ಈ ಬಾರಿ ದೆಹಲಿ ಗಣರಾಜ್ಯೋತ್ಸವ ಪರೇಡ್​ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಸ್ಥಾನ

ದೆಹಲಿಯ ಗಣರಾಜ್ಯೋತ್ಸವ ಪರೇಡ್​ನಲ್ಲಿ ಈ ಬಾರಿ ಕನ್ನಡಿಗರಿಗೆ ನಿರಾಶೆ ಕಾದಿದೆ. ಈ ಬಾರಿಯ ಪಥಸಂಚಲನದಲ್ಲಿ ಭಾಗಿಯಾಗಲು ಕರ್ನಾಟಕಕ್ಕೆ ಅವಕಾಶ ಸಿಕ್ಕಿಲ್ಲ. ಸಿರಿಧಾನ್ಯದಿಂದ ತಂತ್ರಜ್ಞಾನದವರೆಗೆ ಕರ್ನಾಟಕದ ಕೊಡುಗೆಯ ಪ್ರತೀಕವಾಗಿ ನಿರ್ಮಿಸಲಾಗಿದ್ದ ಸ್ಥಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಮಿಲೆಟ್ಸ್​ ಟು ಮೈಕ್ರೋಚಿಪ್​ ಟ್ಯಾಬ್ಲೋ ಪ್ರಸ್ತಾವನೆ ಅಂಗೀಕೃತವಾಗದ ಹಿನ್ನೆಲೆಯಲ್ಲಿ ಕರ್ನಾಟಕದ ಸ್ಯಬ್ಧಚಿತ್ರ ಪರೇಡ್​ನಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದೆ. ಹೀಗಾಗಿ ಪ್ರಗತಿ ಮೈದಾನದಲ್ಲಿ ಸ್ತಬ್ಧಚಿತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದೆ ಎಂದು ವಾರ್ತಾ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಮುಂದುವರಿದ ಫೆಬ್ರವರಿ 1 ರ ಸಂಪ್ರದಾಯ : ಈ ಬಾರಿ ಭಾನುವಾರದಂದು ಕೇಂದ್ರ ಬಜೆಟ್​ ಮಂಡನೆ

ಕಳೆದ ವರ್ಷ ಲಕ್ಕುಂಡಿ ವೈಭವದ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗವಹಿಸಲು ಅವಕಾಶ ಪಡೆದಿತ್ತು. ಈ ಭಾರಿ ಕರ್ನಾಟಕವು ಕೃಷಿ, ಕೈಗಾರಿಕೆ ನಾವೀನ್ಯತೆ ಹಾಗೂ ಸಂಸ್ಕೃತಿಯ ಮೂಲಕ ಆತ್ಮನಿರ್ಭರ ಭಾರತಕ್ಕೆ ಕೊಡುಗೆ ನೀಡುತ್ತಿದೆ. ಈ ಮೂಲಕ ಭಾರತವನ್ನು ಸಮೃದ್ಧಗೊಳಿಸುತ್ತಿದೆ. ಕರ್ನಾಟಕವು ಸಮಗ್ರ ಕೃಷಿಯಲ್ಲಿ ಸಮತೋಲಿತ ಪ್ರಗತಿ ಸಾಧಿಸಿದೆ ಎಂಬರ್ಥದಲ್ಲಿ ಸ್ತಬ್ಧಚಿತ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಆದರೆ ಈ ಟ್ಯಾಬ್ಲೋ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ

Exit mobile version