ಪುತ್ತೂರು : Criminal entering an ENT clinic: ENT ಕ್ಲಿನಿಕ್​ ಒಳಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ಎಸಗಿದ ದುಷ್ಕರ್ಮಿ, ವಿಡಿಯೋ ವೈರಲ್​

Criminal entering an ENT clinic: ENT ಕ್ಲಿನಿಕ್​ಗೆ ನುಗ್ಗಿ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು(Puttur) ತಾಲೂಕಿನ ದರ್ಬೆ ಎಂಬಲ್ಲಿ ಸಂಭವಿಸಿದೆ. ಡಾ. ರಾಮಮೋಹನ್​ ರಾವ್​ ಎಂಬವರಿಗೆ ಸೇರಿದ ಕ್ಲಿನಿಕ್ ಇದಾಗಿದ್ದು ಕ್ಲಿನಿಕ್​ನ ಗಾಜುಗಳನ್ನು ಪುಡಿ ಮಾಡಿದ ಕಿಡಿಗೇಡಿ ದಾಂಧಲೆ ನಡೆಸಿದ್ದಾರೆ.

ಹಲ್ಲೆಯ ಸಂಪೂರ್ಣ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ತನ್ನ ಪರಿಚಯಸ್ಥರೊಬ್ಬರನ್ನು ತಪಾಸಣೆಗೆ ಬೇಗ ವೈದ್ಯರ ಬಳಿ ಬಿಟ್ಟಿನಲ್ಲಿ ಎಂಬ ಕಾರಣಕ್ಕೆ ಕೋಪಗೊಂಡ ಇಬ್ರಾಹಿಂ ಎಂಬಾತ ಕ್ಲಿನಿಕ್​ ಸಿಬ್ಬಂದಿ ಶ್ರೀಕಾಂತ್​ ಎಂಬವರ ಮೇಲೆ ಹಲ್ಲೆ ಎಸಗಿದ್ದಾರೆ. ಹಲ್ಲೆ ಎಸಗಿದ ಇಬ್ರಾಹಿಂ ಪುತ್ತೂರಿನ ಬಪ್ಪಳಿಗೆ ನಿವಾಸಿ ಎನ್ನಲಾಗಿದೆ.

ಕ್ಲಿನಿಕ್​ ಸಿಬ್ಬಂದಿ ಶ್ರೀಕಾಂತ್​ ಅವರ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲದೇ ರೋಗಿಗಳಿಗೆ ಭಯ ಹುಟ್ಟಿಸುವಂತೆ ಅವಾಚ್ಯ ಶಬ್ದಗಳಿಂದ ಇಬ್ರಾಹಿಂ ನಿಂದಿಸಿದ್ದ ಎಂದು ತಿಳಿದುಬಂದಿದೆ. ನವೆಂಬರ್ 29ರಂದು ಈ ಘಟನೆ ಸಂಭವಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿ.ಸಿ ಕ್ಯಾಮರಾ ದೃಶ್ಯಾವಳಿಗಳು ವೈರಲ್​ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

Also Read: ಪುತ್ತೂರು : ಹೊಂಡಾಗುಂಡಿ ರಸ್ತೆ – ನಗರಸಭೆ ಆಯುಕ್ತರಿಗೆ ಶಾಸಕರ ಕ್ಲಾಸ್‌

ಇನ್ನು ಹಲ್ಲೆ ನಡೆಸಿ ಕ್ಲಿನಿಕ್​ನಲ್ಲಿ ದಾಂಧಲೆ ಎಸಗಿದ ಆರೋಪಿ ಇಬ್ರಾಹಿಂ ವಿರುದ್ಧ ಪುತ್ತೂರು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Exit mobile version