ಬುರುಡೆ ಪ್ರಕರಣ : ಚಿನ್ನಯ್ಯ ಪತ್ನಿ, ಸಹೋದರಿ ಎಸ್​ಐಟಿ ಕಚೇರಿಗೆ ಹಾಜರು

Dharmasthala Case : ಧರ್ಮಸ್ಥಳ ಬುರುಡೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಸದ್ಯ ಬುರುಡೆ ಪ್ರಕರಣ ಸಂಬಂಧ ಆರೋಪಿ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿನಲ್ಲಿ ಇರಿಸಲಾಗಿದೆ. ಈ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್​ಐಟಿ ಪೊಲೀಸರು ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಚಿನ್ನಯ್ಯನ ಪತ್ನಿ ಮಲ್ಲಿಕಾಗೆ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ಅಧಿಕಾರಿಗಳು ನೋಟಿಸ್​ ನೀಡಿರುವ ಹಿನ್ನೆಲೆಯಲ್ಲಿ ಇಂದು ಬೆಳ್ತಂಗಡಿ ಎಸ್​ಐಟಿ ಕಚೇರಿಗೆ ಚಿನ್ನಯ್ಯ ಪತ್ನಿ ಮಲ್ಲಿಕಾ ಆಗಮಿಸಿದ್ದಾರೆ. ಪ್ರಕರಣದ ಕುರಿತು ಇಂದು ಎಸ್​ಐಟಿ ಪೊಲಿಸರು ಮಲ್ಲಿಕಾ ವಿಚಾರಣೆ ನಡೆಸಲಿದ್ದಾರೆ. ಚಿನ್ನಯ್ಯಗೆ ಫಂಡಿಂಗ್​ ಆಗಿರುವ ಬಗ್ಗೆ ಪೊಲೀಸರು ಮಲ್ಲಿಕಾರನ್ನು ಪ್ರಶ್ನಿಸುವ ಸಾಧ್ಯತೆಯಿದೆ.

ಆರೋಪಿ ಚಿನ್ನಯ್ಯ ಪತ್ನಿ ಮಲ್ಲಿಕಾ ಜೊತೆ ಸಹೋದರಿ ರತ್ನಾಗೂ ಎಸ್​ಐಟಿ ಅಧಿಕಾರಿಗಳು ನೋಟಿಸ್​ ನೀಡಿದ ಹಿನ್ನೆಲೆಯಲ್ಲಿ ಇಂದು ರತ್ನಾ ಬೆಳ್ತಂಗಡಿ ಎಸ್​ಐಟಿ ಕಚೇರಿಗೆ ಹಾಜರಾಗಿದ್ದಾರೆ. ಮಾಧ್ಯಮಗಳನ್ನು ನೋಡುತ್ತಿದ್ದಂತೆಯೇ ರತ್ನಾ ಎಸ್​ಐಟಿ ಕಚೇರಿ ಒಳಕ್ಕೆ ಓಡಿ ಹೋಗಿದ್ದಾರೆ. ರತ್ನಾ ಬಳಿಯೂ ಪೊಲೀಸರು ಫಂಡಿಂಗ್​ ವಿಚಾರವಾಗಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

Dharmasthala Case: Chinnayya wife sister appear at SIT office Belthangady

Exit mobile version