WordCamp Bengaluru 2025: ಮಿಲ್ಲೇನಿಯಲ್ ಡ್ಯುಯೋ ಸೆಷನ್ WordCamp ಬೆಂಗಳೂರು 2025 ಜನಮೆಚ್ಚುಗೆ

WordCamp Bengaluru: ತಂತ್ರಜ್ಞಾನದಲ್ಲಿ ಪರಿಣತಿ ಮತ್ತು ಪ್ರವಾಸದ ಹಂಬಲದ ಸಂಯೋಜನೆಯಿಂದ ಪ್ರಸಿದ್ಧರಾದ ಮಿಲ್ಲೇನಿಯಲ್ ಡ್ಯುಯೋ — ಕೆ ಕೀರ್ತಿ ಪ್ರಭು ಮತ್ತು ವಿ ಗೌತಮ್ ನಾವಡ, WordCamp ಬೆಂಗಳೂರು (Bengaluru) 2025 ವೇದಿಕೆಯಲ್ಲಿ ಪ್ರೇಕ್ಷಕರ ಮನ ಗೆದ್ದರು. ಸೈಂಟ್ ಜೋಸೆಫ್ ಬಾಯ್ಸ್ ಹೈ ಸ್ಕೂಲ್, ಮ್ಯೂಸಿಯಂ ರೋಡ್ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇವರ ಸಂಯುಕ್ತ ಸೆಷನ್ “ _*ಟೆಸ್ಟರ್ನಂತೆ ಯೋಚಿಸುವುದು: ಕ್ಲೈಂಟ್ಗಿಂತ ಮೊದಲು ಬಗ್ಗ್ಗಳನ್ನು ಪತ್ತೆಹಚ್ಚುವುದು*_ ” ದಿನದ ಪ್ರಮುಖ ಆಕರ್ಷಣೆಯಾಯಿತು.

ಈ ಸೆಷನ್ನಲ್ಲಿ, ಡೆವಲಪರ್ಗಳು ಮತ್ತು ಡಿಸೈನರ್ಗಳು ಟೆಸ್ಟಿಂಗ್ನ್ನು ಅಂತಿಮ ಹಂತವಾಗಿ ನೋಡದೆ, ಪ್ರತಿದಿನದ ಕೆಲಸದಲ್ಲಿ ಒಂದು ಮನೋಭಾವವಾಗಿ ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ಹಂಚಿಕೊಳ್ಳಲಾಯಿತು.

ಕೀರ್ತಿ ಈ ವೇಳೆ ಮಾತನಾಡಿ, ಒಬ್ಬ ಟೆಸ್ಟರ್ ಕೇವಲ ಬಟನ್ಗಳನ್ನು ಒತ್ತುವುದಲ್ಲ ಏನು ತಪ್ಪಾಗಬಹುದು ಎಂಬುದನ್ನು ಊಹಿಸುತ್ತಾರೆ. ಇದು ಯಾರಾದರೂ ಕಲಿಯಬಹುದಾದ ಕೌಶಲ್ಯ. ಕ್ಲೈಂಟ್ಗಳಿಗೆ ನಿಖರ ಅನುಭವ ನೀಡಲು ಇದು ದೊಡ್ಡ ಬದಲಾವಣೆಯಾಗುತ್ತದೆ.

ಗೌತಮ್ ನಾವಡ ಮಾತನಾಡಿ, ನಾನು ಹಲವು WordCamp ಗಳಲ್ಲಿ ಮಾತನಾಡಿದ್ದೇನೆ, ಆದರೆ ಇದು ನನಗೆ ವಿಶೇಷ ಅನುಭವ. ಮೊದಲ ಬಾರಿಗೆ ನಾನು ನನ್ನ ಪತ್ನಿಯೊಂದಿಗೆ ವೇದಿಕೆಯನ್ನು ಹಂಚಿಕೊಂಡೆ. ಈ ಅವಕಾಶ ಸಿಕ್ಕಿದ್ದಕ್ಕೆ ನಾನು ಹೃತ್ಪೂರ್ವಕವಾಗಿ ಕೃತಜ್ಞ ಎಂದಿದ್ದಾರೆ.

ಪ್ರೇಕ್ಷಕರ ಮೆಚ್ಚುಗೆ

ಕಾರ್ಯಕ್ರಮದಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ 250ಕ್ಕೂ ಹೆಚ್ಚು ವರ್ಡ್ಪ್ರೆಸ್ ಅಭಿಮಾನಿಗಳು ಪಾಲ್ಗೊಂಡರು. ದಿನಪೂರ್ತಿ ನಡೆದ ಉಪನ್ಯಾಸಗಳು, ನೆಟ್ವರ್ಕಿಂಗ್ ಮತ್ತು ಸಮುದಾಯ ಚಟುವಟಿಕೆಗಳಲ್ಲಿ ಇವರ ಸೆಷನ್ ಪ್ರಾಯೋಗಿಕ ಹಾಗೂ ಸುಲಭವಾಗಿ ಅರ್ಥವಾಗುವ ರೀತಿಯಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಮಿಲ್ಲೇನಿಯಲ್ ಡ್ಯುಯೋ ಕುರಿತು  ಕೆ ಕೀರ್ತಿ ಪ್ರಭು ಮಾತನಾಡಿ,  ಆರು ವರ್ಷದ ಸಾಫ್ಟ್ವೇರ್ ಟೆಸ್ಟಿಂಗ್ ಅನುಭವ ಹೊಂದಿದ್ದಾರೆ. ವೃತ್ತಿಜೀವನದ ಹೊರತಾಗಿ, ಪ್ರವಾಸ ಇವರ ಆಸಕ್ತಿ. ವಿವಾಹವಾದ ಮೂರು ವರ್ಷಗಳಲ್ಲಿ ಗೌತಮ್ ಜೊತೆಯಲ್ಲಿ 11 ರಾಷ್ಟ್ರಗಳಿಗೆ ಪ್ರವಾಸ ಮಾಡಿದ್ದಾರೆ. ಇವರು WordPress ಉಡುಪಿ ಮೀಟಪ್ನ್ನು ಸಹ-ಆಯೋಜಿಸುತ್ತಾರೆ ಮತ್ತು ತಮ್ಮ ಪ್ರವಾಸ ಅನುಭವಗಳನ್ನು MillennialDuo.com ಬ್ಲಾಗ್ನಲ್ಲಿ ಹಂಚಿಕೊಳ್ಳುತ್ತಾರೆ.

– ವಿ ಗೌತಮ್ ನಾವಡ — ForthFocus ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕರು. ಜಾಗತಿಕ ಗ್ರಾಹಕರಿಗೆ ವೆಬ್ ಪರಿಹಾರಗಳನ್ನು ನೀಡುತ್ತಿದ್ದಾರೆ. ಬ್ಲಾಗರ್ ಆಗಿ ಪ್ರಾರಂಭಿಸಿದ ಇವರ ಪಯಣ, ಇಂದು ಯಶಸ್ವಿ ಡಿಜಿಟಲ್ ಸಂಸ್ಥೆ ಸ್ಥಾಪನೆಯವರೆಗೂ ಬೆಳವಣಿಗೆ ಕಂಡಿದೆ. Keerthi ಜೊತೆಗೆ Millennial Duo ಹೆಸರಿನಲ್ಲಿ ವೆಬ್ಸೈಟ್ ಹಾಗೂ ಇನ್ಸ್ಟಾಗ್ರಾಂ (@millennial.duo) ಮೂಲಕ ಪ್ರವಾಸ ಮತ್ತು ತಂತ್ರಜ್ಞಾನ ಅನುಭವ ಹಂಚಿಕೊಳ್ಳುತ್ತಿದ್ದಾರೆ.

ಸ್ಮರಣೀಯ WordCamp

ಕೀರ್ತಿ ಮತ್ತು ಗೌತಮ್ ಇವರಿಗಿದು ಕೇವಲ ಮತ್ತೊಂದು WordCamp ಅಲ್ಲ, ಒಂದು ಮುಖ್ಯ ಮೈಲಿಗಲ್ಲು. ಟೆಸ್ಟರ್ ಮನೋಭಾವದ ಅಗತ್ಯತೆಯನ್ನು ನೆನಪಿಸುವುದರ ಜೊತೆಗೆ, ದಾಂಪತ್ಯ ಮತ್ತು ವೃತ್ತಿಜೀವನದಲ್ಲೂ ಒಟ್ಟಿಗೆ ವೇದಿಕೆ ಹಂಚಿಕೊಂಡ ಕ್ಷಣವಾಗಿತ್ತು. ಮಿಲ್ಲೇನಿಯಲ್ ಡ್ಯುಯೋ ಆಗಿ ಇವರು ತಂತ್ರಜ್ಞಾನ, ಪ್ರವಾಸ ಮತ್ತು ಸಮುದಾಯದ ಸಂಯೋಜನೆಯನ್ನು ಮುಂದುವರೆಸುತ್ತಿದ್ದಾರೆ.

ಇದನ್ನೂ ಓದಿ: ಪುರುಷರ ಮುಖದ ಒರಟು ಚರ್ಮದ ಆರೈಕೆ ಹೀಗಿರಲಿ

Exit mobile version