ನಿಮ್ಮ ಮಕ್ಕಳು ಅತಿಯಾಗಿ ಫೋನ್​ ನೋಡುತ್ತಿದ್ದಾರೆಯೇ : ಕಾದಿದೆ ಕಂದಮ್ಮಗಳ ಪ್ರಾಣಕ್ಕೆ ಸಂಚಕಾರ

Smart Phone : ಈಗಂತೂ ಡಿಜಿಟಲ್​ ಯುಗ. ಪೋಷಕರ ಕೈಯಲ್ಲೂ ಮೊಬೈಲ್​. ಮಕ್ಕಳ ಕೈಯಲ್ಲೂ ಮೊಬೈಲ್​. ಆನ್​ಲೈನ್​ ತರಗತಿಗಳು, ಗೇಮಿಂಗ್​ ಮತ್ತು ಸ್ಟ್ರೀಮಿಂಗ್ ಹೀಗೆ ನಾನಾ ಕಾರಣಕ್ಕಾಗಿ ಬೆಳಗ್ಗೆ ಎದ್ದಾಗಿನಿಂದ ಮಲಗುವವರೆಗೂ ಮೊಬೈಲ್​ ಬಳಕೆಯಾಗುತ್ತಲೇ ಇರುತ್ತದೆ.

ಈ ರೀತಿ ದಿನವಿಡೀ ಮೊಬೈಲ್​ ಬಳಕೆ ಮಾಡುವ ಮಕ್ಕಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ ಎಂದು ಜರ್ನಲ್​ ಆಫ್​ ಡಿ ಅಮೆರಿಕನ್​ ಅಸೋಸಿಯೇಷನ್​ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದರಲ್ಲಿ ತಿಳಿದುಬಂದಿದೆ.

ಹೆಚ್ಚುಕಾಲ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಕ್ರೋಲ್​ ಮಾಡುವುದು, ಗೇಮಿಂಗ್​ಗಳಲ್ಲಿ ತೊಡಗಿಸಿಕೊಳ್ಳುವ ಮಕ್ಕಳಲ್ಲಿ ಹೃದಯರಕ್ತನಾಳಗಳು ಬ್ಲಾಕ್​ ಆಗುವ ಅಪಾಯ ಜಾಸ್ತಿ ಇರುತ್ತದೆ.
ಈ ಅಧ್ಯಯನಕ್ಕಾಗಿ ಸಂಶೋಧಕರು 1 ಸಾವಿರಕ್ಕೂ ಅಧಿಕ ಪೋಷಕರು ಹಾಗೂ ಮಕ್ಕಳನ್ನು ಬಳಸಿಕೊಂಡಿದ್ದರು.

ಇದರಲ್ಲಿ ಹೆಚ್ಚು ಕಾಲ ಸ್ಮಾರ್ಟ್​ಫೋನ್​ಗಳನ್ನು ಬಳಕೆ ಮಾಡಿದವರಲ್ಲಿ ಹೃದಯ ರಕ್ತನಾಳದ ಅಪಾಯವನ್ನು ಗುರುತಿಸಲಾಯಿತು. ಸೊಂಟದ ಸುತ್ತಳತೆ, ರಕ್ತದೊತ್ತಡ, ಉತ್ತಮ ಕೊಲೆಸ್ಟ್ರಾಲ್​ ಮಟ್ಟ, ಟ್ರೈಗ್ಲಿಸರೈಡ್​ಗಳು ಹಾಗೂ ರಕ್ತದಲ್ಲಿನ ಗ್ಲುಕೋಸ್​ ಮಟ್ಟಗಳನ್ನು ಪರೀಕ್ಷಿಸುವ ಮೂಲಕ ಈ ವರದಿ ತಯಾರಿಸಲಾಗಿದೆ.

Also Read: ಜೀರ್ಣಕ್ರಿಯೆ ಸುಧಾರಿಸುವ, ಬೆನ್ನುಮೂಳೆ ಬಲಪಡಿಸುವ ಮತ್ತು ಮನಸ್ಸನ್ನು ಶಾಂತಗೊಳಿಸುವ ಆಸನ

ಮಕ್ಕಳಲ್ಲಿ ಸ್ಮಾರ್ಟ್​ಫೋನ್​ ಬಳಕೆ ಕುರಿತಂತೆ ಪೋಷಕರು ತಿಳಿದುಕೊಳ್ಳಲೇಬೇಕಾದ ಅಂಶಗಳು :

Also Read: ಸ್ಕ್ರಬ್ ಮಾಡದೆ ಒವನ್ ಸ್ವಚ್ಛಗೊಳಿಸುವ ವಿಧಾನ ಇಲ್ಲಿದೆ ನೋಡಿ

ಹೀಗಾಗಿ ಡಿಜಿಟಲ್​ ಯುಗಕ್ಕೆ ಹೊಂದಿಕೊಳ್ಳುವುದು ಖಂಡಿತ ಮುಖ್ಯ, ಹಾಗೆಂದು ಅತಿಯಾದರೆ ಅಮೃತವೂ ವಿಷ ಎಂಬಂತೆ, ಡಿಜಿಟಲ್​ ಲೋಕವೇ ನಿಮ್ಮ ಮಕ್ಕಳ ಬದುಕಾಗದಿರಲಿ. ಮಕ್ಕಳಿಗೆ ಸ್ಮಾರ್ಟ್ ಫೋನ್​ಗಳ ಹೊರತಾಗಿಯೂ ಸುಂದರ ಜಗತ್ತೊಂದಿದೆ ಎಂಬುದನ್ನು ಅರಿವು ಮೂಡಿಸುವುದು ಪೋಷಕರ ಕರ್ತವ್ಯವಾಗಿದೆ. ಈ ಮೂಲಕ ಮಕ್ಕಳ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಕೂಡ ಪೋಷಕರ ಮೇಲಿದೆ.

Exit mobile version