ಬಸ್​ ಅಗ್ನಿ ದುರಂತ ತಡೆಗೆ ಹೊಸ ಕ್ರಮ : ಬಸ್​ ಮಾಲೀಕರಿಗೆ ಈ 8 ನಿಯಮ ಪಾಲನೆ ಕಡ್ಡಾಯ

ರಾಜ್ಯದಲ್ಲಿ ಬಸ್​ ಅಗ್ನಿ ದುರಂತಗಳಿಗೆ ಒಳಗಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಅಪಾಯ ತಡೆಗೆ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. ಬಸ್​ಗಳಲ್ಲಿ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್‌ ಸಂಸ್ಥೆ ಪ್ರಯಾಣಿಕರ ಸುರಕ್ಷತೆ ಕುರಿತು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ಈ ನಿಯಮಗಳನ್ನು ಕಡಾಖಂಡಿತವಾಗಿ ಪಾಲಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್​ ಸೂಚನೆ ನೀಡಿದ್ದಾರೆ.

ಸ್ಲೀಪರ್​ ಬಸ್​ಗಳ ಮಾಲೀಕರು ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳು ಯಾವುವು ಎಂಬುದನ್ನು ನೋಡೋದಾದ್ರೆ, ಸ್ಲೀಪರ್​ ಬರ್ತ್​ಗಳಲ್ಲಿ ಸ್ಲೈಡರ್​ ತೆಗೆಯಬೇಕು. ತಿಂಗಳೊಳಗಾಗಿ ಫೈರ್​ ಡಿಟೆಕ್ಷನ್​ ಅಳವಡಿಕೆ ಮಾಡಿರಬೇಕು. 10 ಕೆ.ಜಿ ತೂಕದ ಅಗ್ನಿಶಾಮಕ ಸಾಧನ ಅಳವಡಿಕೆ ಮಾಡಿರಲೇಬೇಕು. ಚಾಲಕರ ಹಿಂಬದಿ ಡೋರ್​ ತೆಗೆಯಬೇಕು. ಅನುಮೋದಿತ ಟೆಸ್ಟಿಂಗ್​ ಏಜೆನ್ಸಿಯಿಂದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಪ್ರಯಾಣಿಕರ ಸೇಫ್ಟಿ ಮಾನದಂಡ ಇದ್ದರೆ ಮಾತ್ರ ಎಫ್​ಸಿ ಮಾಡಿಸಬೇಕು. ಬಸ್ ಕವಚ ನಿರ್ಮಾಣ ಸಂಸ್ಥೆ ಸಿಂಧುತ್ವ ಪರಿಶೀಲಿಸಿದ ನಂತರವೇ ನೋಂದಣಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಜನರಿಗೆ ಇತರ ಊರುಗಳ ಜನರಿಗಿಂತ ವರ್ಷಕ್ಕೆ 7 ದಿನ ಕಡಿಮೆ! ಏಕೆ ಗೊತ್ತಾ?  

ಇನ್ನು ಈ ವಿಚಾರವಾಗಿ ಮಾತನಾಡಿರುವ ಸಚಿವ ರಾಮಲಿಂಗಾರೆಡ್ಡಿ, ಎಸಿ ಬಸ್​ಗಳಲ್ಲಿ ಬಸ್​ ಕಾಣಿಸಿಕೊಂಡರೆ ಹೇಗೆ ನಂದಿಸಬೇಕು? ಎಂಬುದರ ಬಗ್ಗೆ ಮಾರ್ಗಸೂಚಿ ನೀಡಬೇಕು. ಪ್ರಯಾಣಿಕರು ಡೋರ್​ನಿಂದ ಜಂಪ್​ ಮಾಡಲು ಮೆಟ್ಟಿಲು ವ್ಯವಸ್ಥೆ ಆಗಬೇಕು. ಎಕ್ಸಿಟ್​ ಡೋರ್​ಗಳ ಬಳಿ ಯುವಕರು ಹಾಗೂ ಮಧ್ಯವಯಸ್ಕರಿಗೆ ಸೀಟು ನೀಡಬೇಕು. ಬೆಂಕಿ ಕಾಣಿಸಿಕೊಂಡ ಕೂಡಲೇ ಪ್ರಯಾಣಿಕರನ್ನು ಎಚ್ಚರಿಸುವ ಸಲುವಾಗಿ ಡ್ರೈವರ್​ಗೆ ಅಲಾರಂ ನೀಡಬೇಕು. ಈ ರೀತಿಯ ವ್ಯವಸ್ಥೆಗಳನ್ನು ಬಸ್​ಗಳಲ್ಲಿ ಮಾಡಿಸುವಂತೆ ಖಾಸಗಿ ಬಸ್​ ಮಾಲೀಕರು ಹಾಗೂ ಬಸ್​ ತಯಾರಕರಿಗೆ ಸೂಚನೆ ನೀಡಿದ್ದಾರೆ.

Exit mobile version