ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ : 38 ಶವಗಳ ತನಿಖೆ ಬಿಗಿಗೊಳಿಸಿದ ಎಸ್​ಐಟಿ

Dharmasthala burial case SIT : ಧರ್ಮಸ್ಥಳದಲ್ಲಿ ಶವಹೂತಿಟ್ಟ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಧರ್ಮಸ್ಥಳ ಶ್ರೀ ಕ್ಷೇತ್ರವನ್ನು ಟಾರ್ಗೆಟ್​ ಮಾಡಿದ ಬುರುಡೆ ಗ್ಯಾಂಗ್​​ ಇದೀಗ ತಾನೇ ಸಂಕಷ್ಟದಲ್ಲಿ ಸಿಲುಕಿ ಪ್ರಕರಣ ರದ್ದತಿ ಮುಂದಾಗುತ್ತಿದೆ.

ಆದರೆ ಈ ಎಲ್ಲದರ ನಡುವೆ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಎಸ್​ಐಟಿ ಮತ್ತಷ್ಟು ಆಳವಾದ ತನಿಖೆಗೆ ಮುಂದಾಗಿದೆ ಎನ್ನಲಾಗಿದೆ. ಧರ್ಮಸ್ಥಳದಲ್ಲಿ ಸಂಭವಿಸಿರುವ 38 ಅಸಹಜ ಸಾವುಗಳ ಬಗ್ಗೆ ಎಸ್​ಐಟಿ ಅಧಿಕಾರಿಗಳು ಕೂಲಕುಂಷ ತನಿಖೆಗೆ ಮುಂದಾಗಿದ್ದಾರೆ.

ಧರ್ಮಸ್ಥಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್​ 38 ಮೃತದೇಹಗಳನ್ನು ವಿಲೇವಾರಿ ಮಾಡಿತ್ತು. ಅಸಹಜ ಸಾವು ಹಿನ್ನೆಲೆಯಲ್ಲಿ ಶವಗಳ ಗುರುತು ಪತ್ತೆಯಾಗಿಲ್ಲ ಎಂಬ ಕಾರಣ ನೀಡಿ ಧರ್ಮಸ್ಥಳ ಗ್ರಾಮ ಪಂಚಾಯತ್​ 38 ಅನಾಮಧೇಯ ಶವಗಳನ್ನು ವಿಲೇವಾರಿ ಮಾಡಿತ್ತು. ಆದರೆ ಈ ಬಗ್ಗೆ ಬೆಳ್ತಂಗಡಿ ಅಥವಾ ಧರ್ಮಸ್ಥಳ ಠಾಣೆಗಳಲ್ಲಿ ಯುಡಿಆರ್​ ದಾಖಲೆ ಲಭ್ಯವಾಗಿಲ್ಲ.

ಕಳೆದ ಮೂರು ದಶಕಗಳಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ ವಿಲೇವಾರಿ ಮಾಡಿರುವ ಶವಗಳ ವಿಲೇವಾರಿ ಕಲೆ ಹಾಕಿರುವ ಎಸ್​ಐಟಿ ಇಲ್ಲಿ ಹೂತಿಡಲಾಗಿರುವ 38 ಶವಗಳ ಸಂಬಂಧ ಗಂಭೀರ ತನಿಖೆ ಆರಂಭಿಸಿದೆ.

ಇದನ್ನೂ ಓದಿ : ಬೆಳ್ತಂಗಡಿ : ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳಿಗೆ ಹಾವು ಕಡಿತ, ಜೀವ ಉಳಿಸಿದ ನಾಟಿ ವೈದ್ಯ

ವಿಲೇವಾರಿ ಆಗಿರುವ 38 ಶವಗಳಿಗೂ ಬೆಳ್ತಂಗಡಿ ಮತ್ತು ಧರ್ಮಸ್ಥಳ ಠಾಣೆಗಳಲ್ಲಿ ದಾಖಲಾಗಿರುವ ಯುಡಿಆರ್​ ಪ್ರಕರಣಗಳಿಗೂ ತಾಳೆ ಹಾಕಿದಾಗ ಕೆಲ ಪ್ರಕರಣಗಳ ಬಗ್ಗೆ ದಾಖಲೆ ಇಲ್ಲದೇ ಇರುವುದು ಎಸ್​ಐಟಿ ಗಮನಕ್ಕೆ ಬಂದಿದೆ.

ಇವುಗಳಲ್ಲಿ ಬಹುತೇಕ 2 ರಿಂದ ಮೂರು ದಶಕಗಳಿಗೂ ಹಳೆಯ ಪ್ರಕರಣಗಳಾಗಿರುವ ಹಿನ್ನೆಲೆಯಲ್ಲಿ ಪೊಲೀಸ್​ ದಾಖಲೆಗಳು ಕಳೆದು ಹೋಗಿರುವ ಅಥವಾ ನಾಶಪಡಿಸಿರುವ ಸಾಧ್ಯತೆಯಿದೆ.

ಯುಡಿಆರ್‌ ಪ್ರಕರಣಗಳಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆಗಳಿಗೆ ಸಂಬಂಧಿಸಿದ ದಾಖಲೆ ಇರಬೇಕು.ಈ ದಾಖಲೆಗಳನ್ನು ಪೊಲೀಸ್​ ಠಾಣೆಗಳಲ್ಲಿ ರಕ್ಷಿಸಿ ಇಡಬೇಕು. ಯುಡಿಆರ್​ ದಾಖಲೆ ಸಿಕ್ಕಿಲ್ಲ ಎಂದ ಮಾತ್ರಕ್ಕೆ 38 ಮೃತದೇಹಗಳನ್ನು ಅಕ್ರಮವಾಗಿ ವಿಲೇವಾರಿ ಮಾಡಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ.

ಇದನ್ನೂ ಓದಿ : ಹಿಂದೂ ಮುಖಂಡ ಶರಣ್‌ ಪಂಪ್‌ವೆಲ್‌ ಪೊಲೀಸ್‌ ವಶಕ್ಕೆ : ಆಕ್ಷೇಪಾರ್ಹ ಫೇಸ್‌ ಬುಕ್‌ ಪೋಸ್ಟ್‌

ಹೀಗಾಗಿ ಈ ಪ್ರಕರಣ ಸಂಬಂಧ ಮತ್ತಷ್ಟು ಆಳಕ್ಕೆ ಇಳಿದಿರುವ ಎಸ್​ಐಟಿ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ .

Dharmasthala burial case: SIT tightens investigation into 38 bodies

Exit mobile version