Silver Rate: ಸಖತ್‌ ಖುಷಿ ಕೊಟ್ಟ ಬೆಳ್ಳಿ, ಬೆಲೆಯಲ್ಲಿ ಭಾರೀ ಪ್ರಮಾಣದ ಇಳಿಕೆ!

ಬೆಂಗಳೂರು: ಹೊಸ ವರ್ಷದಂದು ಎಲ್ಲರಿಗೂ ಎದೆ ಬಡಿತ ಹೆಚ್ಚಿಸಿದ್ದ ಅತ್ಯಮೂಲ್ಯ ಲೋಹ ಗ್ರಾಹಕನ ಮೇಲೆ ಕೊಂಚ ಕರುಣೆ ತೋರಿದ ಹಾಗಿದೆ. ಈ ಕಾರಣದಿಂದ ಭಾರೀ ಮೊತ್ತದ ಇಳಿಕೆಯನ್ನು ಬೆಳ್ಳಿಗಳು ಕಂಡಿದೆ. ಈ ವರ್ಷದ ಮೊದಲ ದಿನವಾದ ಇಂದು (ಗುರುವಾರ), ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡುಬಂದಿದ್ದು, ಬೆಳ್ಳಿಯ ದರದಲ್ಲಿ ತುಸು ಇಳಿಕೆಯಾಗಿದೆ. 

ಬೆಂಗಳೂರಿನ ಮಾರುಕಟ್ಟೆಯಲ್ಲಿ ಆಭರಣ ಚಿನ್ನದ (22 ಕ್ಯಾರಟ್) ಮತ್ತು ಶುದ್ಧ ಚಿನ್ನದ (24 ಕ್ಯಾರಟ್) ದರಗಳು ಈ ಕೆಳಗಿನಂತಿವೆ:

ಇದನ್ನೂ ಓದಿ-Sirsi-Kumta: ಖರ್ಚು ಕಮ್ಮಿ ,ಪ್ರಯಾಣವೂ ಸುಲಭ; ಹೊಸ ವರ್ಷಕ್ಕೆ ಇದೊಂದು ಸಿಹಿ ಸುದ್ದಿ, ಅರ್ಧಕ್ಕರ್ಧ ಇಳಿಯಲಿದೆ ಈ ಮಾರ್ಗದ ಟಿಕೇಟ್‌ ದರ! https://kan.newsnext.live/district/kumta-sirsi-highway-opened-to-busses/

ಇನ್ನೂ ಬೆಳ್ಳಿಯ ದರದಲ್ಲಿ ಇಳಿಕೆ ಕಂಡುಬಂದಿದ್ದು ಅದರ ವಿವರ ಹೀಗಿದೆ. ಹೂಡಿಕೆದಾರರು ಮತ್ತು ಗ್ರಾಹಕರಿಗೆ ಸಮಾಧಾನದ ಸಂಗತಿಯೆಂದರೆ, ಬೆಳ್ಳಿಯ ದರ ಇಂದು ಸತತ ನಾಲ್ಕನೇ ದಿನವೂ ಇಳಿಕೆ ಕಂಡಿದೆ. 

ಗೆಲ್ಲೋದು ಬೆಳ್ಳಿನೇ! ಎಂಬುದು ತಜ್ಞರ ಮಾತು

ಒಟ್ಟಾರೆಯಾಗಿ ಒಮ್ಮೆಲೆ ಬೇಡಿಕೆ-ಪೂರೈಕೆಯ ನಡುವಿನ ಅಜಗಜಾಂತರ ವ್ಯತ್ಯಾಸದಿಂದ ಸಡನ್‌ ಏರಿಕೆ ಕಂಡಿದ್ದ ಬೆಳ್ಳಿ ನಾಲ್ಕನೇ ದಿನವೂ ದರದಲ್ಲಿ ಕೆಳಮುಖವಾಗುತ್ತಾ ಬಂದರೆ ಚಿನ್ನ ಮಾತ್ರ ಪೈಪೋಟಿ ಬಿಟ್ಟು ಕೊಡದೇ ಆಗಸದೆತ್ತರದ ಬೆಲೆ ತಲುಪಿದೆ. ಮಾರ್ಕೆಟ್‌ ತಜ್ಞರ ಪ್ರಕಾರ 2038 ರ ವೇಳೆಗೆ ಬೆಳ್ಳಿ ಚಿನ್ನವನ್ನು ಸರಿಗಟ್ಟಿ ವಿಕ್ರಮ ಸಾಧಿಸಲಿದೆ ಎನ್ನಲಾಗುತ್ತಿದೆ.

Exit mobile version