ಧರ್ಮಸ್ಥಳ ಬುರುಡೆ ಪ್ರಕರಣ : ಕೇಸ್​ ರದ್ದತಿಗೆ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ SIT ನೋಟಿಸ್​

Dharmasthala Skull Case SIT : ಸೌಜನ್ಯ ಪ್ರಕರಣವನ್ನು ದಾಳವಾಗಿಟ್ಟುಕ್ಕೊಂಡು ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿ ಬುರುಡೆ ಗ್ಯಾಂಗ್​ ಈಗ ತಾನೇ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಪ್ರಕರಣದ ಇಂಚಿಂಚೂ ಜಾಲಾಡುತ್ತಿರುವ ಎಸ್​ಐಟಿ ತನಿಖೆಯಿಂದಾಗಿ ಸುಸ್ತಾಗಿರುವ ಬುರುಡೆ ಗ್ಯಾಂಗ್​ ಸದಸ್ಯರು ತಮ್ಮ ದೂರನ್ನೇ ವಾಪಾಸ್ಸು ತೆಗೆದುಕೊಳ್ಳುವ ಪ್ರಯತ್ನದಲ್ಲಿರುವ ನಡುವೆಯೇ ಇಂದು ಮತ್ತೆ ಎಸ್ಐಟಿ ಬುರುಡೆ ತಂಡಕ್ಕೆ ನೋಟಿಸ್​ ನೀಡಿದೆ.

ಪ್ರಕರಣ ಸಂಬಂಧ ತನಿಖೆಗೆ ನಾಳೆ ಹಾಜರಾಗುವಂತೆ ವಿಠ್ಠಲಗೌಡಗೆ ಇಂದು ಎಸ್​ಐಟಿ ಮತ್ತೊಂದು ನೋಟಿಸ್​ ನೀಡಿದೆ. ಇದರ ಜೊತೆಯಲ್ಲಿ ಮಹೇಶ್​ ಶೆಟ್ಟಿ ತಿಮರೋಡಿ, ಗಿರೀಶ್​ ಮಟ್ಟಣ್ಣನವರ್​ ಹಾಗೂ ಜಯಂತ್​ ಟಿ.ಗೆ ನವೆಂಬರ್ ಮೂರರಂದು ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಹಾಗೂ ಬೆಳ್ತಂಗಡಿಯಲ್ಲಿ ಎಸ್​ಐಟಿ ನೋಟಿಸ್​ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರುವ ಉಜಿರೆಯ ತಿಮರೋಡಿ ನಿವಾಸಕ್ಕೆ ಇಂದು ಭೇಟಿ ನೀಡಿದ ಪಿಎಸ್​ಐ ಗುಣಪಾಲ್​ ನೇತೃತ್ವದ ತಂಡ ಅವರ ನಿವಾಸದ ಎದುರು ನವೆಂಬರ್​ 3ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಅಂಟಿಸಿದೆ.

Aslo Read : ಧರ್ಮಸ್ಥಳ ಪ್ರಕರಣ ಕ್ಲೈಮ್ಯಾಕ್ಸ್‌ : ವರದಿ ಸಲ್ಲಿಕೆಗೆ ಎಸ್‌ಐಟಿಗೆ ಸರಕಾರದ ಸೂಚನೆ

ಅಕ್ಟೋಬರ್​ 27ರಂದು ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ನೀಡಿರುವ ನೋಟಿಸ್​ ಹಾಗೂ ಧರ್ಮಸ್ಥಳದಲ್ಲಿ ದಾಖಲಾಗಿರುವ ಬುರುಡೆ ಪ್ರಕರಣದ ಮೂಲ ಎಫ್​ಐಆರ್​ರನ್ನು ರದ್ದುಗೊಳಿಸುವಂತೆ ಬುರುಡೆ ಗ್ಯಾಂಗ್​ ಹೈಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆಯ ನೆಪದಲ್ಲಿ 100 ತಾಸಿಗೂ ಅಧಿಕ ಕಾಲ ನಮ್ಮನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂಬೆಲ್ಲ ಕಾರಣವನ್ನು ಬುರುಡೆ ಗ್ಯಾಂಗ್​ ಕೋರ್ಟ್​ಗೆ ನೀಡಿದೆ. ಈ ಬೆನ್ನಲ್ಲೇ ಇದೀಗ ಎಸ್​ಐಟಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಈ ನಾಲ್ವರಿಗೆ ನೋಟಿಸ್​ ಕಳುಹಿಸಿದೆ.

Aslo Read : ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ಮೋಸ :ಮಹಿಳೆ ಸಹಿತ ಇಬ್ಬರ ಬಂಧನ

Dharmasthala Skull Case SIT Issues Notice to Burude Gang Immediately After They Approach High Court to Quash FIR

Exit mobile version