ಸೋಮಂತಡ್ಕ: ಸಾರಿಗೆ ಸಂಸ್ಥೆಯ ಅಧಿಕೃತ ಆದೇಶಕ್ಕೆ ಕಿಮ್ಮತ್ತಿಲ್ಲ? ಪ್ರಯಾಣಿಕರನ್ನು 7 ಕಿಮೀ ದೂರ ಸಾಗಿಸಿದ ಚಾಲಕನ ಹಠಮಾರಿ ಧೋರಣೆ

ಸೋಮಂತಡ್ಕವು ಶಾಲಾ-ಕಾಲೇಜುಗಳು, ಆಸ್ಪತ್ರೆಗಳು ಮತ್ತು ಬ್ಯಾಂಕುಗಳನ್ನು ಹೊಂದಿರುವ ಪ್ರಮುಖ ಪಟ್ಟಣವಾಗಿದೆ. ಚಾರ್ಮಾಡಿ, ಕಕ್ಕಿಂಜೆ ಮತ್ತು ಉಜಿರೆಯಂತೆ ಇದೂ ಒಂದು ಮುಖ್ಯ ಕೇಂದ್ರವಾಗಿದ್ದರೂ, ಸಾರಿಗೆ ಸಂಸ್ಥೆಯ ಸ್ಟೇಜ್ ಪಟ್ಟಿಯಲ್ಲಿ ಸೋಮಂತಡ್ಕದ ಹೆಸರನ್ನು ಕೈಬಿಟ್ಟಿರುವುದು ವಿಪರ್ಯಾಸ.

ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಮಂತಡ್ಕದಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಸ್ ಚಾಲಕ ಮತ್ತು ನಿರ್ವಾಹಕರ ಬೇಜವಾಬ್ದಾರಿತನ ಪರಾಕಾಷ್ಠೆ ತಲುಪಿದೆ. ಅಧಿಕೃತ ನಿಲುಗಡೆ ಆದೇಶ ಮತ್ತು ಸ್ಥಳದಲ್ಲಿ ಬೋರ್ಡ್ ಇದ್ದರೂ ಬಸ್ ನಿಲ್ಲಿಸದೆ, ಪ್ರಯಾಣಿಕರನ್ನು ಅನಿವಾರ್ಯವಾಗಿ 7 ಕಿ.ಮೀ ದೂರದ ಉಜಿರೆಯವರೆಗೆ ಕರೆದೊಯ್ದ ಘಟನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಯ ವಿವರ: ಆದೇಶವಿದ್ದರೂ ನಿಲ್ಲದ ಬಸ್

ಮೂಡಿಗೆರೆ ಡಿಪ್ಪೊಗೆ ಸೇರಿದ ಚಿಕ್ಕಮಗಳೂರು–ಮಂಗಳೂರು ಮಾರ್ಗದ ಬಸ್ (KA42 F2184) ರಾತ್ರಿ ಸುಮಾರು 8:05ರ ಸಮಯದಲ್ಲಿ ಸೋಮಂತಡ್ಕ ನಿಲ್ದಾಣದಲ್ಲಿ ನಿಲ್ಲಿಸದೆ ಮುಂದುವರಿದಿದೆ. ಪ್ರಯಾಣಿಕರು ಬಸ್ ನಿಲ್ಲಿಸುವಂತೆ ಕೋರಿದರೂ ಚಾಲಕ ಮತ್ತು ನಿರ್ವಾಹಕರು ಅದನ್ನು ಕಡೆಗಣಿಸಿದ್ದಾರೆ. ನಿಯಮದ ಪ್ರಕಾರ ಮುಂದಿನ ಸ್ಟೇಜ್‌ಗೆ ಟಿಕೆಟ್ ಪಡೆದವರು ಅದರ ಹಿಂದಿನ ನಿಲುಗಡೆಗಳಲ್ಲಿ ಇಳಿಯಲು ಅವಕಾಶವಿದ್ದರೂ, ಚಾಲಕ ಬಸ್ಸನ್ನು ನೇರವಾಗಿ 7 ಕಿ.ಮೀ ದೂರದ ಉಜಿರೆಗೆ ಕೊಂಡೊಯ್ದಿದ್ದಾನೆ. ಇದರಿಂದ ಮಧ್ಯದಲ್ಲಿ ಇಳಿಯಬೇಕಿದ್ದ ಪ್ರಯಾಣಿಕರು ರಾತ್ರಿ ವೇಳೆಯಲ್ಲಿ ತೀವ್ರ ಸಂಕಷ್ಟ ಅನುಭವಿಸಿದ್ದಾರೆ.

ಸೋಮಂತಡ್ಕಕ್ಕೆ ಏಕೀ ‘ಸವತಿ’ ಮತ್ಸರ?

ಸೋಮಂತಡ್ಕವು ಶಾಲಾ-ಕಾಲೇಜುಗಳು, ಆಸ್ಪತ್ರೆಗಳು ಮತ್ತು ಬ್ಯಾಂಕುಗಳನ್ನು ಹೊಂದಿರುವ ಪ್ರಮುಖ ಪಟ್ಟಣವಾಗಿದೆ. ಚಾರ್ಮಾಡಿ, ಕಕ್ಕಿಂಜೆ ಮತ್ತು ಉಜಿರೆಯಂತೆ ಇದೂ ಒಂದು ಮುಖ್ಯ ಕೇಂದ್ರವಾಗಿದ್ದರೂ, ಸಾರಿಗೆ ಸಂಸ್ಥೆಯ ಸ್ಟೇಜ್ ಪಟ್ಟಿಯಲ್ಲಿ ಸೋಮಂತಡ್ಕದ ಹೆಸರನ್ನು ಕೈಬಿಟ್ಟಿರುವುದು ವಿಪರ್ಯಾಸ. ಇಲ್ಲಿನ ಪ್ರಯಾಣಿಕರು ಕಡ್ಡಾಯವಾಗಿ 7 ಕಿ.ಮೀ ದೂರದ ಉಜಿರೆಯ ಟಿಕೆಟ್ ಪಡೆಯಬೇಕಾದ ಪರಿಸ್ಥಿತಿ ಇದೆ. ಟಿಕೆಟ್ ಪಡೆದರೂ ಬಸ್ ನಿಲ್ಲಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.

ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲ

ಈ ಭಾಗದ ನೂರಾರು ವಿದ್ಯಾರ್ಥಿಗಳು ವೇಗದೂತ ಬಸ್‌ಗಳ ನಿಲುಗಡೆಗಾಗಿ ಈ ಹಿಂದೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ವೇಗದೂತ ಬಸ್‌ಗಳು ನಿಲ್ಲದ ಕಾರಣ, ವಿದ್ಯಾರ್ಥಿಗಳು ಗ್ರಾಮೀಣ ಸಾರಿಗೆ ಬಸ್‌ಗಳಲ್ಲಿ ಫುಟ್‌ಬೋರ್ಡ್‌ನಲ್ಲಿ ನೇತಾಡುತ್ತಾ ಅಪಾಯಕಾರಿ ಪ್ರಯಾಣ ಮಾಡುತ್ತಿದ್ದಾರೆ.

Trekking New Rules: ಕರ್ನಾಟಕದ ಅರಣ್ಯ ಹಾದಿಗಳಲ್ಲಿ ಚಾರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟ: ಸುರಕ್ಷತೆಗಾಗಿ ಅರಣ್ಯ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ

ಸಾರ್ವಜನಿಕರ ಆಗ್ರಹ ಮತ್ತು ಎಚ್ಚರಿಕೆ

ಈ ಘಟನೆಯಿಂದ ಬೇಸತ್ತಿರುವ ಪ್ರಯಾಣಿಕರು ಮತ್ತು ಸ್ಥಳೀಯರು ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:

ಅಧಿಕೃತ ನಿಲುಗಡೆ ಬೋರ್ಡ್ ಮತ್ತು ಆದೇಶಗಳನ್ನೇ ಗಾಳಿಗೆ ತೂರುತ್ತಿರುವ ಸಿಬ್ಬಂದಿಗಳ ವರ್ತನೆ ಸಾರ್ವಜನಿಕ ಸಾರಿಗೆಯ ಮೇಲಿನ ವಿಶ್ವಾಸವನ್ನು ಕುಗ್ಗಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.

Exit mobile version