ಬೆಂಗಳೂರಿನಲ್ಲಿ ಇನ್ಮುಂದೆ ಲಂಡನ್​ ಅನುಭವ : ಸಿಟಿಯಲ್ಲಿ ಸಂಚರಿಸಲಿದೆ ಡಬಲ್​ ಡೆಕ್ಕರ್​ ಬಸ್​

ರಾಜ್ಯ ರಾಜಧಾನಿ ಬೆಂಗಳೂರಿನ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಠಿಯಿಂದ ಲಂಡನ್​ ಮಾದರಿಯ ಡಬಲ್​ ಡೆಕ್ಕರ್​ ಸೇವೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಬಸ್​ಗೆ ಸಚಿವ ಎಚ್​.ಕೆ ಪಾಟೀಲ ಚಾಲನೆ ನೀಡಿದ್ರು.

ಮೈಸೂರು ದಸರಾ ಸಂದರ್ಭದಲ್ಲಿ ಎಲ್ಲರ ಕಣ್ಮನ ಸೆಳೆದಿದ್ದ ಈ ಬಸ್​ ಇನ್ಮುಂದೆ ರಾಜ್ಯ ರಾಜಧಾನಿಯಲ್ಲೂ ಸಂಚರಿಸಲಿದೆ. ಕೇವಲ 180 ರೂಪಾಯಿ ಪಾವತಿಸಿ ಈ ಬಸ್​ ಏರುವ ಮೂಲಕ ಸಿಟಿ ಮಂದಿ ಲಂಡನ್​ ಮಾದರಿಯ ಪ್ರಯಾಣದ ಅನುಭವ ಪಡೆಯಬಹುದಾಗಿದೆ.

ಐಷಾರಾಮಿ ಆಸನಗಳು, ಸೌಂಡ್​ ಸಿಸ್ಟಂ ಸೇರಿದಂತೆ ನಾನಾ ಸೌಕರ್ಯಗಳನ್ನು ಬಸ್​ಗೆ ನೀಡಲಾಗಿದೆ. ಪ್ರಯಾಣಿಕರು ಆನ್​ಲೈನ್​ ಇಲ್ಲವೇ ದೂರವಾಣಿ ಕರೆ ಮೂಡಕ ಸೀಟು ಬುಕ್ ಮಾಡಿ ದಿನವಿಡೀ ಪ್ರಯಾಣಿಸಬಹುದಾಗಿದೆ.

ಇದನ್ನೂ ಓದಿ: ಬಸ್​ ಅಗ್ನಿ ದುರಂತ ತಡೆಗೆ ಹೊಸ ಕ್ರಮ : ಬಸ್​ ಮಾಲೀಕರಿಗೆ ಈ 8 ನಿಯಮ ಪಾಲನೆ ಕಡ್ಡಾಯ

ಈ ವಿಚಾರವಾಗಿ ಮಾತನಾಡಿದ ಸಚಿವ ಎಚ್​.ಕೆ ಪಾಟೀಲ, ಬೆಂಗಳೂರು ಇದುವರೆಗೂ ಒಂದು ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿಲ್ಲ. ಇಲ್ಲಿ ವಿಧಾನಸೌಧ ಸೇರಿದಂತೆ ಸಾಕಷ್ಟು ವಿಶ್ವ ಮಟ್ಟದಲ್ಲಿ ಖ್ಯಾತಿಪಡೆದ ಸ್ಥಳಗಳಿವೆ. ಇನ್ಮುಂದೆ ಈ ಬಸ್​ ಪ್ರಯಾಣದ ಮೂಲಕ ಪ್ರವಾಸದ ಅನುಭವ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.

Exit mobile version