ಕೊನೆಗೂ ರಾಹುಲ್​ ಗಾಂಧಿ ಜೊತೆ ಮಾತುಕತೆ ನಡೆಸುವಲ್ಲಿ ಡಿಕೆಶಿ ಯಶಸ್ವಿ : ಮಹತ್ವದ ಚರ್ಚೆ

ಕಳೆದ 2-3 ತಿಂಗಳಿನಿಂದ ಡಿಸಿಎಂ ಡಿ.ಕೆ ಶಿವಕುಮಾರ್​ ಬಹಿರಂಗವಾಗಿಯೇ ರಾಜ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಲಾಬಿ ನಡೆಸುತ್ತಲೇ ಇದ್ದಾರೆ. ಆದರೆ ವರಿಷ್ಠರು ಮಾತ್ರ ಡಿಸಿಎಂ ಡಿ.ಕೆ ಶಿವಕುಮಾರ್ ಕೈಗೆ ಸಿಗದೇ ಓಡಾಡಿಕೊಂಡಿದ್ದರು. ರಾಹುಲ್​ ಗಾಂಧಿ ಭೇಟಿಗಾಗಿ ದೆಹಲಿ ಅಲೆದು ಅಲೆದು ಸುಸ್ತಾಗಿದ್ದ ಡಿ.ಕೆ ಶಿವಕುಮಾರ್​ ಕೊನೆಗೂ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

ದೆಹಲಿಗೆ ಭೇಟಿ ನೀಡಿದ್ದ ಡಿ.ಕೆ ಶಿವಕುಮಾರ್​ ಮೊದಲು ಆಸ್ಸಾಂ ವಿಧಾನಸಭಾ ಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ವರಿಷ್ಠರೊಂದಿಗೆ ಭಾಗಿಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ವೀಕ್ಷಕರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಡಿ.ಕೆ ಶಿವಕುಮಾರ್ ರಾಹುಲ್​ ಗಾಂಧಿಯವರನ್ನು ಏಕಾಂಗಿಯಾಗಿ ಮೀಟ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್​ ಗಾಂಧಿಯವರ ಜೊತೆ ಕೆಲವೇ ಕೆಲವು ನಿಮಿಷಗಳ ಕಾಲ ಏಕಾಂಗಿಯಾಗಿ ಡಿಕೆಶಿ ಮಾತುಕತೆ ನಡೆಸಿದ್ದರು. ಇದೀಗ ದೆಹಲಿ ಪ್ರವಾಸ ಕೈಗೊಂಡು ರಾಹುಲ್​ ಗಾಂಧಿಯವರನ್ನು ಮತ್ತೆ ಭೇಟಿಯಾಗುವಲ್ಲಿ ಡಿಕೆಶಿ ಕೊನೆಗೂ ಸಕ್ಸಸ್​ ಕಂಡಿದ್ದಾರೆ. ಈ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳನ್ನು ಡಿಕೆಶಿ ರಾಹುಲ್​ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮಾಜಿ ಸಚಿವ, ಹಿರಿಯ ರಾಜಕಾರಣಿ, ಶತಾಯುಷಿ ಭೀಮಣ್ಣ ಖಂಡ್ರೆ ವಿಧಿವಶ

ವನ್​ ಟು ವನ್​ ಮೀಟಿಂಗ್​ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್​, ಆಸ್ಸಾಂ ಚುನಾವಣೆ ಸಂಬಂಧ ಚರ್ಚೆ ನಡೆಸಿದ್ದೇವೆ. ಈ ಬಾರಿ ಆಸ್ಸಾಂನಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರೋದು ಪಕ್ಕಾ ಎಂದಿದ್ದಾರೆ.

Exit mobile version