Peacock Feather Vastu Tips: ಮನೆಯಲ್ಲಿ ನವಿಲು ಗರಿ ಇಟ್ಟುಕೊಳ್ಳುವುದರಿಂದಲೂ ಒಲಿಯುತ್ತೆ ಲಕ್ಷ್ಮಿ ಕಟಾಕ್ಷ

Peacock Feather Vastu Tips: ನೋಡಿದ ತಕ್ಷಣ ಮನಸೂರೆಗೊಳ್ಳುವ ಗರಿ ಎಂದರೆ ನವಿಲು ಗರಿ. ನವಿಲಿನ ನಾಟ್ಯ ಎಷ್ಟು ಚೆಂದವೋ, ನವಿಲು ಗರಿಯ ಅಂದ ಅದಕ್ಕಿಂತಲೂ ಹೆಚ್ಚು.

ಶ್ರೀಕೃಷ್ಣ ಎಂದ ತಕ್ಷಣ ಥಟ್ಟನೆ ನೆನಪಿಗೆ ಬರುವುದೆಂದರೆ ಕೊಳಲು ಮತ್ತು ನವಿಲು ಗರಿ. ಶ್ರೀಕೃಷ್ಣನಿಗೆ ನವಿಲು ಗರಿ ಎಂದರೆ ತುಂಬಾ ಇಷ್ಟ.

ಅದಕ್ಕಾಗಿಯೇ ಅವನು ನವಿಲು ಗರಿಯನ್ನು ತನ್ನ ಶಿರದ ಮೇಲೆ ಅಲಂಕರಿಸಿಕೊಂಡಿದ್ದಾನೆ. ಇನ್ನು ನವಿಲು ಸುಬ್ರಹ್ಮಣ್ಯ ಸ್ವಾಮಿಯ ವಾಹನವೂ ಹೌದು.

ದೇವರುಗಳಿಗೂ ಪ್ರಿಯವಾದ ನವಿಲು ಗರಿಯನ್ನು ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ನಮ್ಮಲ್ಲಿ ಬಹಳಷ್ಟು ಜನರಿಗೆ ತಮ್ಮ ಬಾಲ್ಯದ ದಿನಗಳಲ್ಲಿ ನವಿಲು ಗರಿಯನ್ನು ಪುಸ್ತಕ, ನೋಟ್‌ಬುಕ್‌ಗಳಲ್ಲಿ ಇಟ್ಟುಕೊಂಡಿರುವುದು ನೆನಪಿರಬಹುದು.

ಹಾಗೆ ನವಿಲು ಗರಿಯನ್ನು ಇಟ್ಟುಕೊಳ್ಳುವುದರಿಂದ ಸರಸ್ವತಿ ದೇವಿ ಒಲಿಯುತ್ತಾಳೆ ಎಂಬ ನಂಬಿಕೆಯಿತ್ತು. ಅದೇ ರೀತಿ ಕೆಲವರು ತಮ್ಮ ಮನೆಯಲ್ಲಿ ನವಿಲು ಗರಿಯನ್ನು ಇಟ್ಟುಕೊಂಡಿರುವುದನ್ನು ಕೂಡಾ ನೀವು ಗಮನಿಸಿರಬಹುದು.

ವಾಸ್ತು ಶಾಸ್ತ್ರವೂ ಸಹ ನವಿಲು ಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭವನ್ನು ತರುತ್ತದೆ ಎಂದು ಹೇಳಿದೆ.

ಹಾಗಾದರೆ ವಾಸ್ತು ಪ್ರಕಾರ ನವಿಲು ಗರಿಯನ್ನು ಮನೆಯ ಯಾವ ದಿಕ್ಕಿಗೆ ಇಡುವುದು ಒಳ್ಳೆಯದು ಮತ್ತು ಅದನ್ನು ಯಾವ ರೀತಿ ಇಟ್ಟುಕೊಳ್ಳಬೇಕು ಎಂದು ತಿಳಿದುಕೊಳ್ಳೋಣ.

ಇದನ್ನೂ ಓದಿ: Aquarium Vastu Tips: ಅದೃಷ್ಟವನ್ನು ತರುವ ಅಕ್ವೇರಿಯಂನ ಅಂದದ ಮೀನುಗಳು

Peacock Feather Vastu Tips: ನವಿಲು ಗರಿಯನ್ನು ಮನೆಯ ಯಾವ ದಿಕ್ಕಿಗೆ ಇಡಬೇಕು?

ವಾಸ್ತು ಶಾಸ್ತ್ರದ ಪ್ರಕಾರ ನವಿಲು ಗರಿಯನ್ನು ಮನೆಯ ನೈಋತ್ಯ ಮತ್ತು ಪೂರ್ವ ದಿಕ್ಕಿಗೆ ಇಡುವುದು ಉತ್ತಮ ಸ್ಥಳವೆಂದು ಪರಿಗಣಿಸಲಾಗಿದೆ.

ನೀವು ನಿಮ್ಮ ಮಲಗುವ ಕೋಣೆಯಲ್ಲಿ ಒಳಾಂಗಣ ಸಸ್ಯಗಳನ್ನಿಟ್ಟು ಅಲಂಕರಿಸಿದ್ದರೆ, ಒಂದು ಮಡಿಕೆಯಲ್ಲಿ ನವಿಲು ಗರಿಗಳನ್ನು ಸಹ ಹಾಕಿ ಅಲಂಕರಿಸಬಹುದು. ಅದನ್ನು ಕೂಡಾ ನೈಋತ್ಯ ದಿಕ್ಕಿಗೆ ಇಡಿ.

ಇದರಿಂದ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ ಉತ್ತಮವಾಗಿರುತ್ತದೆ. ಲಕ್ಷ್ಮಿ ದೇವಿ ಸದಾ ಮನೆಯಲ್ಲಿ ನೆಲೆಸುತ್ತಾಳೆ. ಸುಖ, ಶಾಂತಿ ಮತ್ತು ಸಮೃದ್ಧಿ ಒಲಿದು ಬರುತ್ತದೆ.

ಇದನ್ನೂ ಓದಿ: Vastu Tipe : ಕನಸಿನ ಮನೆ ಕಟ್ಟಿಸೋಕೆ ಜಾಗ ಪರಿಶೀಲಿಸುತ್ತಿದ್ದೀರಾ ? ಒಂದು ನಿಮಿಷ ತಾಳಿ, ವಾಸ್ತುಶಾಸ್ತ್ರ ಏನು ಹೇಳುತ್ತೆ ?

Peacock Feather Vastu Tips: ವಾಸ್ತು ಪ್ರಕಾರ ನವಿಲು ಗರಿಯೊಂದಿಗೆ ಈ ತಪ್ಪುಗಳನ್ನು ಮಾಡಬೇಡಿ

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ನ್ಯೂಸ್‌ ನೆಕ್ಸ್ಟ್‌ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಅನಧಿಕೃತವಾಗಿ ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ. ಈ ಕುರಿತು ಎಚ್ಚರಿಕೆ ಇರಲಿ)

Vastu Tips keeping peacock feathers at home know the benefits and rules in kannada

Exit mobile version