ಮುಂದುವರಿದ ಫೆಬ್ರವರಿ 1 ರ ಸಂಪ್ರದಾಯ : ಈ ಬಾರಿ ಭಾನುವಾರದಂದು ಕೇಂದ್ರ ಬಜೆಟ್​ ಮಂಡನೆ

Union Budget 2026: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕೇಂದ್ರ ಬಜೆಟ್​ ಮಂಡನೆ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ಫೆಬ್ರವರಿ 1 ಭಾನುವಾರವಾಗಿರುವ ಹಿನ್ನೆಲೆಯಲ್ಲಿ ಫೆಬ್ರವರಿ 2ರಂದು ಕೇಂದ್ರ ಬಜೆಟ್​ ಮಂಡನೆಯಾಗುತ್ತಾ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿತ್ತು. ಆದರೆ ಇದೀಗ ಕೇಂದ್ರ ಸರ್ಕಾರದಿಂದಲೇ ಸ್ಪಷ್ಟನೆ ಹೊರಬಿದ್ದಿದ್ದು ಕೇಂದ್ರ ಬಜೆಟ್​ ಫೆಬ್ರವರಿ 1ರ ಭಾನುವಾರದಂದೇ ಮಂಡನೆಯಾಗಲಿದೆ.

ಫೆಬ್ರವರಿ 1ರ ಬಜೆಟ್​ ಮಂಡನೆ ಸಂಪ್ರದಾಯ ಮುರಿಯದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಫೆಬ್ರವರಿ 1ರಂದು ಕೇಂದ್ರ ಬಜೆಟ್​ ಮಂಡನೆ ಮಾಡುವ ಸಂಪ್ರದಾಯ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಬಜೆಟ್​ ಮಂಡನೆಯಾಗುತ್ತಿದೆ. ಆದರೆ ಭಾನುವಾರ ದೇಶದಲ್ಲಿ ಬಜೆಟ್​ ಮಂಡನೆಯಾಗುತ್ತಿರುವುದು ಇದೇ ಮೊದಲೇನಲ್ಲ. 28 ವರ್ಷಗಳ ಹಿಂದೆ ಫೆಬ್ರವರಿ 28ರ 1999ರಲ್ಲಿ ಭಾನುವಾರದಂದು ಕೇಂದ್ರ ಬಜೆಟ್​ ಮಂಡಿಸಲಾಗಿತ್ತು. ಅಂದಿನ ವಿತ್ತ ಸಚಿವ ಯಶವಂತ ಸಿನ್ಹಾ ಭಾನುವಾರದಂದು ಬಜೆಟ್​ ಮಂಡಿಸಿದ್ದರು.

ಇದನ್ನೂ ಓದಿ: ಆಸ್ಸಾಂ, ಕೇರಳ ರಾಜ್ಯಕ್ಕೆ ಹಿರಿಯ ಚುನಾವಣೆ ವೀಕ್ಷಕರ ನೇಮಕ : ಡಿ.ಕೆ ಶಿವಕುಮಾರ್​, ಕೆ.ಜೆ ಜಾರ್ಜ್​ಗೆ ಸ್ಥಾನ

ದೇಶದಲ್ಲಿ 2017ರಿಂದ ಫೆಬ್ರವರಿ 1ನೆ ತಾರೀಖಿನಂದೇ ಬಜೆಟ್​ ಮಂಡಿಸುವ ಸಂಪ್ರದಾಯ ರೂಢಿಗೆ ಬಂದಿದೆ. ಈ ಬಾರಿ ಜನವರಿ 28ರಿಂದ ಬಜೆಟ್​ ಅಧಿವೇಶನ ಆರಂಭಗೊಳ್ಳಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಅಧಿವೇಶನಗಳನ್ನುದ್ದೇಶಿಸಿ ಮಾತನಾಡಲಾಗಿದ್ದಾರೆ. ಇದಾದ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ದಾಖಲೆಯ 9ನೇ ಮುಂಗಡ ಪತ್ರ ಮಂಡಿಸಲಿದ್ದಾರೆ.

Exit mobile version