ರಾಜ್ಯಪಾಲರ ಗಣರಾಜ್ಯೋತ್ಸವ ಭಾಷಣದಲ್ಲಿ ಕೇಂದ್ರದ ವಿರುದ್ಧದ ಟೀಕೆಗೆ ಬ್ರೇಕ್!

Republic Day 2026 Governor Speech Today: ಬೆಂಗಳೂರು: ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷದ ಹಾದಿಯನ್ನು ಬದಿಗೊತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, 77ನೇ ಗಣರಾಜ್ಯೋತ್ಸವದ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಟೀಕೆಗಳನ್ನು ಕೈಬಿಡುವ ಮೂಲಕ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಯಾವುದೇ ಅಡೆತಡೆಯಿಲ್ಲದೆ ಸಂಪೂರ್ಣ ಭಾಷಣವನ್ನು ಓದಿದರು.

ಇತ್ತೀಚೆಗೆ ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿ ಕೇಂದ್ರದ ವಿರುದ್ಧ ತೀವ್ರ ಟೀಕೆಗಳಿದ್ದವು. ರಾಜ್ಯಪಾಲರು ಆ ಅಂಶಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದರೂ ಸರ್ಕಾರ ಒಪ್ಪಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ರಾಜ್ಯಪಾಲರು, ಭಾಷಣದ ಮೊದಲ ಮತ್ತು ಕೊನೆಯ ಸಾಲನ್ನು ಮಾತ್ರ ಓದಿ ಸದನದಿಂದ ಹೊರನಡೆದಿದ್ದರು. ಗಣರಾಜ್ಯೋತ್ಸವದ ಭಾಷಣದಲ್ಲೂ ಇಂತಹ ಟೀಕೆಗಳಿದ್ದರೆ ಓದುವುದಿಲ್ಲ ಎಂದು ರಾಜ್ಯಪಾಲರು ಮೊದಲೇ ಎಚ್ಚರಿಕೆ ನೀಡಿದ್ದರು.

ಕರ್ನಾಟಕ ಸರ್ಕಾರ vs ರಾಜ್ಯಪಾಲರು: ರಾಷ್ಟ್ರಪತಿ ತಲುಪಿದ ಸಂಘರ್ಷ

ಸರ್ಕಾರದ ಎಚ್ಚರಿಕೆಯ ನಡೆ

ಮತ್ತೊಂದು ಸುತ್ತಿನ ಸಂಘರ್ಷವನ್ನು ತಪ್ಪಿಸಲು ನಿರ್ಧರಿಸಿದ ರಾಜ್ಯ ಸರ್ಕಾರ, ಈ ಬಾರಿಯ ಭಾಷಣವನ್ನು ಸಂಪೂರ್ಣವಾಗಿ ರಾಜ್ಯದ ಅಭಿವೃದ್ಧಿ, ಜನಕಲ್ಯಾಣ ಯೋಜನೆಗಳು ಮತ್ತು ಸಂವಿಧಾನದ ಮೌಲ್ಯಗಳಿಗೆ ಸೀಮಿತಗೊಳಿಸಿತ್ತು.

ರಾಜ್ಯಪಾಲರ ಭಾಷಣದ ಪ್ರಮುಖಾಂಶಗಳು:

ಬಡ್ತಿ ಮೀಸಲಾತಿ, ಒಳ ಮೀಸಲಾತಿ ಮತ್ತು ದೇವನಹಳ್ಳಿಯ ರೈತರ ಭೂಸ್ವಾಧೀನ ಕೈಬಿಟ್ಟಿರುವುದನ್ನು ಪ್ರಸ್ತಾಪಿಸಿದ ರಾಜ್ಯಪಾಲರು, ಸರ್ಕಾರವು ಸರ್ವಜನಾಂಗದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಭಾಷಣ ಮುಕ್ತಾಯಗೊಳಿಸಿದರು.

Exit mobile version