ಬಣ್ಣಗಳ ಹಬ್ಬಕ್ಕೆ ಬಿಎಸ್‌ಎನ್‌ಎಲ್‌ನಿಂದ ವಿಶೇಷ ಕೊಡುಗೆ: 2ಜಿಬಿ ಹೈಸ್ಪೀಡ್ ಡೇಟಾ, 164 ದಿನಗಳ ಮಾನ್ಯತೆ

BSNL Holi Special Offer: ಸರ್ಕಾರದ ಅಧೀನದಲ್ಲಿರುವ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್‌ ಹೋಳಿ ಹಬ್ಬದ ಪ್ರಯುಕ್ತ ತನ್ನ ಪ್ರೀಪೇಡ್‌ ಗ್ರಾಹಕರಿಗಾಗಿ ವಿಶೇಷ ಫೆಸ್ಟಿವಲ್‌ ಆಫರ್‌ ಅನ್ನು ಪರಿಚಯಿಸಿದೆ.

ಇದನ್ನು ಬಿಎಸ್‌ಎನ್‌ಎಲ್‌ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. “ರಂಗೋಂ ಕಾ ಸೆಲೆಬ್ರೇಷನ್, ನಾನ್-ಸ್ಟಾಪ್ ಕನೆಕ್ಷನ್” ಎಂಬ ಟ್ಯಾಗ್‌ಲೈನ್‌ನೊಂದಿಗೆ ಕಂಪನಿಯು ಈ ಕೊಡುಗೆಯನ್ನು ಪ್ರಚಾರ ಮಾಡಿದೆ.

ಹಬ್ಬಗಳ ಸಮಯದಲ್ಲಿ ಜನರು ಹೆಚ್ಚು ಕರೆ ಮತ್ತು ಡೇಟಾವನ್ನು ಬಳಸುತ್ತಾರೆ, ಆದ್ದರಿಂದ ಹೆಚ್ಚುವರಿ ವ್ಯಾಲಿಡಿಟಿ ಮತ್ತು ಹೆಚ್ಚಿನ ಡೇಟಾ ಬಳಸುವ ಬಳಕೆದಾರರಿಗೆ ಇದೊಂದು ಉತ್ತಮ ಕೊಡುಗೆಯಾಗಿದೆ.

ಸೀಮಿತ ಅವಧಿಯ ಕೊಡುಗೆಯಾಗಿರುವ ಈ ಪ್ಲಾನ್‌ ಹೆಚ್ಚಿನ ಡೇಟಾ ಮತ್ತು ದೀರ್ಘಾವಧಿಯ ಮಾನ್ಯತೆಯನ್ನು ನೀಡುತ್ತದೆ. ಬಿಎಸ್‌ಎನ್ಎಲ್‌ನ ಈ ಅದ್ಭುತ ಯೋಜನೆಯು ಹೆಚ್ಚಿನ ಮಾನ್ಯತೆ ಮತ್ತು ಡೇಟಾ ಹುಡುಕುತ್ತಿರುವ ಗ್ರಾಹಕರಿಗೆ ಸೂಕ್ತವಾಗಿದೆ.

ಬಿಎಸ್‌ಎನ್ಎಲ್‌ನ 997 ರೂ.ಗಳ ಜನಪ್ರಿಯ ಯೋಜನೆಯು ಈಗ 14 ದಿನಗಳ ಹೆಚ್ಚುವರಿ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯ ಸಂಪೂರ್ಣ ಮಾಹಿತಿ ಬಗ್ಗೆ ತಿಳಿಯೋಣ.

ಬಿಎಸ್‌ಎನ್‌ಎಲ್‌ನ 997 ರೂ. ಯೋಜನೆ ಹೇಗಿದೆ?

ಬಿಎಸ್‌ಎನ್‌ಎಲ್‌ 997 ರೂ. ಗಳ ಪ್ರೀಪೇಯ್ಡ್‌ ಯೋಜನೆಯು ಚಂದಾದಾರರಿಗೆ ದಿನಕ್ಕೆ 2 ಜಿಬಿ ಹೈಸ್ಪೀಡ್‌ ಡೇಟಾವನ್ನು ನೀಡುತ್ತದೆ. ಡೇಟಾ ಖಾಲಿಯಾದ ನಂತರ ವೇಗ ಕಡಿಮೆಯಾಗುತ್ತದೆ. ಆದರೂ ಇಂಟರ್ನೆಟ್‌ ಪ್ರವೇಶ ಲಭ್ಯವಿರುತ್ತದೆ. ಇದರ ಜೊತೆಗೆ ಅನಿಯಮಿತ ಕರೆಗಳನ್ನು ಸಹ ಮಾಡಬಹುದಾದ ವೈಶಿಷ್ಟ್ಯವನ್ನು ನೀಡುತ್ತದೆ.

ಇದನ್ನೂ ಓದಿ: ಬಿಡುಗಡೆಗೆ ಸಜ್ಜಾದ ಐಫೋನ್‌ 17e: 48MP ಕ್ಯಾಮೆರಾ ವೈಶಿಷ್ಟ್ಯವಿರುವ ಫೋನ್‌ ಬೆಲೆ ಎಷ್ಟು?

ಹಬ್ಬದ ಕೊಡುಗೆಯಲ್ಲಿ ಏನಿದೆ?

ಈ ಯೋಜನೆಯು 150 ದಿನಗಳ ಮಾನ್ಯತೆಯೊಂದಿಗೆ ಬರುತ್ತಿತ್ತು. ಆದರೆ ಹೋಳಿ ವಿಶೇಷ ಕೊಡುಗೆಯ ಭಾಗವಾಗಿ ಕಂಪನಿಯು ಇದರ ವ್ಯಾಲಿಡಿಟಿಯನ್ನು ಹೆಚ್ಚುವರಿ 14 ದಿನಗಳನ್ನು ನೀಡುತ್ತದೆ. ಅಂದರೆ ಚಂದಾದರು ಈ ಯೋಜನೆ ಪಡೆದುಕೊಂಡರೆ ಒಟ್ಟು 164 ದಿನಗಳ ಮಾನ್ಯತೆ ಪಡೆದುಕೊಳ್ಳುತ್ತಾರೆ. ಹೆಚ್ಚಿನ ಅವಧಿಯ ಮಾನ್ಯತೆಯನ್ನು ಬಯಸುವ ಬಳಕೆದಾರರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ.

ಈ ಕೊಡುಗೆ ಎಷ್ಟು ದಿನಗಳವರೆಗೆ ಇರಲಿದೆ?

ಕಂಪನಿಯು ಹೇಳಿರುವ ಪ್ರಕಾರ 997 ರೂ. ಗಳ ಈ ಯೋಜನೆಯು ಮಾರ್ಚ್‌ 1 ರಿಂದ ಮಾರ್ಚ್‌ 31, 2026 ರವರೆಗೆ ಸೀಮತವಾಗಿದೆ. ಈ ಅವಧಿಯಲ್ಲಿ ರೀಚಾರ್ಜ್ ಮಾಡುವವರು ಹೆಚ್ಚುವರಿ 14 ದಿನಗಳ ಮಾನ್ಯತೆ ಪಡೆದುಕೊಳ್ಳುತ್ತಾರೆ. ಈ ಆಫರ್‌ ಅವಧಿ ಮುಗಿದ ನಂತರ 997 ರೂ.ಗಳ ಈ ಯೋಜನೆಯು ಮೊದಲಿನಂತೆ 150 ದಿನಗಳ ಮಾನ್ಯತೆಯೊಂದಿಗೆ ಲಭ್ಯವಿರುತ್ತದೆ.

Exit mobile version