Aquarium Vastu Tips: ಅದೃಷ್ಟವನ್ನು ತರುವ ಅಕ್ವೇರಿಯಂನ ಅಂದದ ಮೀನುಗಳು

Aquarium Vastu Tip s: ಇತ್ತೀಚಿನ ದಿನಗಳಲ್ಲಿ ಮನೆ, ಕಚೇರಿಯಲ್ಲಿ ಅಕ್ವೇರಿಯಂ ಇಟ್ಟುಕೊಳ್ಳುವುದು ಟ್ರೆಂಡ್‌ ಆಗಿದೆ. ಗಾಜಿನ ಪೆಟ್ಟಿಗೆಯೊಳಗಿರುವ ಚಂದ ಚಂದದ ಮೀನುಗಳು ಅತ್ತಿಂದಿತ್ತ ಓಡಾಡುವಾಗ ಮನಸ್ಸಿಗೆ ಮುದ ನೀಡುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರವೂ ಮನೆಯಲ್ಲಿ ಅಕ್ವೇರಿಯಂ ಇಟ್ಟುಕೊಳ್ಳುವುದು ಶುಭವೆಂದು ಪರಿಗಣಿಸಲಾಗಿದೆ.

ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಡಿಸಿ, ವಾತಾವರಣವನ್ನು ಯಾವಾಗಲೂ ಆಹ್ಲಾದಕರವಾಗಿರುವಂತೆ ಮಾಡುತ್ತದೆ. ಆದರೆ ಅಕ್ವೇರಿಯಂ ಇಟ್ಟುಕೊಳ್ಳುವವರು ಅದರ ಕಡೆಗೆ ವಿಶೇಷ ಗಮನ ಹರಿಸಬೇಕು. ಇಲ್ಲವಾದಲ್ಲಿ ಋಣಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆ.

ಅಕ್ವೇರಿಯಂ ಅನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ. ಆದ್ದರಿಂದ ಅಕ್ವೇರಿಯಂ ಅನ್ನು ಎಲ್ಲಿ ಇಡುವುದರಿಂದ ಶುಭ ಮತ್ತು ಎಲ್ಲಿ ಇಡುವದರಿಂದ ಅಶುಭ ಫಲಗಳು ಉಂಟಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.

Aquarium Vastu Tips : ಅಕ್ವೇರಿಯಂನಲ್ಲಿ ಎಷ್ಟು ಮೀನುಗಳು ಇರಬೇಕು ?

ವಾಸ್ತು ಶಾಸ್ತ್ರದ ಪ್ರಕಾರ ಅಕ್ವೇರಯಂ ಅನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭ ಫಲವನ್ನು ಕೊಡುತ್ತದೆ. ಆದರೆ ಅದರಲ್ಲಿ ಎಷ್ಟು ಮೀನುಗಳಿರಬೇಕು ಎಂಬುದು ಬಹಳ ಮುಖ್ಯವಾಗಿದೆ.

ಅಕ್ವೇರಿಯಂ ಒಳಗೆ 9 ಮೀನುಗಳನ್ನು ಇಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಅದು ಯಾವಾಗಾಲೂ ಮನೆಯಲ್ಲಿ ಸಂತೋಷ, ಸಮೃದ್ಧಿ ಕಾಪಾಡಿಕೊಳ್ಳಲು ನೆರವಾಗುತ್ತದೆ.

ವಾಸ್ತು ಪ್ರಕಾರ 8 ಗೋಲ್ಡ್‌ ಫಿಶ್‌ ಮತ್ತು ಒಂದು ಕಪ್ಪು ಮೀನನ್ನು ಅಕ್ವೇರಿಯಂನಲ್ಲಿ ಇಡುವುದು ತುಂಬಾ ಒಳ್ಳೆಯದು.

ಈ ರೀತಿಯಲ್ಲಿ ಅಕ್ವೇರಿಯಂ ಅನ್ನು ಜೋಡಿಸಿದರೆ ಕುಟುಂಬ ಸದಸ್ಯರ ಗೌರವ ಹೆಚ್ಚಾಗುತ್ತದೆ. ಮನೆಗೆ ಅದೃಷ್ಟ ಬರುತ್ತದೆ. ಜೊತೆಗೆ ಮನೆಯಲ್ಲಿ ಸಂತೋಷದ ವಾತಾವರಣ ನೆಲೆಸುತ್ತದೆ.

Aquarium Vastu Tips : ಅಕ್ವೇರಿಯಂ ಅನ್ನು ಯಾವ ದಿಕ್ಕಿಗೆ ಇಡಬೇಕು ?

ಅಕ್ವೇರಿಯಂ ಅನ್ನು ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಅತ್ಯಂತ ಶುಭವೆಂದು ನಂಬಲಾಗಿದೆ.

ವಾಸ್ತುಶಾಸ್ತ್ರದಲ್ಲಿ, ಉತ್ತರ ದಿಕ್ಕನ್ನು ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿದ ದಿಕ್ಕು ಎಂದು ನಂಬಲಾಗಿದೆ. ಹಾಗಾಗಿ ನೀವು ಅಕ್ವೇರಿಯಂ ಅನ್ನು ಈ ದಿಕ್ಕಿನಲ್ಲಿ ಇಟ್ಟರೆ, ಅದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಯನ್ನು ತರುತ್ತದೆ.

ಅಷ್ಟೇ ಅಲ್ಲಾ ಆರ್ಥಿಕ ಸ್ಥಿತಿಯೂ ಸಹ ಬಲಗೊಳ್ಳುತ್ತದೆ. ಅಕ್ವೇರಿಯಂ ಅನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ.

ಆದರೆ ವಾಸ್ತು ಪ್ರಕಾರ, ಅಕ್ವೇರಿಯಂ ಅನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ತಪ್ಪಾಗಿ ಇಡಬಾರದು. ಹಾಗೆ ಮಾಡುವುದರಿಂದ ಅಶುಭ ಫಲಿತಾಂಶಗಳು ಉಂಟಾಗಬಹುದು ಮತ್ತು ಮಾನಸಿಕ ಒತ್ತಡ ಹೆಚ್ಚಾಗಬಹುದು.

Also Read : Vastu Tipe : ಕನಸಿನ ಮನೆ ಕಟ್ಟಿಸೋಕೆ ಜಾಗ ಪರಿಶೀಲಿಸುತ್ತಿದ್ದೀರಾ ? ಒಂದು ನಿಮಿಷ ತಾಳಿ, ವಾಸ್ತುಶಾಸ್ತ್ರ ಏನು ಹೇಳುತ್ತೆ ?

Aquarium Vastu Tips : ಅಕ್ವೇರಿಯಂ ಇಡಲು ಇರುವ ವಾಸ್ತು ನಿಯಮಗಳು

ಮನೆಯಲ್ಲಿ ಅಕ್ವೇರಿಯಂ ಇಡುವುದರಿಂದ ಸಿಗುವ ಶುಭ ಪ್ರಯೋಜನಗಳು

ಜ್ಯೋತಿಷ್ಯ ಶಾಸ್ತ್ರವು ಹೇಳುವಂತೆ ಮನೆಯಲ್ಲಿ ಮೀನುಗಳನ್ನು ಸಾಕುವುದು ಮತ್ತು ಅವುಗಳಿಗೆ ಆಹಾರ ನೀಡುವುದರಿಂದ ಜಾತಕದಲ್ಲಿ ಗ್ರಹಗಳ ಅನುಕೂಲಕರ ಸ್ಥಾನವು ಕಾಯ್ದುಕೊಳ್ಳುತ್ತದೆ.

Also Read : Vastu Homes : ಮನೆ ಹೇಗಿರಬೇಕು ? ಏನು ಹೇಳುತ್ತೆ ವಾಸ್ತುಶಾಸ್ತ್ರ

ಗೃಹದೋಷಗಳು ನಿವಾರಣೆಯಾಗುತ್ತದೆ. ಕುಟುಂಬ ಸದಸ್ಯರ ಜೀವನದಲ್ಲಿ ಸಕಾರಾತ್ಮಕ ಶಕ್ತಿಯು ಹರಡುತ್ತದೆ. ಅಕ್ವೇರಿಯಂ ಅನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಮನೆಯ ಸದಸ್ಯರ ಗೌರವ ಹೆಚ್ಚಾಗುತ್ತದೆ.

ಎಲ್ಲೋ ಸಿಲುಕಿಕೊಂಡ ನಿಮ್ಮ ಹಣ ನಿಮ್ಮ ಕೈಸೇರುತ್ತದೆ. ವಾಸ್ತು ನಿಯಮಗಳನ್ನು ಪಾಲಿಸಿ ನೀವು ಮನೆಯಲ್ಲಿ ಅಕ್ವೇರಿಯಂ ಅನ್ನು ಇಟ್ಟುಕೊಂಡರೆ ಆರ್ಥಿಕ ಲಾಭವಾಗುವ ಸಾಧ್ಯತೆಯಿದೆ.

ಜೊತೆಗೆ ಜೀವನದಲ್ಲಿರುವ ಅನೇಕ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ವ್ಯಕ್ತಿಯ ಅದೃಷ್ಟ ಒಲಿದುಬರುತ್ತದೆ. ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ನ್ಯೂಸ್‌ ನೆಕ್ಸ್ಟ್‌ ಕನ್ನಡ ಪುಷ್ಟಿಕರಿಸುವುದಿಲ್ಲ.

ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Vastu Tips benefits of keeping an aquarium in home follow these vastu rules in kannada

Exit mobile version