ಸಾಲಯಿಂದ ತತ್ತರಿಸಿದ್ದೀರಾ ? ಮನೆಯ ಈ ಮೂಲೆಯನ್ನು ಸ್ವಚ್ಛಗೊಳಿಸಿ; ಆರ್ಥಿಕ ಸಂಕಷ್ಟಕ್ಕಿದೆ ವಾಸ್ತು ಪರಿಹಾರ

vastu tips : ವಾಸ್ತು ತಜ್ಞರ ಪ್ರಕಾರ, ಮನೆಯ ಒಂದು ನಿರ್ದಿಷ್ಟ ಮೂಲೆಯಲ್ಲಿರುವ ಅಶುದ್ಧತೆ ಅಥವಾ ತಪ್ಪು ನಿರ್ಮಾಣವು ನಿಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸಬಹುದು.

vastu tips : ಎಷ್ಟೇ ಸಂಪಾದನೆ ಮಾಡಿದ್ರೂ ಕೈಯಲ್ಲಿ ಹಣ ಉಳಿಯುತ್ತಿಲ್ಲ, ಮಾಡಿದ ಸಾಲ ತೀರುತ್ತಿಲ್ಲ ಅನ್ನೋದು ಹಲವರ ಕೊರಗು. ಆರ್ಥಿಕ ಮುಗ್ಗಟ್ಟು ಕೇವಲ ದುಡಿಮೆಯ ಮೇಲೆ ಮಾತ್ರವಲ್ಲ, ನಾವು ವಾಸಿಸುವ ಮನೆಯ ವಾಸ್ತು ದೋಷಗಳ ಮೇಲೂ ಅವಲಂಬಿತವಾಗಿರುತ್ತದೆ ಎಂಬುದು ಶಾಸ್ತ್ರಗಳ ನಂಬಿಕೆ.

ವಾಸ್ತು ತಜ್ಞರ ಪ್ರಕಾರ, ಮನೆಯ ಒಂದು ನಿರ್ದಿಷ್ಟ ಮೂಲೆಯಲ್ಲಿರುವ ಅಶುದ್ಧತೆ ಅಥವಾ ತಪ್ಪು ನಿರ್ಮಾಣವು ನಿಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸಬಹುದು. ಹಾಗಾದ್ರೆ ಆ ಮೂಲೆ ಯಾವುದು, ಯಾವ ಮೂಲೆಯನ್ನು ಸ್ವಚ್ಚಗೊಳಿಸಬೇಕು ಅನ್ನೋ ಮಾಹಿತಿ ಇಲ್ಲಿದೆ.

vastu tips : ಕುಬೇರನ ಮೂಲೆ ಯಾವುದು ?

ಮನೆಯ ಉತ್ತರ ದಿಕ್ಕನ್ನು (North) ಧನ ದೇವತೆ ಕುಬೇರನ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಈಶಾನ್ಯ (North-East) ಮೂಲೆಯು ದೇವತೆಗಳ ವಾಸಸ್ಥಾನ. ಈ ಎರಡು ದಿಕ್ಕುಗಳು ಮನೆಯ ಆರ್ಥಿಕ ಸ್ಥಿತಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಿಮ್ಮ ಮನೆಯ ಈ ಮೂಲೆಯಲ್ಲಿ ಕಸದ ಬುಟ್ಟಿ, ಹಳೆಯ ಪತ್ರಿಕೆಗಳು ಅಥವಾ ಒಡೆದ ವಸ್ತುಗಳಿದ್ದರೆ ಕೂಡಲೇ ಅವುಗಳನ್ನು ಅಲ್ಲಿಂದ ತೆಗೆಯಿರಿ.

ಇದನ್ನೂ ಓದಿ : ಮನೆಯಲ್ಲಿ ವಿಪರೀತ ಜಗಳಗಳಾಗುತ್ತಿದೆಯಾ? ಹಾಗಾದ್ರೆ ಈ 3 ಜಾಗಗಳಲ್ಲಿ ಈ ಬದಲಾವಣೆ ಮಾಡಿ

ಸಾಲದ ಬಾಧೆ ತಡೆಯಲು ಇಲ್ಲಿವೆ ಸರಳ ಟಿಪ್ಸ್‌

ಇದನ್ನೂ ಓದಿ : Vastu Tips : ನಿಮ್ಮ ಮನೆಯಲ್ಲಿ ಹಣದ ಮಳೆ ಸುರಿಯಬೇಕೆ ? ಈ ಸರಳ ವಾಸ್ತು ಬದಲಾವಣೆಗಳನ್ನು ಇಂದೇ ಮಾಡಿ

ಸಾಲ ತೀರಿಸುವಾಗ ಈ ತಪ್ಪು ಮಾಡಬೇಡಿ!

ಜೋತಿಷ್ಯ ಶಾಸ್ತ್ರದ ಪ್ರಕಾರ, ಸಾಲದ ಕಂತುಗಳನ್ನು ಪಾವತಿಸಲು ಮಂಗಳವಾರ ಅತ್ಯಂತ ಪ್ರಶಸ್ತವಾದ ದಿನ. ಆದರೆ ಎಂದಿಗೂ ಮಂಗಳವಾರ ಸಾಲ ಪಡೆಯಬೇಡಿ. ಸಂಬಳ ಬಂದ ತಕ್ಷಣ ಮೊದಲ ಕಂತನ್ನು ಮಂಗಳವಾರ ಪಾವತಿಸುವುದರಿಂದ ಸಾಲದ ಹೊರೆ ಬೇಗನೆ ಇಳಿಯುತ್ತದೆ.

ವಾಸ್ತು ಶಾಸ್ತ್ರವು ನಂಬಿಕೆ ಮತ್ತು ಧನಾತ್ಮಕ ಶಕ್ತಿಯ ಮೇಲೆ ಆಧಾರಿತವಾಗಿದೆ. ಮನೆಯ ಪರಿಸರವನ್ನು ಪವಿತ್ರವಾಗಿ ಇಟ್ಟು ಕೊಳ್ಳುವುದು ಕೇವಲ ಆರ್ಥಿಕ ಲಾಭವಲ್ಲದೆ, ಮಾನಸಿಕ ಶಾಂತಿಯನ್ನೂ ನೀಡುತ್ತದೆ.

vastu tips for debt relief home cleaning remedies kannada news

Exit mobile version