ಏನಿದು ಭಾರತ್ ವಿಸ್ತಾರ್: ಕೃಷಿಕರಿಗೆ ಮೀಸಲಾದ ಈ ಎಐ ಬಳಕೆ ಮಾಡೋದು ಹೇಗೆ?

Bharat Vistar AI farmers use: ಭಾರತೀಯ ಕೃಷಿ ಕ್ಷೇತ್ರವು ಹವಾಮಾನ ಬದಲಾವಣೆ ಮತ್ತು ಮಾಹಿತಿಯ ಕೊರತೆಯಿಂದಾಗಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳನ್ನು ಮೆಟ್ಟಿನಿಂತು ರೈತರಿಗೆ ತಾಂತ್ರಿಕ ಶಕ್ತಿ ತುಂಬಲು 2026ರ ಕೇಂದ್ರ ಬಜೆಟ್‌ನಲ್ಲಿ ‘ಭಾರತ್ ವಿಸ್ತಾರ್’ ಎಂಬ ಮಲ್ಟಿಲಿಂಗುವಲ್ (ಬಹುವಚನ) AI ವೇದಿಕೆಯನ್ನು ಘೋಷಿಸಲಾಗಿದೆ.

ಏನಿದು ಭಾರತ್ ವಿಸ್ತಾರ್ ?

‘ಭಾರತ್ ವಿಸ್ತಾರ್’ ಎಂದರೆ “Virtually Integrated System to Access Agricultural Resources”. ಇದು ರೈತರ ದತ್ತಾಂಶ, ಮಣ್ಣಿನ ದಾಖಲೆಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಶಿಫಾರಸು ಮಾಡಿದ ಕೃಷಿ ಪದ್ಧತಿಗಳನ್ನು ಒಗ್ಗೂಡಿಸುವ ಒಂದು ಡಿಜಿಟಲ್ ವ್ಯವಸ್ಥೆಯಾಗಿದೆ.

ಈ ವೇದಿಕೆಯ ಪ್ರಮುಖ ವೈಶಿಷ್ಟ್ಯಗಳು:

ಬೆಳೆ ಆಯ್ಕೆ: ಮಣ್ಣು ಮತ್ತು ಮಳೆಗೆ ಸೂಕ್ತವಾದ ಬೆಳೆಯನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ, ಇದರಿಂದ ನಷ್ಟದ ಭೀತಿ ಕಡಿಮೆಯಾಗುತ್ತದೆ.

ರೋಗ ನಿಯಂತ್ರಣ: ಬೆಳೆಗಳಿಗೆ ಕೀಟಬಾಧೆ ಉಂಟಾದಾಗ ತಕ್ಷಣವೇ ಸ್ಮಾರ್ಟ್‌ಫೋನ್ ಮೂಲಕ ಪರಿಹಾರ ಕ್ರಮಗಳನ್ನು ತಿಳಿದುಕೊಳ್ಳಬಹುದು.

ಹೆಚ್ಚಿನ ಇಳುವರಿ: ಸರಿಯಾದ ಸಮಯದಲ್ಲಿ ಸರಿಯಾದ ಮಾಹಿತಿಯು ಸಿಗುವುದರಿಂದ ಕೃಷಿ ಉತ್ಪಾದಕತೆ ಹೆಚ್ಚುತ್ತದೆ.

ಮಾರುಕಟ್ಟೆ ಸಂಪರ್ಕ: ಬೆಳೆದ ಬೆಳೆಗೆ ಎಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂಬ ಮಾಹಿತಿಯು ರೈತರ ಬೆರಳ ತುದಿಯಲ್ಲಿರುತ್ತದೆ.

ಈ ಯೋಜನೆ ಯಶಸ್ವಿಯಾಗಲು ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸಂಪರ್ಕ ಮತ್ತು ರೈತರಲ್ಲಿ ಡಿಜಿಟಲ್ ಸಾಕ್ಷರತೆಯನ್ನು (ತಂತ್ರಜ್ಞಾನ ಬಳಸುವ ಜ್ಞಾನ) ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ಸರ್ಕಾರವು ಸ್ಥಳೀಯ ಕೃಷಿ ಅಧಿಕಾರಿಗಳ ಮೂಲಕ ತರಬೇತಿ ನೀಡಲು ಯೋಜಿಸಿದೆ.

Exit mobile version