Chanakya Niti: ನಿರಂತರ ವೈಫಲ್ಯಕ್ಕೆ ಹೆದರಬೇಡಿ, ಆಚಾರ್ಯ ಚಾಣಕ್ಯರ ಈ ಸಲಹೆಗಳನ್ನು ನೆನಪಿಟ್ಟುಕೊಳ್ಳಿ

Chanakya Niti: ಈ ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಯಶಸ್ಸಿನ ಹಿಂದೆ ಓಡುತ್ತಾನೆ. ಆ ಓಟದಲ್ಲಿ ಕೆಲವರು ಮುಂದೆ ಸಾಗಿ ಗುರಿ ತಲುಪಿದರೆ, ಇನ್ನು ಕೆಲವರು ಹಿಂದೆ ಉಳಿಯುತ್ತಾರೆ. ಹಾಗೆ ಹಿಂದೆ ಉಳಿದವರಿಗೆ ಸೋಲಿನ ಭಯ ಕಾಡುತ್ತಿರುತ್ತದೆ.

ತಮ್ಮ ಯಶಸ್ಸಿನ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲವೇನೋ ಎಂಬ ಶಂಕೆ ಮನದಲ್ಲಿ ಏಳುತ್ತದೆ. ಇದರಿಂದ ಅವರು ಒತ್ತಡಕ್ಕೆ ಒಳಪಡುತ್ತಾರೆ. ಅವರ ಮೇಲೆ ಅವರಿಗೆ ಭರವಸೆ ಕಳೆದು ಹೋಗುತ್ತದೆ.

ಅನೇಕ ಬಾರಿ ಹಗಲಿರುಳು ಕಷ್ಟಪಟ್ಟರೂ ಬಯಸಿದ ಫಲಿತಾಂಶ ದೊರಕುವುದಿಲ್ಲ. ಅಂತಹ ಸಮಯದಲ್ಲಿ ನಕಾರಾತ್ಮಕ ಯೋಚನೆಗಳು ಮನಸ್ಸಿನಲ್ಲಿ ಉಳಿಯುತ್ತದೆ.

ಇದೇ ಮುಂದೆ ಆತ್ಮವಿಶ್ವಾಸದ ಮೇಲೂ ಬಲವಾದ ಪೆಟ್ಟು ಕೊಡುತ್ತದೆ. ಇಂತಹ ಸಮಯದಲ್ಲಿ ತಮ್ಮನ್ನು ತಾವು ಸಕಾರಾತ್ಮಕಗೊಳಿಸಿಕೊಂಡು ಸವಾಲುಗಳನ್ನು ಎದುರಿಸುವುದು ಹೇಗೆ?

ಈ ವಿಚಾರದ ಬಗ್ಗೆ ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಂತಹ ಪರಿಸ್ಥಿತಿಯಿಂದ ಹೊರಬರಲು ಸಲಹೆಗಳನ್ನು ನೀಡಿದ್ದಾರೆ.

ಅರ್ಥ ಶಾಸ್ತ್ರದ ಮಹಾನ್‌ ವಿದ್ವಾಂಸರೆಂದು ಕರೆಯಲ್ಪಡುವ ಚಾಣಕ್ಯರು ಅವರ ಜೀವಿತಾವಧಿಯಲ್ಲಿ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದು ಇಂದಿಗೂ ಬಹಳ ಜನಪ್ರಿಯ.

ಅದನ್ನು ಬಹಳಷ್ಟು ಜನರು ಅನುಸರಿಸುತ್ತಾರೆ. ಮಾನವನ ಜೀವನ, ಯಶಸ್ಸು ಹಾಗೂ ವೈಫಲ್ಯದ ಬಗ್ಗೆ ಅದರಲ್ಲಿ ಸುವಿವರವಾಗಿ ಬರೆದಿದ್ದಾರೆ.

ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿ ತನ್ನ ಗುರಿ ಸಾಧಿಸಲು ಮೊದಲು ಮಾಡಬೇಕಾದದ್ದು ಏನು? ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳೇನು? ಎಂಬುದನ್ನು ತಿಳಿಯೋಣ.

ಇದನ್ನೂ ಓದಿ: ಹೊಸ ವರ್ಷದಲ್ಲಿ ನಿಮ್ಮ ಅದೃಷ್ಟ ಬದಲಿಸಲಿವೆ 4 ಸಸ್ಯಗಳು: ಈ ದಿಕ್ಕಿನಲ್ಲಿ ನೆಡುವುದನ್ನು ಮಾತ್ರ ಮರೆಯಬೇಡಿ

ಯಶಸ್ಸು ಗಳಿಸಲು ಆಚಾರ್ಯ ಚಾಣಕ್ಯರು ನೀಡುವ ಸಲಹೆಗಳು

Exit mobile version