ಕರಾವಳಿಯ ಪ್ರವಾಸೋದ್ಯಮಕ್ಕೂ ತಟ್ಟಿದ ಎಲ್​ಪಿಜಿ ಅಭಾವ : ಪ್ರವಾಸಿಗರಿಗೆ ಭಾರೀ ನಿರಾಸೆ

ಎಲ್‌ಪಿಸಿ ಅಭಾವದಿಂದ ಕರಾವಳಿ ಭಾಗಕ್ಕೆ ಪ್ರವಾಸಕ್ಕೆಂದು ಆಗಮಿಸುವ ಬಹುತೇಕರು ಇಲ್ಲಿನ ಖಾದ್ಯಗಳನ್ನು ಸವಿಯಲು ಸಿಗದೇ ನಿರಾಶೆಗೊಳಗಾಗುತ್ತಿದ್ದಾರೆ.

ಮಂಗಳೂರು : ರಾಜ್ಯದಲ್ಲಿ ಎಲ್​ಪಿಜಿ ಸಿಲಿಂಡರ್​ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮ ಇದೀಗ ಪ್ರವಾಸೋದ್ಯಮಕ್ಕೂ ತಟ್ಟಿದೆ. ಕರಾವಳಿ ಭಾಗಕ್ಕೆ ಪ್ರವಾಸಕ್ಕೆಂದು ಆಗಮಿಸುವ ಬಹುತೇಕರು ಇಲ್ಲಿನ ಖಾದ್ಯಗಳನ್ನು ಸವಿಯುವ ಅಭಿಲಾಷೆ ಹೊಂದಿರುತ್ತಾರೆ. ಆದರೆ ಎಲ್​ಪಿಜಿ ಅಭಾವದಿಂದ ಕರಾವಳಿಯ ಬಹುತೇಕ ಹೋಟೆಲ್​ಗಳಲ್ಲಿ ಇಲ್ಲಿನ ಜನಪ್ರಿಯ ಖಾದ್ಯಗಳ ತಯಾರಿಕೆಯನ್ನು ಹೋಟೆಲ್​ಗಳು ನಿಲ್ಲಿಸಿದ್ದು ಪ್ರವಾಸಿಗರಿಗೆ ನಿರಾಶೆಯುಂಟು ಮಾಡಿದೆ. ಹೀಗಾಗಿ ಬಹುತೇಕರು ತಮ್ಮ ಬುಕ್ಕಿಂಗ್​ಗಳನ್ನೇ ಕ್ಯಾನ್ಸಲ್​ ಮಾಡುತ್ತಿದ್ದಾರೆ.

ನೂರಕ್ಕೂ ಅಧಿಕ ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರವಾಸಿಗರ ಸ್ವರ್ಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ಈ ಪರಿಸ್ಥಿತಿ ತಲೆದೋರಿದೆ. ಇಲ್ಲಿ ರುಚಿಕರ ಮೀನಿನ ಖಾದ್ಯಗಳಿಗೆ ಭಾರೀ ಡಿಮ್ಯಾಂಡ್​ ಇದೆ. ಆದರೆ ಈಗ ಎಲ್​ಪಿಜಿ ಸಿಲಿಂಡರ್​ ಅಭಾವದಿಂದಾಗಿ ಕೆಲ ಹೋಟೆಲ್​ಗಳು ಬಂದ್​ ಏ ಆಗಿದ್ದರೆ, ಇನ್ನೂ ಕೆಲವು ಹೋಟೆಲ್​ಗಳಲ್ಲಿ ಫೇಮಸ್​ ಖಾದ್ಯಗಳನ್ನು ಮೆನುವಿನಿಂದಲೇ ತೆಗೆದು ಹಾಕಲಾಗಿದೆ.

ಇದನ್ನೂ ಓದಿ: ಭಾರತಕ್ಕೆ ಮತ್ತಷ್ಟು ‘ಗ್ಯಾಸ್​ ಸಂಕಷ್ಟ’ : ಕತಾರ್​ನ ಪ್ರಮುಖ ನೈಸರ್ಗಿಕ ಅನಿಲ ಘಟಕದ ಮೇಲೆ ಇರಾನ್ ದಾಳಿ

ಏಪ್ರಿಲ್​ – ಮೇ ಸಮೀಪಿಸುತ್ತಿದ್ದಂತೆ ಪ್ರವಾಸಿಗರ ದಂಡೇ ಹರಿದು ಬರ್ತಾ ಇತ್ತು. ಆದರೆ ಈ ಬಾರಿ ಹೋಟೆಲ್​ ಬುಕ್ಕಿಂಗ್​ ಮಾಡುವವರ ಸಂಖ್ಯೆಯೇ ಕಡಿಮೆಯಾಗಿದೆ. ಕರಾವಳಿಯ ದೇಸಿ ಫುಡ್​ ಸವಿಯುವ ಅವಕಾಶ ಇಲ್ಲವೆಂದು ಪ್ರವಾಸಿಗರು ಈ ಕಡೆ ಮುಖ ಮಾಡುವುದನ್ನೇ ಕಡಿಮೆ ಮಾಡಿದ್ದಾರೆ ಎಂದು ಹೋಟೆಲ್​ ಮಾಲೀಕರು ಅಸಮಾಧಾನ ಹೊರಹಾಕುತ್ತಿದ್ದಾರೆ.

Exit mobile version