ಕಾರ್ಕಳ ರಾಜಕೀಯಕ್ಕೆ ರಾಕೇಶ್ ಶೆಟ್ಟಿ ಎಂಟ್ರಿ : ಸಿದ್ದರಾಮಯ್ಯ ಭೇಟಿಯ ರಹಸ್ಯವೇನು ಗೊತ್ತಾ ?

ಕಾರ್ಕಳ ಕಾಂಗ್ರೆಸ್ ಒಳಗಿನ ನಿಜವಾದ ಪೈಪೋಟಿ ಇರೋದು ರಾಕೇಶ್‌ ಶೆಟ್ಟಿ, ಕಿರಣ್‌ ಹೆಗ್ಡೆ ಮತ್ತು ಮಂಜುನಾಥ ಪೂಜಾರಿ ನಡುವೆ ನಡೆಯುತ್ತಿದೆ ಎನ್ನುತ್ತಿದೆ ಕಾಂಗ್ರೆಸ್‌ ಮೂಲಗಳು.

ಕಾರ್ಕಳ : Karkala politics: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಕಳ ಭೇಟಿ ಇದೀಗ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಅದ್ರಲ್ಲೂ ಪವರ್‌ ಟಿವಿಯ ಮುಖ್ಯಸ್ಥ ರಾಕೇಶ್‌ ಶೆಟ್ಟಿ ಅವರ ನಿವಾಸದಲ್ಲಿ ಸಿದ್ದರಾಮಯ್ಯ ಅವರಿಗೆ ಆತಿಥ್ಯ ನೀಡಿರುವುದು ಕೇವಲ ಸೌಜನ್ಯದ ಭೇಟಿ ಅಲ್ಲಾ ಅನ್ನೋ ಮಾತು ಕೇಳಿಬರ್ತಾ ಇದ್ದು, ಮುಂದಿನ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ಅನ್ನೋ ಚರ್ಚೆ ಕಾರ್ಕಳದಲ್ಲಿ ಕೇಳಿಬರ್ತಿದೆ.

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ 2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿ ಹಲವು ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರಾದ ಕಿರಣ್‌ ಹೆಗ್ಡೆ, ಮಂಜುನಾಥ ಪೂಜಾರಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಈ ನಡುವಲ್ಲೇ ಸಿಎಂ ಸಿದ್ದರಾಮಯ್ಯ ಭೇಟಿಯ ಬೆನ್ನಲ್ಲೇ ರಾಕೇಶ್‌ ಶೆಟ್ಟಿ ಹೆಸರು ಹರಿದಾಡುತ್ತಿದೆ.

ಕಾರ್ಕಳ ಕ್ಷೇತ್ರದಿಂದ ಸುನಿಲ್‌ ಕುಮಾರ್‌ ಶಾಸಕರಾಗಿದ್ದಾರೆ. ಕಳೆದ ಒಂದು ದಶಕಗಳಿಗೂ ಅಧಿಕ ಕಾಲದಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಗೆಲುವು ಕಾಣುವುದಕ್ಕೆ ಸಾಧ್ಯವಾಗಿಲ್ಲ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಕೇಶ್‌ ಶೆಟ್ಟಿಗೆ ನ್ಯಾಯಾಲಯ ಮೂರು ತಿಂಗಳ ಕಾಲ ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು.

Also Read : ಗ್ಯಾರಂಟಿ ಯೋಜನೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಪೆಟ್ಟು : ಡಿಸಿಎಂ ಡಿ.ಕೆ ಶಿವಕುಮಾರ್​

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಅವರ ಜೊತೆಗೆ ರಾಕೇಶ್‌ ಶೆಟ್ಟಿ ಸ್ನೇಹ ಬೆಳೆಸಿಕೊಂಡಿದ್ದು, ಮುನಿಯಾಲು ಪರ ಚುನಾವಣಾ ಅಖಾಡಕ್ಕೂ ಧುಮುಕಿದ್ದರು. ಆದರೆ ಈ ಬಾರಿ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಕೂಡ ಕಾರ್ಕಳ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಅವರ ಬಲ – ದೌರ್ಬಲ್ಯಗಳನ್ನು ಅಳೆಯುವ ಉದ್ದೇಶದಿಂದಲೇ ರಾಕೇಶ್‌ ಶೆಟ್ಟಿ ಆಪ್ತರಾಗಿದ್ದರು ಅನ್ನೋ ಆರೋಪವೂ ಕೇಳಿಬರುತ್ತಿದೆ. ಇನ್ನು ರಾಜಕೀಯಕ್ಕೆ ಎಂಟ್ರಿ ಕೊಡುವ ಕಾರಣದಿಂದಲೇ ಕಾರ್ಕಳ ಎಣ್ಣೆಹೊಳೆಯಲ್ಲಿರುವ ರಾಕೇಶ್‌ ಶೆಟ್ಟಿ ತಮ್ಮ ಭವ್ಯ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಕರೆಯಿಸಿಕೊಂಡಿದ್ದರು. ಆದರೆ ಸಿಎಂ ಭೇಟಿ ನೀಡಿದ ಸಂದರ್ಭದಲ್ಲಿ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಅವರು ಕೂಡ ಜೊತೆಗೆ ಇದ್ರು. ಆದರೆ ಇದ್ಯಾವುದು ಮುನಿಯಾಲು ಅವರ ಅರಿವಿಗೆ ಬಂದಂತಿಲ್ಲ.

Also Read: ಸಿದ್ದರಾಮಯ್ಯ ಬಣದಿಂದ ವಿದೇಶಿ ಪ್ರವಾಸ : ನಮ್ಮ ದುಡ್ಡು ನಮ್ಮಿಷ್ಟ ಎಂದ ‘ಕೈ’ ನಾಯಕರು

ಕಳೆದ ಬಾರಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿಆದರೆ ಈ ಬಾರಿ ಕಾರ್ಕಳ ಕಾಂಗ್ರೆಸ್‌ನಲ್ಲಿ ಕಿರಣ್ ಹೆಗ್ಡೆ ಮತ್ತು ಮಂಜುನಾಥ್ ಪೂಜಾರಿ ಕೂಡ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಒಳಗಿನ ನಿಜವಾದ ಪೈಪೋಟಿ ಇರೋದು ರಾಕೇಶ್‌ ಶೆಟ್ಟಿ, ಕಿರಣ್‌ ಹೆಗ್ಡೆ ಮತ್ತು ಮಂಜುನಾಥ ಪೂಜಾರಿ ನಡುವೆ ನಡೆಯುತ್ತಿದೆ ಎನ್ನುತ್ತಿದೆ ಕಾಂಗ್ರೆಸ್‌ ಮೂಲಗಳು.

ಒಟ್ಟಾರೆ, ಕಾರ್ಕಳ ರಾಜಕೀಯ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ರಾಕೇಶ್ ಶೆಟ್ಟಿಯ ಮುಂದಿನ ಹೆಜ್ಜೆಗಳ ಮೇಲೆ ಕಾಂಗ್ರೆಸ್ ವಲಯ ನಿಗಾ ವಹಿಸಿರುವುದು ಸ್ಪಷ್ಟವಾಗಿದೆ.

Exit mobile version