ನಿಷೇಧಿತ ಪಿಎಫ್​ಐ – ಎಸ್​ಡಿಪಿಐ ಸಂಘಟನೆ ನಡುವೆ ನಂಟಿದೆ ಎಂದ ಕ್ಯಾ. ಬ್ರಿಜೇಶ್​ ಚೌಟ ವಿರುದ್ಧ ಗುಡುಗಿದ ಎಸ್​ಡಿಪಿಐ

ಲೋಕಸಭೆಯಲ್ಲಿ ಎಸ್​ಡಿಪಿಐ ಹಾಗೂ ನಿಷೇಧಿತ ಪಿಎಫ್​ಐ ಸಂಘಟನೆಗಳಿಗೆ ಸಂಸದ ಕ್ಯಾಪ್ಟನ್​ ಬ್ರಿಜೇಶ್​ ಚೌಟ ಸಂಬಂಧ ಕಲ್ಪಿಸಿರುವ ವಿಚಾರ ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ನಿಷೇಧಿತ ಪಾಪ್ಯೂಲರ್​​ ಫ್ರಂಟ್​ ಆಫ್​ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಇದೀಗ ಎಸ್​ಡಿಪಿಐ ಸೋಗಿನಲ್ಲಿ ನಮ್ಮ ಚುನಾವಣಾ ವ್ಯವಸ್ಥೆಯ ಒಳಗೆ ಮರುಪ್ರವೇಶಕ್ಕೆ ಹುನ್ನಾರ ನಡೆಸಿದ್ದಾರೆ ಎಂಬ ಗಂಭೀರ ವಿಚಾರವನ್ನು ಲೋಕಸಭೆಯ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದರು. ಈ ವಿಚಾರವಾಗಿ ಎಸ್​ಡಿಪಿಐ ಇದೀಗ ಕೆಂಡಾಮಂಡಲವಾಗಿದೆ.

ಈ ವಿಚಾರವಾಗಿ ಮಾತನಾಡಿರುವ ದಕ್ಷಿಣ ಕನ್ನಡ ಎಸ್​ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್​ ಸಾಧತ್​ , ಸಂಸದ ಬ್ರಿಜೇಶ್​ ಚೌಟನನ್ನು ನನ್ನ ಜನತೆ ಅರಬ್ಬೀ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಆವಾಜ್​ ಹಾಕಿದ್ದಾರೆ . ನಿಷೇಧಿತ ಸಂಘಟನೆಯೊಂದಿಗೆ ಎಸ್​ಡಿಪಿಐ ಹೆಸರನ್ನು ಥಳುಕು ಹಾಕುವ ಕೆಲಸವನ್ನು ಚೌಟ ಮಾಡಿದ್ದಾರೆ. 2009ರಿಂದ ಪ್ರಜಾಪ್ರಭುತ್ವದ ಆಶಯದ ಅಡಿಯಲ್ಲೇ ಎಸ್​ಡಿಪಿಐ ಕಾರ್ಯ ನಿರ್ವಹಿಸಿದೆ. ಆದರೆ ಚೌಟ ತಾನು ಒಬ್ಬ ಸಂಸದ ಎಂಬ ಜ್ಞಾನವಿಲ್ಲದೇ ಮಾತನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಂಪೂರ್ಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮದು ಮೂರನೇ ಅತೀ ದೊಡ್ಡ ರಾಜಕೀಯ ಪಕ್ಷ. ಬಿಜೆಪಿ ಕಾರ್ಯಕರ್ತರೇ ಬ್ರಿಜೇಶ್​ ಚೌಟ ವಿರುದ್ಧ ಭ್ರಮ ನಿರಸನಗೊಂಡಿದ್ದಾರೆ. ತಾನಿನ್ನೂ ಜೀವಂತವಾಗಿದ್ದೇನೆ ಎಂದು ತೋರಿಸೋಕೆ ಈ ರೀತಿ ಹೇಳಿಕೆ ನೀಡಿದ್ದಾರೆ. ಎಸ್​ಡಿಪಿಐಯನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದೇ ಈ ರೀತಿ ಮಾತನಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ನಾಯಕ ಮಿಥುನ್ ರೈ ಶಿಸ್ತು ಉಲ್ಲಂಘನೆ : ನೋಟಿಸ್‌ ಜಾರಿ ಮಾಡಿದ ಎಐಸಿಸಿ

ಅಲ್ಲದೇ ಚಿಕ್ಕಮಗಳೂರಿನಲ್ಲಿ ನಡೆದ ಕೊಲೆ ಪ್ರಕರಣಕ್ಕೂ ಕ್ಯಾಪ್ಟನ್​ ಬ್ರಿಜೇಶ್​ ಚೌಟ ಹೇಳಿಕೆಗೂ ಲಿಂಕ್​ ಮಾಡಿದ ಅನ್ವರ್​ ಸಾಧತ್​, ಇವರಿಗೆ ಯಾರದಾದ್ದರೂ ರಕ್ತ ಬೇಕು. ಇವರು ಪಾರ್ಲಿಂಮೆಂಟಿನಲ್ಲಿ ಇಂತಹ ಹೇಳಿಕೆ ನೀಡುತ್ತಿದ್ದಂತೆಯೇ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್​ ಕಾರ್ಯಕರ್ತನ ಹತ್ಯೆಯಾಗಿದೆ. ಸ್ಥಳೀಯ ಚುನಾವಣೆ ಸಮೀಪಿಸುತ್ತಿದೆ. ಜನರ ಬಳಿ ಹೋಗಲು ಧೈರ್ಯ ಇಲ್ಲದೇ ಎಸ್​ಡಿಪಿಐ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದಾರೆ. ಭಾವನಾತ್ಮಕ ಹೇಳಿಕೆ ನೀಡಿದ್ರೆ ಮಾತ್ರ ಚುನಾವಣೆಯಲ್ಲಿ ಮೈಲೇಜ್​ ಸಿಗುತ್ತೆ ಎಂಬುದು ಇವರಿಗೂ ತಿಳಿದಿದೆ. ಅಭಿವೃದ್ಧಿ , ಸಮಸ್ಯೆಗಳ ಬಗ್ಗೆ ಇವರು ಪಾರ್ಲಿಮೆಂಟ್​ನಲ್ಲಿ ಮಾತನಾಡಲ್ಲ ಬದಲಾಗಿ ಕಮ್ಯುನಲ್​ ವಿಚಾರಗಳೇ ಇವರಿಗೆ ಬೇಕು ಎಂದು ಕಿಡಿಕಾರಿದ್ದಾರೆ.

Exit mobile version