ದೇವೇಗೌಡರ ಮರು ಆಯ್ಕೆಗೆ ಬಿಜೆಪಿ ಹೈಕಮಾಂಡ್ ಒಲವು: ರಾಜ್ಯ ಬಿಜೆಪಿಯಿಂದ ವಿರೋಧ!

Rajyasabha Seat to HD Deve Gowda | Karnataka BJP Leaders: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾದ ಡಿ.ವಿ. ಸದಾನಂದ ಗೌಡ (ಡಿವಿಎಸ್) ಅವರ ಹೆಸರನ್ನು ಸೂಚಿಸಲು ಒಲವು ತೋರಿದ್ದಾರೆ.

ರಾಜ್ಯಸಭೆಗೆ ಕರ್ನಾಟಕದಿಂದ (Rajyasabha Seat to HD Deve Gowda) ತೆರವಾಗಲಿರುವ ಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು (HD Deeve Gowda) ಮತ್ತೊಂದು ಅವಧಿಗೆ ಆಯ್ಕೆ ಮಾಡುವ ಕುರಿತು ದೆಹಲಿಯ ಬಿಜೆಪಿ ವರಿಷ್ಠರ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ. ಆದರೆ, ಈ ಪ್ರಸ್ತಾವನೆಗೆ ರಾಜ್ಯ ಬಿಜೆಪಿ ನಾಯಕರಿಂದ (Karnataka BJP Leaders) ತೀವ್ರ ವಿರೋಧ ವ್ಯಕ್ತವಾಗಿದೆ. ಇಂದು ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಮೈತ್ರಿ ಪಕ್ಷದ ನಾಯಕರಿಗಿಂತ ಸ್ವಂತ ಪಕ್ಷದ ನಾಯಕರಿಗೇ ಈ ಸ್ಥಾನವನ್ನು ಬಿಟ್ಟುಕೊಡುವುದು ಸೂಕ್ತ ಎಂಬ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರವೇನು?

ರಾಜ್ಯ ಬಿಜೆಪಿ ನಾಯಕರು ದೇವೇಗೌಡರ ಹೆಸರನ್ನು ಕೈಬಿಟ್ಟು, ಪಕ್ಷದ ನಿಷ್ಠಾವಂತ ನಾಯಕರನ್ನು ರಾಜ್ಯಸಭೆಗೆ ಕಳುಹಿಸಲು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.

ದೆಹಲಿ ನಾಯಕರ ‘ದೂರದೃಷ್ಟಿ’ ಮತ್ತು ಮೈತ್ರಿ ಲಾಭ

ರಾಜ್ಯ ನಾಯಕರು ವಿರೋಧಿಸುತ್ತಿದ್ದರೂ, ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರ ಮಟ್ಟದಲ್ಲಿ ಗೌಡರ ಆಯ್ಕೆಯ ಬಗ್ಗೆ ಬೇರೆಯದೇ ಲೆಕ್ಕಾಚಾರವಿದೆ:

ಸಂಪ್ರದಾಯದಂತೆ ರಾಜ್ಯ ಘಟಕದಿಂದ ಸಂಭಾವ್ಯರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಆದರೆ ಅಂತಿಮ ತೀರ್ಮಾನವನ್ನು ಮೋದಿ-ಷಾ ಜೋಡಿಯೇ ತೆಗೆದುಕೊಳ್ಳಬೇಕಿದೆ. ದೇವೇಗೌಡರು ಕೂಡ ಮತ್ತೊಂದು ಅವಧಿಗೆ ಸಂಸತ್ತಿನ ಮೇಲ್ಮನೆ ಪ್ರವೇಶಿಸಲು ಉತ್ಸುಕರಾಗಿದ್ದು, ಬಿಜೆಪಿಯ ಸಂಖ್ಯಾಬಲದ ಸಹಕಾರವಿಲ್ಲದೆ ಇದು ಸಾಧ್ಯವಿಲ್ಲ.

ರಾಜ್ಯ ಘಟಕವು ತನ್ನ ಹಠಕ್ಕೆ ಬಿದ್ದು ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆಯೇ ಅಥವಾ ಹೈಕಮಾಂಡ್ ಸೂಚನೆಯಂತೆ ದೇವೇಗೌಡರಿಗೆ ದಾರಿ ಮಾಡಿಕೊಡುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ.

[youtube https://www.youtube.com/watch?v=ApMaJ-7pro4]

Exit mobile version