ಪುತ್ತೂರು : ಹೊಂಡಾಗುಂಡಿ ರಸ್ತೆ – ನಗರಸಭೆ ಆಯುಕ್ತರಿಗೆ ಶಾಸಕರ ಕ್ಲಾಸ್‌

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಹೊಂಡಾಗುಂಡಿ ರಸ್ತೆಗಳದ್ದೇ ಕಾರುಬಾರು ಎಂಬಂತಾಗಿದೆ. ಸಾರ್ವಜನಿಕರು ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಪ್ರಯೋಜನ ಆಗಿರಲಿಲ್ಲ. ಇದೀಗ ರಸ್ತೆಗಳಲ್ಲಿ ಹೊಂಡ ಮುಚ್ಚದ ಹಿನ್ನೆಲೆಯಲ್ಲಿ ಸ್ವತಃ ಶಾಸಕ ಅಶೋಕ್​ ರೈ (MLA Ashok Rai) ಗರಂ ಆಗಿದ್ದಾರೆ.

ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಪುತ್ತೂರು ಶಾಸಕ ಅಶೋಕ್‌ ರೈ ಹೊಂಡಾಗುಂಡಿ ರಸ್ತೆಯನ್ನು ಕಂಡು ಗರಂ ಆಗಿದ್ದಾರೆ. ಕೂಡಲೇ ಅಶೋಕ್‌ ರೈ ಪುತ್ತೂರು ನಗರ ಸಭೆಯ ಆಯುಕ್ತರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

ರೋಡ್​ ಪ್ಯಾಚ್​ ವರ್ಕ್ ಮಾಡಿ ಎಂದು ಎಷ್ಟು ಸಲ ಹೇಳಬೇಕು ? ನಾನು ಹೇಳೋ ಭಾಷೆ ನಿಮಗೆ ಅರ್ಥ ಆಗುತ್ತಾ ಇಲ್ವಾ ? ಎಲ್ಲದಕ್ಕೂ ಇಂಜಿನಿಯರ್​ ಕಡೆ ಬೊಟ್ಟು ಮಾಡಿ ತೋರಿಸುವುದಾದರೆ ನೀವು ಕಮಿಷನರ್​ ಆಗಿ ಯಾಕೆ ಇದ್ದೀರಾ ? ಆ ಇಂಜಿನಿಯರ್​ಗೆ ಏನು ತಲೆ ಕೆಟ್ಟಿದ್ಯಾ ? ನಾಳೆ ಇಲ್ಲಿ ದುರಸ್ತಿ ಕಾರ್ಯ ನಡೆಸದಿದ್ದರೆ ಏನು ಮಾಡುತ್ತೇನೆ ಎಂದು ನೋಡ್ತೀರಿ ಎಂದು ನಗರಸಭೆ ಕಮಿಷನರ್​ಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಪ್ರಮೋದ್‌ ಮಧ್ವರಾಜ್‌ ಕಡೆಗಣನೆ ವಿವಾದ : ಬಿಜೆಪಿಯಿಂದ ಡ್ಯಾಮೇಜ್‌ ಕಂಟ್ರೋಲ್‌

ಈ ರಸ್ತೆ ನಿತ್ಯ ಓಡಾಡುವ ಜನರು ಸಾಯುತ್ತಿದ್ದಾರೆ. ನಾನು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೇನೆ. ನೀವೆಂತಾ ಕಮಿಷನರ್​ ? ಎಲ್ಲಾದಕ್ಕೂ ಕೆಳ ಹಂತದ ಅಧಿಕಾರಿಗಳ ಕಡೆ ಕೈ ತೋರಿಸುತ್ತಿದ್ದೀರಾ ? ನನ್ನ ಮಾತುಗಳನ್ನು ಕಡೆಗಣಿಸಬೇಡಿ.

ಮುಂದಿನ ಮಳೆಗಾಲವನ್ನೂ ಈ ಗುಂಡಿ ರಸ್ತೆಯಲ್ಲಿಯೇ ಮುಂದೂಡುತ್ತೀರಾ ಎಂದು ಶಾಸಕ ಅಶೋಕ್​ ರೈ ಪ್ರಶ್ನಿಸಿದ್ದಾರೆ. ಶಾಸಕ ಅಶೋಕ್​ ರೈ ಈ ರೀತಿ ತರಾಟೆ ತೆಗೆದುಕೊಳ್ಳುತ್ತಿದ್ದಂತೆಯೇ ಪುತ್ತೂರು ನಗರಸಭೆ ಅಲರ್ಟ್​ ಆಗಿದ್ದು ರಸ್ತೆ ದುರಸ್ತಿ ಕಾರ್ಯವನ್ನು ಚುರುಕುಗೊಳಿಸಿದೆ.

ಇದನ್ನೂ ಓದಿ : ಎಚ್ಚರ … ಎಚ್ಚರ… : ರಾಜ್ಯದಲ್ಲಿ ಹೆಚ್ಚಿನ ಇಲಿಜ್ವರದ ಆತಂಕ

Puttur Hondagundi Road MLA Class for Municipal Commissioner

Exit mobile version