ಏರ್‌ಟೆಲ್‌, ಜಿಯೋಗೆ ಟಕ್ಕರ್‌ ಕೊಟ್ಟ ಬಿಎಸ್‌ಎನ್‌ಎಲ್‌ : BSNL5G PLAN ಅಗ್ಗ

BSNL 5G Plan : ಭಾರತ ಸರಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್‌ ಇದೀಗ ತನ್ನ 5ಜಿ ಸೇವೆಯನ್ನು ಆರಂಭಿಸಿದೆ. ಬಿಎಸ್‌ಎನ್‌ಎಲ್‌ ಈ ಮೂಲಕ ಏರ್‌ಟೆಲ್‌ ಹಾಗೂ ಜಿಯೋಗೆ ಟಕ್ಕರ್‌ ಕೊಟ್ಟಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ 5 ಫ್ಲ್ಯಾನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬಿಎಸ್‌ಎನ್‌ಎಲ್‌ (BSNL) ಕ್ವಾಂಟಮ್ 5G ಬಿಡುಗಡೆ ಆಗಿದೆ. Quantum-5G ಸೇವೆ ಭಾರತದಲ್ಲಿ ಅಧಿಕೃತ ಬಿಡುಗಡೆಯ ಘೋಷಣೆ ಆಗಿಲ್ಲ ಆದರೂ ಭಾರತ ಕೆಲವು ರಾಜ್ಯಗಳಲ್ಲಿ ಬಿಎಸ್‌ಎಲ್‌ಎನ್‌ 5ಜಿ ಸೇವೆ ಆರಂಭಿಸಿದೆ.

ಸೆಪ್ಟೆಂಬರ್ 2025ರ ಅಂತ್ಯಕ್ಕೆ ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ 5G ಸೇವೆಯನ್ನು ಬಿಎಸ್‌ಎನ್‌ಎಲ್‌ ಆರಂಭ ಮಾಡಲಿದೆ. 2024ರಲ್ಲಿ 5G ಆರಂಭದ ಗುರಿ ಇತ್ತು, ಆದರೆ 4G ನೆಟ್‌ವರ್ಕ್ ಅನ್ನು ಬಲಪಡಿಸುವತ್ತ ಗಮನಹರಿಸಿದ ಕಾರಣ ವಿಳಂಬವಾಗಿದೆ.

ಬಿಎಸ್‌ಎನ್‌ಎಲ್‌ TCS ಅಭಿವೃದ್ದಿ ಪಡಿಸಿ ಉಪಕರಣ ಬಳಕೆ ಮಾಡುತ್ತಿದೆ. ತನ್ನ 4G/5G ನೆಟ್‌ವರ್ಕ್ ಸಿದ್ದ ಪಡಿಸಿದೆ. 4G ಯಿಂದ ಸುಲಭವಾಗಿ 5G ನೆಟ್‌ವರ್ಕ್‌ಗೆ ಸಾಫ್ಟ್‌ವೇರ್ ಬದಲಾಯಿಸಬಹುದು.

BSNL 5G Plan : ಎಲ್ಲೆಲ್ಲಿ ಸಿಗುತ್ತದೆ ಬಿಎಸ್‌ಎನ್‌ಎಲ್‌ 5ಜಿ ?

ಬಿಎಸ್‌ಎನ್‌ಎಲ್‌ (BSNL) ಭಾರತದ ಹಲವು ನಗರಗಳಲ್ಲಿ 5G ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು, ಯಶಸ್ವಿ ಆಗಿದೆ. ದೆಹಲಿ, ಜೈಪುರ, ಲಕ್ನೋ, ಚಂಡೀಗಢ, ಭೋಪಾಲ್, ಕೋಲ್ಕತ್ತಾ, ಪಟ್ನಾ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಸೇವೆ ಸಿಗುತ್ತಿದೆ.

ದೆಹಲಿ ಸೇರಿ ಪ್ರಮುಖ ಮೆಟ್ರೋ ನಗರಗಳಲ್ಲಿ 5G “ನೆಟ್‌ವರ್ಕ್-ಆಸ್-ಎ-ಸರ್ವಿಸ್” (NaaS) ಮಾದರಿಯಲ್ಲಿ ಪ್ರಾರಂಭವಾಗಲಿದೆ. ತದನಂತರ ಭಾರತದಾದ್ಯಂತ ಜಾರಿಯಾಗಲಿದೆ.

Also Read : Airtel new recharge plan 2025 : ಜಿಯೋ ಬೆನ್ನಲ್ಲೇ ಕಡಿಮೆ ಬೆಲೆಯ ಹೊಸ ರಿಚಾರ್ಜ್‌ ಫ್ಲ್ಯಾನ್‌ ಘೋಷಿಸಿದ ಏರ್‌ಟೆಲ್

ಫಿಕ್ಸೆಡ್ ವೈರ್‌ಲೆಸ್ ಆಕ್ಸೆಸ್ (FWA) : ಭಾರತೀಯ ಸಂಚಾರ ನಿಗಮ ನಿಯಮಿತ ಈಗಾಗಲೇ 5ಜಿ ಜೊತೆ Quantum 5G FWA ಸ್ಥಿರ ಇಂಟರ್‌ನೆಟ್‌ ಸೇವೆ ನೀಡುತ್ತಿದೆ.

ಎಫ್‌ಡಬ್ಲ್ಯುಎ ಸೇವೆ ಬೆಂಗಳೂರು, ಪುಣೆ, ಗ್ವಾಲಿಯರ್, ಚಂಡೀಗಢ, ಪುದುಚೇರಿ ಮತ್ತು ವಿಶಾಖಪಟ್ಟಣಂನಂತಹ ನಗರಗಳಿಗೆ ಈ ಕ್ಯಾಲೆಂಡರ್ ವರ್ಷದಲ್ಲಿ ವಿಸ್ತರಿಸಲು ಯೋಜಿಸಲಾಗಿದೆ.

ಕರ್ನಾಟಕದ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿಯೂ BSNL 5G ಪ್ರಯೋಗ ಆರಂಭವಾಗಿದೆ.FWA ಸೇವೆಯ ವಿಸ್ತರಣೆಯು ಬೆಂಗಳೂರಿನಲ್ಲಿ ಕೂಡಾ ಲಭ್ಯವಾಗುವ ಸಾಧ್ಯತೆ ಇದೆ.

BSNL 5G ಪ್ಲ್ಯಾನ್‌ಗಳು ಹೇಗೆ?

BSNL 5G ಗಾಗಿ ನಿಖರವಾದ ಅಧಿಕೃತ ಪ್ಲ್ಯಾನ್‌ಗಳನ್ನು ಇನ್ನೂ ಘೋಷಿಸಿಲ್ಲ. ಆದರೆ, ಆನ್‌ಲೈನ್ ವರದಿಗಳ ಪ್ರಕಾರ, ಕೆಲವು ಸಂಭಾವ್ಯ 5G ಪ್ಲ್ಯಾನ್‌ಗಳು ಮತ್ತು ಬೆಲೆಗಳನ್ನು ಊಹಿಸಲಾಗಿದೆ:

Also Read : 200MP ಕ್ಯಾಮೆರಾ ಜೊತೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S25 : Samsung Galaxy S25 Ultra ಬೆಲೆ ಎಷ್ಟು ಗೊತ್ತಾ ?

ಪ್ರಿಪೇಯ್ಡ್ 5G ಪ್ಲ್ಯಾನ್‌ಗಳು (ಸಂಭಾವ್ಯ):

ಪೋಸ್ಟ್‌ಪೇಯ್ಡ್ 5G ಪ್ಲ್ಯಾನ್‌ಗಳು (ಸಂಭಾವ್ಯ):

ಈ ಪ್ಲ್ಯಾನ್‌ಗಳು ಮತ್ತು ಬೆಲೆಗಳು ಸದ್ಯಕ್ಕೆ ಕೇವಲ ವರದಿಗಳಲ್ಲಿ ಲಭ್ಯವಿರುವ ಮಾಹಿತಿ ಮಾತ್ರ. ಬಿಎಸ್‌ಎನ್‌ಎಲ್‌ (BSNL 5G) ಅಧಿಕೃತವಾಗಿ ಆದ ನಂತರದಲ್ಲಿ ಅಧಿಕೃತ ಯೋಜನೆಯ ಬೆಲೆ ಬಿಡುಗಡೆ ಆಗಲಿದೆ.

ಬಿಎಸ್‌ಎನ್‌ಎಲ್‌ 5G “ರೆಡಿ” ಸಿಮ್ ಕಾರ್ಡ್‌ಗಳ ಚಿತ್ರಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ.ಗ್ರಾಹಕರು 4G ಸಿಎಮ್‌ ಅನ್ನು 5G ಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ.

ಆನ್‌ಲೈನ್‌ನಲ್ಲಿ ಸಿಮ್ ಕಾರ್ಡ್ ಬುಕಿಂಗ್ ಸೇವೆಯನ್ನು ಕೆಲವು ಆಯ್ದ ಪ್ರದೇಶಗಳಲ್ಲಿ ಪ್ರಾರಂಭಿಸಲಾಗಿದೆ, ಅಲ್ಲಿ 90 ನಿಮಿಷಗಳಲ್ಲಿ ಡೋರ್‌ಸ್ಟೆಪ್ ಡೆಲಿವರಿ ಮತ್ತು KYC ಪ್ರಕ್ರಿಯೆಯೊಂದಿಗೆ ಸಿಮ್ ಲಭ್ಯವಾಗಲಿದೆ.

BSNL Beats Airtel Jio BSNL 5G Plan Cheaper in Kannada News

Exit mobile version