ಸಿಲಿಕಾನ್​ ಸಿಟಿ ಮಂದಿಗೆ ಸಂಕ್ರಾಂತಿ ಗಿಫ್ಟ್​ : ಸೈಟುಗಳ ಸೆಟ್​ಬ್ಯಾಕ್​ ಇಳಿಕೆ ಮಾಡಿ ಮಹತ್ವದ ಆದೇಶ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೊಸ ಮನೆ ಕಟ್ಟೋ ಪ್ಲಾನ್​ ಹಾಕುತ್ತಿರುವವರಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್​ ನೀಡಿದೆ. ಸೆಟ್​ಬ್ಯಾಕ್​​​ ಅಂದರೆ ಒಂದು ಕಟ್ಟಡ ನಿರ್ಮಿಸಲು ಸುತ್ತಲೂ ಕಡ್ಡಾಯಾಗಿ ಬಿಡಬೇಕಿದ್ದ ಖಾಲಿ ಜಾಗವನ್ನು ಇನ್ಮುಂದೆ ಬಿಡಬೇಕು ಎಂಬ ಅವಶ್ಯಕತೆ ಇಲ್ಲ. ಜಾಗ ಖಾಲಿ ಬಿಡದೇ ಮನೆ ನಿರ್ಮಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದ್ದು ಸಿಟಿ ಮಂದಿ ಫುಲ್​ ಖುಷಿ ಆಗಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಅವಘಡ ಸಂಭವಿಸಿದ ಸಂದರ್ಭದಲ್ಲಿ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ 8 ರಿಂದ 40 ಅಡಿ ಖಾಲಿ ಜಾಗ ಬಿಡುವುದು ಕಡ್ಡಾಯವಾಗಿತ್ತು. ಆದರೆ ಇನ್ಮುಂದೆ ಇದರ ಅವಶ್ಯಕತೆ ಇಲ್ಲ ಎಂದು ಸರ್ಕಾರ ಹೇಳಿದ್ದು ಸೆಟ್​ಬ್ಯಾಕ್​ ಬಿಡದೇ ಸಮಸ್ಯೆ ಎದುರಿಸುತ್ತಿದ್ದ ಮನೆ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಮುಂದುವರಿದ ಫೆಬ್ರವರಿ 1 ರ ಸಂಪ್ರದಾಯ : ಈ ಬಾರಿ ಭಾನುವಾರದಂದು ಕೇಂದ್ರ ಬಜೆಟ್​ ಮಂಡನೆ

ಈ ವಿಚಾರವಾಗಿ ಮಾತನಾಡಿದ ಜಿಬಿಎ ಚೀಫ್​ ಕಮಿಷನರ್ ಮಹೇಶ್ವರ್​ ರಾವ್​, 600 ಚದರ ಅಡಿವರೆಗಿನ ಜಾಗದಲ್ಲಿ ಮನೆ ನಿರ್ಮಿಸಲು ಇನ್ಮುಂದೆ ಕೇವಲ 0.60 ಮೀಟರ್​ನಷ್ಟು ಜಾಗ ಬಿಟ್ಟರೆ ಸಾಕು. 1500 ಚದರ ಅಡಿಯವರೆಗಿನ ಜಾಗದಲ್ಲಿ ಮನೆ ನಿರ್ಮಾಣಕ್ಕೆ 2.5 ಅಡಿಗೆ ಇಳಿಕೆ ಮಾಡಿದ್ದೇವೆ.. 40 ಸಾವಿರ ಚದರ ಅಡಿವರೆಗಿನ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಜಾಗದ 8% ನಷ್ಟು ಸೆಟ್ ಬ್ಯಾಕ್ ವ್ಯಾಪ್ತಿಗೆ ಇಳಿದಿದೆ. ಹೀಗಾಗಿ ಸೈಟುಗಳ ಮಾಲೀಕರು ಮನೆ ನಿರ್ಮಾಣ ಮಾಡುವಾಗ ಮೊದಲಿನಷ್ಟು ಸೆಟ್​ಬ್ಯಾಕ್​ ಜಾಗ ಬಿಡಬೇಕು ಎಂದೇನಿಲ್ಲ ಎಂದು ಹೇಳಿದ್ದಾರೆ .

Exit mobile version