ನಿಮಗೆ ಅರಿವಿಲ್ಲದಂತೆಯೇ ನಿಮ್ಮ ಮನೆಯಲ್ಲಿ ಆಗಿದ್ದಿರಬಹುದು ಈ ವಾಸ್ತು ದೋಷ : ಈಗಲೇ ಎಚ್ಚೆತ್ತುಕೊಳ್ಳಿ

Vastu defect: ಪ್ರಾಚೀನ ಕಾಲದಿಂದಲೂ ಸನಾತನ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಮಹತ್ವದ ಸ್ಥಾನಮಾನ ನೀಡಲಾಗಿದೆ. ಈಗಲೂ ಮನೆಯನ್ನು ಕಟ್ಟಿಸುವ ಮುನ್ನ ವಾಸ್ತು ನೋಡುವುದು, ಮನೆಯಲ್ಲಿ ಯಾವುದೇ ವಸ್ತುಗಳನ್ನು ಇರಿಸಲು ವಾಸ್ತು ನಿಯಮವನ್ನು ಪಾಲಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡುತ್ತಿದ್ದಾರೆ.

ಆದರೆ ಎಷ್ಟೋ ಬಾರಿ ನಮಗೆ ಅರಿವೇ ಇಲ್ಲದಂತೆ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗಿರುತ್ತದೆ. ಈ ಬಗ್ಗೆ ನಾವು ಲಕ್ಷ್ಯವೇ ನೀಡದ ಕಾರಣ ವಾಸ್ತುವಿನ ಕೆಂಗಣ್ಣಿಗೆ ಗುರಿಯಾಗಿರುತ್ತೇವೆ.
ನಮಗೆ ಅರಿವಿಲ್ಲದಂತೆ ಮನೆಯಲ್ಲಿ ಯಾವ ರೀತಿಯಲ್ಲಿ ವಾಸ್ತು ದೋಷಗಳು ಸಂಭವಿಸಿರುತ್ತದೆ ಎಂಬುದನ್ನು ನೋಡುವುದಾದರೆ..

ಮನೆಯಲ್ಲಿ ಕನ್ನಡಿ ಇರಿಸುವ ದಿಕ್ಕು :

ಹಾಸಿಗೆಯ ಕಡೆ ಮುಖ ಮಾಡಿ ಕನ್ನಡಿಯನ್ನು ಇರಿಸಿದ್ದೀರೇ..? ಇದು ನಿಮ್ಮ ಜೀವನದಲ್ಲಿ ನಿದ್ರಾ ಹೀನತೆ, ವಿಚಿತ್ರ ಕನಸುಗಳು, ನೆಮ್ಮದಿ ಇಲ್ಲದ ಜೀವನಕ್ಕೆ ಆಹ್ವಾನ ನೀಡಿದಂತೆ. ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯತ್ತ ಮುಖ ಮಾಡಿರುವ ಕನ್ನಡಿಗಳು ನಕಾರಾತ್ಮಕ ಶಕ್ತಿಯನ್ನು ಮನೆಗೆ ಹೊತ್ತು ತರುತ್ತವೆ. ಹೀಗಾಗಿ ನೆಮ್ಮದಿಯ ನಿದ್ರೆ ಎಂದಿಗೂ ನಿಮ್ಮದಾಗುವುದಿಲ್ಲ.

ದಕ್ಷಿಣಾಭಿಮುಖವಾದ ಮನೆ :

ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಮನೆಗಳು ಸಾಮಾನ್ಯವಾಗಿ ವಕ್ರ ದೃಷ್ಟಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ದಿಕ್ಕು ಆರ್ಥಿಕ ಅಸ್ಥಿರತೆ ಮತ್ತು ಅನಗತ್ಯ ಗೊಂದಲಗಳನ್ನು ತರುತ್ತದೆ.

Also Read: Vastu Tips: ಫ್ಯಾನ್‌, ಲೈಟ್‌ ಅಳವಡಿಸುವಾಗ ಮಾಡುವ ಈ ತಪ್ಪುಗಳು ಮನೆಯ ಸಂತೋಷ ಕಸಿದುಕೊಳ್ಳಬಹುದು ಎಚ್ಚರ!

ಅಡುಗೆಮನೆ – ಸ್ನಾನದ ಗೃಹ :

ಅಡುಗೆ ಮನೆ ಮತ್ತು ಸ್ನಾನದ ಗೃಹ ಒಂದೇ ಗೋಡೆಯನ್ನು ಹಂಚಿಕೊಂಡಿದದರೆ ವಾಸ್ತು ದೋಷ ಅತಿಯಾಗಿ ಕಾಡುತ್ತದೆ. ಬೆಂಕಿ ಹಾಗೂ ನೀರು ಪರಸ್ಪರ ವಿರೋಧಿಗಳು. ಇವುಗಳನ್ನು ಒಂದೇ ಕಡೆ ಇಡುವುದು ಶತ್ರುಗಳಿಗೆ ಮದುವೆ ಮಾಡಿಸಿದಂತೆ..!

ಮಲಗುವ ಕೋಣೆ :

ಉತ್ತರಾಭಿಮುಖವಾಗಿ ತಲೆ ಹಾಕಿ ಮಲುಗುವುದು ವಾಸ್ತು ಶಾಸ್ತ್ರದ ಪ್ರಕಾರ ಪ್ರಮಾದವಿದ್ದಂತೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತದೆ.

ನಿಂತು ಹೋದ ಗಡಿಯಾರ : ಗೋಡೆಯಲ್ಲಿ ನಿಂತು ಹೋದ ಅಥವಾ ಕೆಟ್ಟಿರುವ ಗಡಿಯಾರವನ್ನು ಎಂದಿಗೂ ಬಿಡಬಾರದು. ಇದೊಂದು ರೀತಿಯಲ್ಲಿ ನಿಮ್ಮ ಜೀವನದಲ್ಲಿ ಮಾಜಿ ಸಂಗಾತಿಯನ್ನು ಇಟ್ಟುಕೊಂಡಂತೆ. ಯಾವುದೇ ಪ್ರಯೋಜನವಿಲ್ಲವಾದರೂ ಒಂದಿಲ್ಲೊಂದು ಸಮಸ್ಯೆಗಳನ್ನು ತಂದೊಡ್ಡುತ್ತಲೇ ಇರುತ್ತದೆ.

Also Read: ಸೀದುಹೋದ ಕುಕ್ಕರ್ ಪಳಪಳ ಹೊಳೆಯಲು ಇಲ್ಲಿದೆ 3 ಅದ್ಭುತ ಟ್ರಿಕ್ಸ್‌

ಮನೆಯ ಎದುರಲ್ಲೇ ಶೂ ರ್ಯಾಕ್​

ಶೂ ರ್ಯಾಕ್​ ಅಥವಾ ಚಪ್ಪಲಿ ಬಿಡುವ ಸ್ಟ್ಯಾಂಡ್​ನ್ನು ಮನೆಯ ಎದುರಲ್ಲೇ ಇರಿಸಿದ್ದೀರೇ ? ಇದು ನಿಮ್ಮ ಮನೆಗೆ ತರುವಂತಹ ಕೆಟ್ಟ ಶಕ್ತಿಯನ್ನು ಇನ್ಯಾವುದೂ ನೀಡಲಾರದು. ಒಂದು ರೀತಿಯಲ್ಲಿ ಮನೆಗೆ ಕೆಟ್ಟದಾಗಲು ನೀವೇ ರತ್ನಗಂಬಳಿ ಹಾಸಿಕೊಟ್ಟಂತೆ.

Exit mobile version