ಮಕ್ಕಳಿಗೆ ‘ಜಾಲಿ ರಾಂಚರ್ಸ್​’ ಚಾಕಲೇಟ್​ ಕೊಡ್ತಿದ್ದೀರಾ : ಇದರಲ್ಲಿದೆ ಕ್ಯಾನ್ಸರ್​ಕಾರಕ ಅಂಶ

ಮಕ್ಕಳಿಗೆ ಹೆಚ್ಚಾಗಿ ಇಷ್ಟವಾಗುವ ಮಿಠಾಯಿಗಳ ಪೈಕಿ ಚಾಲಿ ರಾಂಚರ್ಸ್ ಕೂಡ ಒಂದು. ಅಮೆರಿಕ ಮೂಲದ ಕಂಪನಿ ಮಾಲೀಕತ್ವದ ಇವುಗಳು ಜೆಲ್ಲಿ ರೀತಿಯ ಕ್ಯಾಂಡಿ, ಗಮ್ಮೀಸ್​, ಲಾಲಿಪಾಪ್​ ಸೇರಿದಂತೆ ನಾನಾ ಬಗೆಯಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಆದರೆ ಇದೀಗ ಈ ಜಾಲಿ ರಾಂಚರ್ಸ್ ಕುರಿತಂತೆ ಆಘಾತಕಾರಿ ವಿಚಾರವೊಂದು ಹೊರಬಿದ್ದಿದೆ. ಇದರಲ್ಲಿ ಕ್ಯಾನ್ಸರ್​ಕಾರಕ ಅಂಶ ಇರುವುದು ಪತ್ತೆಯಾಗಿದ್ದು ಬ್ರಿಟನ್​ನ ಮಾರುಕಟ್ಟೆಗಳಲ್ಲಿ ಜಾಲಿ ರಾಂಚರ್ಸ್ ಮಾರಾಟಕ್ಕೆ ನಿರ್ಬಂಧ ಹೇರಲು ಸಿದ್ಧತೆ ನಡೆಸಲಾಗಿದೆ.

ಬ್ರಿಟನ್​ನ ಆಹಾರ ಸುರಕ್ಷತಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಜಾಲಿ ರಾಂಚರ್ಸ್​ಗಳಲ್ಲಿ mineral Oil Aromatic Hydrocarbons ಹಾಗೂ Mineral Oil Saturated Hydrocarbons ಗಳೆಂಬ ಎರಡು ಹಾನಿಕಾರಕ ರಾಸಾಯನಿಕಗಳು ಪತ್ತೆಯಾಗಿದೆ. ಇವುಗಳಲ್ಲಿ MOAH ಮನುಷ್ಯನ ಡಿಎನ್​ಎ ವ್ಯವಸ್ಥೆಯನ್ನೇ ಹಾಳುಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದರೆ MOSH ದೀರ್ಘಕಾಲದ ಕಾಯಿಲೆಗಳನ್ನು ತಂದೊಡ್ಡುತ್ತದೆ ಎನ್ನಲಾಗಿದೆ.
ಜಾಲಿ ರಾಂಚರ್ಸ್​ನಲ್ಲಿ ಪತ್ತೆಯಾದ ರಾಸಾಯನಿಕಗಳ ಪೈಕಿ ಒಂದಾದ MOAH ಕ್ಯಾನ್ಸರ್​ಕಾರಕ ಅಂಶಗಳನ್ನು ಹೊಂದಿದ್ದು ಸಣ್ಣ ಪ್ರಾಯದಲ್ಲಿ ಇದನ್ನು ಅತಿಯಾಗಿ ಸೇವಿಸುವ ಮಕ್ಕಳ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಹಾಗೂಭವಿಷ್ಯದಲ್ಲಿ ಈ ಮಕ್ಕಳು ಕ್ಯಾನ್ಸರ್​ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗುಯಿಲಿನ್ ಬಾರ್ ಸಿಂಡ್ರೋಮ್: ನರಮಂಡಲದ ಮೇಲೆ ದಾಳಿ ಮಾಡುವ ನಿಗೂಢ ಕಾಯಿಲೆ; ಲಕ್ಷಣವೇನು, ತಡೆಯುವುದು ಹೇಗೆ?

ಜಾಲಿ ರಾಂಚರ್ಸ್ ತಯಾರಿಕಾ ಕಂಪನಿ ದಿ ಹೆರ್ಷೆ ಈಗಾಗಲೇ ಬ್ರಿಟನ್​ಗೆ ತನ್ನ ಉತ್ಪನ್ನಗಳ ರಫ್ತನ್ನು ಸ್ಥಗಿತಗೊಳಿಸಿದೆ. ಭಾರತದಲ್ಲಿಯೂ ಆದಷ್ಟು ಬೇಗ ಈ ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.

Exit mobile version