Vastu Tips: ನಿಮ್ಮ ಜೀವನವೂ ಕಲರ್‌ಫುಲ್‌ ಆಗಿರಲು ಹೋಳಿ ಹಬ್ಬದ ಮೊದಲು ಈ ಕೆಲಸ ತಪ್ಪದೇ ಮಾಡಿ

Holi Vastu Tips: ಭಾರತದಲ್ಲಿ ಪ್ರತಿ ತಿಂಗಳು ಯಾವುದಾದರೂ ಒಂದು ಹಬ್ಬದ ಆಚರಣೆ ಇದ್ದೇ ಇರುತ್ತದೆ. ಯಾವುದೇ ಹಬ್ಬವಿರಲಿ ಮೊದಲು ಮನೆಯನ್ನು ಸ್ವಚ್ಛಗೊಳಿಸುವುದು ರೂಢಿ.

ಹಾಗೆ ಪ್ರತಿ ಸಲ ಸ್ವಚ್ಛಗೊಳಿಸಿದರೂ ಕೆಲವು ವಸ್ತುಗಳು ಮನೆಯಲ್ಲಿಯೇ ಉಳಿದುಬಿಡುತ್ತವೆ. ಹಬ್ಬದ ಮೊದಲು ಮನೆಯನ್ನು ಸ್ವಚ್ಛಗೊಳಿಸುವ ಏಕೈಕ ಉದ್ದೇಶವೆಂದರೆ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವುದಾಗಿದೆ.

ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಿದಾಗ ಹಬ್ಬ ಆಚರಣೆಯ ಪೂರ್ಣ ಫಲ ದೊರಕುತ್ತದೆ. ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಈ ವರ್ಷ ಹೋಳಿಯನ್ನು ಮಾರ್ಚ್‌ 4 ರಂದು ಆಚರಿಸಲಾಗುತ್ತಿದೆ.

ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಹಬ್ಬದ ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. ಬೇಡವಾದ ಹಾಗೂ ನಕಾರಾತ್ಮಕ ಶಕ್ತಿಯನ್ನ ಹೆಚ್ಚಿಸುವ ವಸ್ತುಗಳನ್ನು ಮನೆಯಿಂದ ಹೊರ ಹಾಕಬೇಕು ಎನ್ನುವುದು ವಾಸ್ತು ನಿಯಮವಾಗಿದೆ.

ಹಾಗಾದರೆ ಬಣ್ಣಗಳ ಹಬ್ಬ ಹೋಳಿಯ ಮೊದಲು ಮನೆಯಿಂದ ಹೊರಹಾಕಲೇ ಬೇಕಾದ ವಸ್ತುಗಳು ಯಾವುವು ಎಂದು ನೋಡೋಣ.

ಈ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ

ಬಣ್ಣಗಳ ಹಬ್ಬ ಹೋಳಿ ಇನ್ನೇನು ಸಮೀಪಿಸುತ್ತಿದೆ. ಆದ್ದರಿಂದ ಮನೆಯ ಸ್ವಚ್ಛತೆಯ ಕಡೆಗೆ ಗಮನ ಹರಿಸಲೇಬೇಕಾಗಿದೆ. ಮನೆಯಲ್ಲಿ ಮುರಿದ ವಸ್ತುಗಳಿದ್ದರೆ ಅದನ್ನು ಮೊದಲು ಹೊರಗೆ ಎಸೆಯಬೇಕು. ಮುರಿದ ಗಡಿಯಾರ, ಹರಿದ ಹಳೆ ಚಪ್ಪಲಿಗಳನ್ನಂತು ಮನೆಯಲ್ಲಿ ಇಟ್ಟುಕೊಳ್ಳಲೇ ಬೇಡಿ. ಅಡುಗೆ ಮನೆಯಲ್ಲಿ ಬಳಸುವ ಪಾತ್ರೆ, ಪಿಂಗಾಣಿ ಕಪ್‌ಗಳು ಒಡೆದಿದ್ದರೆ ಅವುಗಳನ್ನು ಕೂಡಾ ಎಸೆಯಿರಿ. ಮುರಿದ, ಹಾಳಾದ, ಹಳೆಯ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅವುಗಳನ್ನು ಹೊರ ಹಾಕುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಸಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸಲು ಅನುಕೂಲ ಮಾಡಿಕೊಡುತ್ತದೆ.

ಇದನ್ನೂ ಓದಿ: Kamanna: ಗ್ರಹಣ ಕಾಲದಲ್ಲಿ ಕಾಮಣ್ಣನ ದರ್ಶನ ಇರುತ್ತಾ? ನವಲಗುಂದಕ್ಕೆ ಬರೋ ಭಕ್ತಾದಿಗಳಿಗೆ ವಿಶೇಷ ಸೂಚನೆ!

ದೇವರ ಕೋಣೆಯ ಸ್ವಚ್ಛತೆಗೆ ವಿಶೇಷ ಗಮನ ಕೊಡಿ

ಒಂದು ಮನೆಯ ಬಹು ಮುಖ್ಯ ಭಾಗ ದೇವರ ಕೊಣೆ. ಅದರ ಸ್ವಚ್ಛತೆಯ ಬಗ್ಗೆ ಸದಾ ಹೆಚ್ಚಿನ ಗಮನ ಹರಿಸಲೇಬೇಕು. ಅದರಲ್ಲೂ ವಿಶೇಷ ಹಾಗೂ ಹಬ್ಬದ ಸಮಯದಲ್ಲಿ ದೇವರ ಕೋಣೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು. ವಾಸ್ತು ಪ್ರಕಾರವೂ ದೇವರ ಕೋಣೆ ಬಹಳ ಮಹತ್ವದ್ದಾಗಿದೆ. ಪೂಜೆ ಮಾಡುವ ಸ್ಥಳದಲ್ಲಿ ಮುರಿದ ವಿಗ್ರಹಗಳಿದ್ದರೆ ಮೊದಲು ಅದನ್ನು ತೆಗೆದು ಹಾಕಿ. ನಕಾರಾತ್ಮಕ ಶಕ್ತಿ ತಕ್ಷಣ ಮನೆಯ ಹೊರ ಹೋಗುತ್ತದೆ. ದೇವರ ಕೋಣೆಯ ಕಿಟಕಿ ಗಾಜುಗಳು ಮುರಿದಿದ್ದರೆ ಅದನ್ನು ತಕ್ಷಣ ಬದಲಿಸಿ. ದೇವರ ಪೂಜೆಗೆ ಉಪಯೋಗಿಸುವ ಪಾತ್ರೆಗಳನ್ನು ಸ್ವಚ್ಛಗೊಳಿಸಿ. ದೀಪ, ಗಂಟೆ, ಶಂಖ ಇತ್ಯಾದಿ ದೇವರ ಪೂಜೆಗೆ ಬಳಕೆಯಾಗುವ ವಸ್ತುಗಳನ್ನು ಸ್ವಚ್ಛಗೊಳಿಸಿ. ದೇವರ ಕೋಣೆ ಆಕರ್ಷಕವಾಗಿ ಕಾಣುವಂತೆ ಸಜ್ಜುಗೊಳಿಸಿ. ಹೀಗೆ ಮಾಡುವುದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ.

Exit mobile version