MLA Gururaj Gantihole : ಬೈಂದೂರು ಬಿಜೆಪಿ ಶಾಸಕ ಗುರುರಾಜ್‌ ಗಂಟಿಹೊಳೆ ಕಾರು ಅಪಘಾತ

ಶಿವಮೊಗ್ಗ / ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಬಿಜೆಪಿ ಶಾಸಕ ಗುರುರಾಜ್‌ ಗಂಟಿಹೊಳೆ (MLA Gururaj Gantihole) ಅವರ ಕಾರು ಅಪಘಾತ (MLA Car Accident)ಕ್ಕೆ ಒಳಗಾಗಿದೆ. ಬೆಂಗಳೂರಿನಿಂದ ಉಡುಪಿಗೆ ತೆರಳುವ ವೇಳೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರು ಜಖಂಗೊಂಡಿದೆ.

ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ (Hosanagar) ತಾಲೂಕು ವ್ಯಾಪ್ತಿಯ ರಿಪ್ಪನ್‌ಪೇಟೆ (Rippenpet) ಸಮೀಪದಲ್ಲಿರುವ ಕೋಡೂರಿನಲ್ಲಿ ಈ ಘಟನೆ ನಡೆದಿದೆ. ಉಡುಪಿ ಕಡೆಗೆ ತೆರಳುವ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಆದರೆ ಶಾಸಕರು ಹಾಗೂ ಕಾರಿನಲ್ಲಿ ಇದ್ದರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Also Read : ಪ್ರಧಾನ ಮಂತ್ರಿ ಕಿಸಾನ್ ಯೋಜನೆ : PM Kissan 20ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ

ಶಿವಮೊಗ್ಗದ ಕಡೆಗೆ ಶಾಸಕರ ಕಾರು ಚಲಿಸುತ್ತಿದ್ದ ವೇಳೆಯಲ್ಲಿ ಜಾನುವಾರು ಅಡ್ಡಬಂದಿದೆ. ಈ ವೇಳೆಯಲ್ಲಿ ಶಾಸಕ ಗುರುರಾಜ್‌ ಗಂಟಿಹೊಳೆ ಅವರ ಕಾರು ಸೇರಿದಂತೆ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಆದರೆ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ.

ಉಡುಪಿಗೆ ತೆರಳಬೇಕಾಗಿದ್ದ ಶಾಸಕರು ಸದ್ಯ ಬೇರೊಂದು ಕಾರಿನ ಮೂಲಕ ಬೈಂದೂರಿಗೆ ತೆರಳಿದ್ದಾರೆ. ಈ ಕುರಿತು ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Also Read : ಗೃಹಲಕ್ಷ್ಮೀ ಯಜಮಾನಿಯರಿಗೆ ಭರ್ಜರಿ ಗುಡ್‌ ನ್ಯೂಸ್‌

Byndoor MLA Gururaj Gantihole Car Accident Rippanpet near Shivamogga in Kannada News

Exit mobile version