Mangaluru Scam: ಟ್ರೇಡಿಂಗ್​ನಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿ ಬರೋಬ್ಬರಿ 32 ಲಕ್ಷ ರೂಪಾಯಿ ಮೋಸ

ಮಂಗಳೂರು : Mangaluru Scam: ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ಟ್ರೇಡಿಂಗ್​ ಮೂಲಕ ಹಣ ಸಂಪಾದನೆ ಮಾಡುವುದು ಹೊಸ ಟ್ರೆಂಡ್​ ಆಗಿದೆ. ಇದೇ ರೀತಿ ಆನ್​ಲೈನ್​ ಟ್ರೇಡಿಂಗ್​ನಲ್ಲಿ ನಿಮಗೆ ಹೆಚ್ಚು ಲಾಭಾಂಶ ದೊರೆಯುವಂತೆ ಮಾಡುತ್ತೇನೆ ಎಂದು ನಂಬಿಸಿ ಬರೋಬ್ಬರಿ 32 ಲಕ್ಷ ರೂಪಾಯಿ ವಂಚಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಸೆನ್​ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನಲ್ಲಿರುವ ಮಾಹಿತಿಯ ಪ್ರಕಾರ ಸೆಪ್ಟೆಂಬರ್​ 9ರಂದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ದೂರದಾರರು ಫೇಸ್​ಬುಕ್(Facebook)​ ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಕಾವ್ಯಾ ಶೆಟ್ಟಿ ಎಂಬವರು ಫ್ರೆಂಡ್​ಶಿಪ್​ ವಿನಂತಿ ಕಳಿಸಿದ್ದರು ಎನ್ನಲಾಗಿದೆ. ಈಕೆ ತಾನು ಮುಂಬೈನಲ್ಲಿ ಟ್ರೇಡಿಂಗ್​ ಕೆಲಸ ಮಾಡುತ್ತಿದ್ದು, ಹೆಚ್ಚಿನ ಲಾಭ ಪಡೆಯುವುದು ಹೇಗೆ ಎಂಬುದು ನನಗೆ ತಿಳಿದಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನು ನಂಬಿದ ದೂರುದಾರರು ಟ್ರೇಡಿಂಗ್​ನಲ್ಲಿ ತಾನೂ ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಇದಾದ ಬಳಿಕ ಕಾವ್ಯಾ ವಾಟ್ಸಾಪ್​ ಮೂಲಕ ಲಿಂಕ್​ ಒಂದನ್ನು ಕಳಿಸಿದ್ದು ಅದರಲ್ಲಿ ದೂರುದಾರರ ವೈಯಕ್ತಿಕ ವಿವರಗಳನ್ನು ನಮೂದಿಸಬೇಕಿತ್ತು. ಇದಾದ ಬಳಿಕ ಷೇರು ಖರೀದಿಗೆಂದು ದೂರುದಾರ 40 ಸಾವಿರ ರೂಪಾಯಿ ಪಾವತಿಸಿದ್ದು. ಕೆಲವೇ ದಿನಗಳಲ್ಲಿ ಅವರಿಗೆ 9500 ರೂಪಾಯಿ ಲಾಭಾಂಶ ದೊರಕಿತ್ತು. ಇದಾದ ಬಳಿಕ 2 ಲಕ್ಷ ರೂಪಾಯಿ ಷೇರು ಖರೀದಿ ಮಾಡಿದ್ದು 23760 ರೂಪಾಯಿ ಲಾಭಾಂಶ ಪಡೆದಿದ್ದರು.

Also Read: ಕರಾವಳಿಯಲ್ಲಿ ಗುಡುಗು ಸಹಿತ ಮಳೆ, ರೈತರಲ್ಲಿ ಆತಂಕ : ಇನ್ನೆಷ್ಟು ದಿನ ಸುರಿಯಲಿದೆ ಮಳೆ ?

ಈ ಆ್ಯಪ್​ನಿಂದ ಹೆಚ್ಚು ಹಣ ಗಳಿಸಬಹುದು ಎಂದು ಕೊಂಡ ದೂರುದಾರ, ಹಂತ ಹಂತವಾಗಿ ಒಟ್ಟು 32,06,880 ರೂ.ಗಳನ್ನು ಸೆ.13ರಿಂದ ಅ.24ರ ವರೆಗೆ ಕಾವ್ಯಾ ಎಂಬಾಕೆ ನೀಡಿದ ಬ್ಯಾಂಕ್​ ಖಾತೆಗಳಿಗೆ ಜಮಾ ಮಾಡುತ್ತಾ ಹೋಗಿದ್ದರು.

ಆದರೆ ಇದಾದ ಬಳಿಕ ದೂರುದಾರರಿಗೆ ಯಾವುದೇ ಲಾಭಾಂಶ ಬಂದಿಲ್ಲ. ಕೊಟ್ಟ ಹಣವನ್ನೂ ವಾಪಾಸ್​ ನೀಡಿಲ್ಲ. ತಾನು ಮೋಸಕ್ಕೆ ಒಳಗಾಗಿದ್ದೇನೆ ಎಂದು ತಿಳಿದ ಬಳಿಕ ದೂರುದಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ .

Also Read: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ : 38 ಶವಗಳ ತನಿಖೆ ಬಿಗಿಗೊಳಿಸಿದ ಎಸ್​ಐಟಿ

Exit mobile version