ಈ ಸಲ ಕಪ್‌ ನಮ್ದೆ..! ಐಪಿಎಲ್‌ನಲ್ಲಿ ಆರ್‌ಸಿಬಿ 4ನೇ ಬಾರಿಗೆ ಫೈನಲ್‌ ಎಂಟ್ರಿ : IPL 2025ನಲ್ಲಿ ಹೇಗಿತ್ತು RCB ಪಯಣ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (Indian Premier Leauge) ನಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡ ಬರೋಬ್ಬರಿ 8 ವರ್ಷಗಳ ಬಳಿಕ ಐಪಿಎಲ್‌ ಫೈನಲ್‌ ಪ್ರವೇಶಿಸಿದೆ. ಪಂಜಾಬ್‌ ಕಿಂಗ್ಸ್‌ (RCB vs PBKS) ತಂಡವನ್ನು ಸೋಲಿಸುವ ಮೂಲಕ ನಾಲ್ಕನೇ ಬಾರಿಗೆ ಐಪಿಎಲ್‌ (IPL 2025 Final) ಪ್ರವೇಶಿಸಿರುವ ಆರ್‌ಸಿಬಿ ಈ ಬಾರಿ ಐಪಿಎಲ್‌ ಪ್ರಶಸ್ತಿ ಪಡೆಯುವ ಅವಕಾಶ ಗಿಟ್ಟಿಸಿಕೊಂಡಿದೆ.

Image Credit : BCCI

ಚಂಡಿಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಮುಲ್ಲನ್ಪುರ್ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್‌ ಕಿಂಗ್ಸ್‌ ವಿರುದ್ದದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹಜಲ್‌ ವುಡ್‌, ಸೂಯಾಶ್ ಶರ್ಮಾ ಹಾಗೂ ಯಶ್‌ ದಯಾಳ್‌ ಅವರ ಮಾರಕ ದಾಳಿಗೆ ತತ್ತರಿಸಿ 8 ವಿಕೆಟ್‌ ಗಳ ಅಂತರದಿಂದ ಪಂಜಾಬ್‌ ಕಿಂಗ್ಸ್‌ ತಂಡವನ್ನು ಸೋಲಿಸುವ ಮೂಲಕ ಫೈನಲ್‌ ಗೆ ಎಂಟ್ರಿ ಕೊಟ್ಟಿದೆ.

Image Credit : BCCi

ಐಪಿಎಲ್‌ ನಲ್ಲಿ 2009, 2011, 2016 ಹಾಗೂ 2025ರಲ್ಲಿ ಒಟ್ಟು ನಾಲ್ಕು ಬಾರಿಗೆ ಆರ್‌ಸಿಬಿ ಫೈನಲ್‌ ಪ್ರವೇಶಿಸಿದೆ. ಆದರೆ ಇದುವರೆಗೂ ಆರ್‌ಸಿಬಿ ತಂಡ ಐಪಿಲ್‌ ಪ್ರಶಸ್ತಿಯನ್ನು ಗೆದ್ದಿಲ್ಲ, ಆದರೆ ಈ ಬಾರಿ ಬೆಂಗಳೂರು ತಂಡಕ್ಕೆ ಪ್ರಶಸ್ತಿ ಗೆಲ್ಲಲು ಒಂದೊಳ್ಳೆ ಅವಕಾಶ ಬಂದೊದಗಿದೆ. ಆರ್‌ಸಿಬಿ ಫೈನಲ್‌ ಪ್ರವೇಶಿಸುತ್ತಲೇ ಅಭಿಮಾನಿಗಳು ಈ ಬಾರಿ ಕಪ್‌ ನಮ್ದೆ ಅಂತಿದ್ದಾರೆ.

ಐಪಿಎಲ್‌ 2025ರಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಸೋಲಿಸುವ ಮೂಲಕ ಆರ್‌ಸಿಬಿ ತಂಡ ಈ ಬಾರಿಯ ಐಪಿಎಲ್‌ ಅಭಿಯಾನ ಆರಂಭಿಸಿತ್ತು. ಕ್ವಾಲಿಫೈಯರ್‌ ಪಂದ್ಯದಲ್ಲಿ ಅಗ್ರಸ್ಥಾನದಲ್ಲಿ ಇರುವ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಸೋಲಿನ ರುಚಿ ತೋರಿಸಿದೆ. ಈ ಬಾರಿಯ ಐಪಿಎಲ್‌ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿರುವ ಬೆಂಗಳೂರು ತಂಡ ಫೈನಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌, ಮಂಬೈ ಇಂಡಿಯನ್ಸ್‌ ಅಥವಾ ಗುಜರಾತ್‌ ಟೈಟಾನ್ಸ್‌ ತಂಡವನ್ನು ಎದುರಿಸಲದೆ.

Image Credit : BCCi

RCB vs PBKS ಐಪಿಎಲ್‌ 2025ನಲ್ಲಿ ಹೇಗಿತ್ತು ಆರ್‌ಸಿಬಿ ಅಭಿಯಾನ :

Also Read : KL Rahul : ಐಪಿಎಲ್‌ನಲ್ಲಿ ಶತಕ : 2026 ಟಿ20 ವಿಶ್ವಕಪ್‌ ಆಡ್ತಾರೆ ಕೆಎಲ್‌ ರಾಹುಲ್‌

Also Read : IPL 2025 : ಐಪಿಎಲ್‌ ನಿಂದ ಬಿಸಿಸಿಐ ಎಷ್ಟು ಆದಾಯ ತೆರಿಗೆ ಪಾವತಿಸುತ್ತೆ ಗೊತ್ತಾ ?

RCB vs PBKS – RCB enters the final for the 4th time in IPL: How was RCB’s journey in IPL 2025 ? in Kannada News

Exit mobile version