ್‌ಫೋನ್ ಧರಿಸಿದರೂ ಅದರ ಹೆಡ್‌ಬ್ಯಾಂಡ್‌ನಿಂದ ತೊಂದರೆಯಾಗದಂತೆ ಮೃದು ಕುಷನ್‌ಗಳನ್ನು ಅಳವಡಿಸಿದೆ. ಕಿವಿಗಳ ಸುತ್ತ ಇರುವ ಇಯರ್‌ಕಪ್‌ಗಳು ನಾಯ್ಸ್ (Noise) ಅನ್ನು ಪರಿಣಾಮಕಾರಿಯಾಗಿ ಪ್ರತ್ಯೇಕಗೊಳಿಸಬಲ್ಲದು. ಇನ್ನು ಆಡಿಯೋ ವಿಷಯದಲ್ಲಿ ಹೇಳುವಾದರೆ ಸೋನಿಯ ಈ ಹೆಡ್‌ಫೋನ್ ಸ್ಪಷ್ಟತೆ, ದೊಡ್ಡದಾದ ಧ್ವನಿ, ವಾಲ್ಯೂಮ್ ಬದಲಾಣೆ ಮಾಡಿಕೊಳ್ಳಬಹುದು. ಹೈ ಫ್ರೀಕ್ವೆನ್ಸಿ ಉತ್ಪಾದಿಸಲು ಯುನಿಡೈರಕ್ಷನಲ್ ಕಾರ್ಬನ್ ಕಂಪೊಸಿಟ್ ವಸ್ತುಗಳನ್ನು ಅಳವಡಿಸಲಾಗಿದೆ. ಸೋನಿ ಹೇಳಿಕೊಂಡಂತೆ ಇದು DSEE ಅಲ್ಟಿಮೇಟ್ ಅನ್ನು ಒಳಗೊಂಡಿರುವ ಮೊದಲ ಹೆಡ್‌ಫೋನ್. ಈ ವೈಶಿಷ್ಟ್ಯವು ಎಡ್ಜ್ AI ನ ಸಹಾಯದಿಂದ ಕಂಪ್ರೆಸ್ಟ್ ಮ್ಯೂಸಿಕ್ ಫೈಲ್‌ಗಳ ಕ್ವಾಲಿಟಿಯನ್ನು ರಿಯಲ್ ಟೈಮ್‌ನಲ್ಲಿ ಉತ್ತಮಗೊಳಿಸಬಲ್ಲದು. ಜೊತೆಗೆ ಇದರಲ್ಲಿ 360 ರಿಯಾಲಿಟಿ ಆಡಿಯೋ ಅಪ್‌ಮಿಕ್ಸ್ ಅನ್ನು ಬೆಂಬಲಿಸುತ್ತದೆ. ಇದರಲ್ಲಿ ಸಂಗೀತ, ಸಿನಿಮಾ ಮತ್ತು ಆಟಕ್ಕಾಗಿ ಬೇರೆ ಬೇರೆ ಮೋಡ್‌ಗಳು ದೊರೆಯಲಿವೆ.
ಶಕ್ತಿಶಾಲಿ ANC ಮತ್ತು ಬ್ಯಾಟರಿ ಬಾಳಿಕೆ
ಈ ಹೆಡ್‌ಫೋನ್‌ನಲ್ಲಿ WH-1000XM6 ನಂತಯೇ ಶಕ್ತಿಶಾಲಿ ನಾಯ್ಸ್ ಕಾನ್ಸಲೇಷನ್ ಇದೆ. ಇದರಿಂದ ನಾಯ್ಸ್ ಅನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದಾಗಿದೆ. ಈ ಹೆಡ್‌ಫೋನ್ ಸಿಂಗಲ್ ಚಾರ್ಜ್‌ನಲ್ಲಿ 24 ಗಂಟೆಗಳಿಂದ 32 ಗಂಟೆಗಳವರೆಗಿನ ಬ್ಯಾಟರಿ ಬ್ಯಾಕ್‌ಅಪ್ ನೀಡುತ್ತದೆ.
