ಚಹಾ ಸ್ಟ್ರೈನರ್‌ ಮೇಲೆ ಕೊಳೆ ಕೂತು ಕಪ್ಪಾಗಿದೆಯಾ? ಮೊಂಡು ಕಲೆಯನ್ನು ತೆಗೆಯಲು ಈ ಸರಳ ಟಿಪ್ಸ್‌ ಪಾಲಿಸಿ

Tea Strainer Cleaning Tips: ನಮ್ಮಲ್ಲಿ ಬಹಳಷ್ಟು ಜನರಿಗೆ ಬೆಳಗಾಗುವುದೇ ಬಿಸಿಬಿಸಿ ಚಹಾದೊಂದಿಗೆ. ಚಹಾ ಕುಡಿಯುವುದು ದಿನಚರಿಯ ಮೊಟ್ಟ ಮೊದಲ ಕೆಲಸ ಅಂದರೂ ತಪ್ಪಾಗಲಾರದು. ಅಷ್ಟೊಂದು ಗಾಢವಾಗಿ ಚಹಾ ನಮ್ಮ ನಿತ್ಯದ ಜೀವನದಲ್ಲಿ ಬೆರೆತುಹೋಗಿದೆ.

ಆದರೆ ಚಹಾ ಕಡಿಯುವ ಪ್ರತಿಯೊಬ್ಬರ ಮನೆಯಲ್ಲೂ ಇದೊಂದು ಸಮಸ್ಯೆ ಯಾವಾಗಲೂ ಕಾಣಿಸುತ್ತದೆ. ಅದೇನೆಂದರೆ ಚಹಾ ಸೋಸುವ ಸ್ಟ್ರೈನರ್‌ನಲ್ಲಿ ಕುಳಿತುಕೊಳ್ಳುವ ಕಲೆ.

ಮೊದಲು ಸಣ್ಣದಾಗಿ ಕಾಣುವ ಕಲೆಗಳು ಕಾಲಕ್ರಮೇಣ ದಪ್ಪ ಪದರವಾಗಿ ಸ್ಟ್ರೈನರ್ ಕಪ್ಪಗಾಗಿ ಚಹಾ ಸೋಸುವುದು ಕಷ್ಟವಾಗುತ್ತದೆ. ಮನೆಗೆ ಬಂದ ಅತಿಥಿಗಳ ಎದುರು ಇದೊಂದು ಮುಜುಗರದ ಸಂಗತಿಯೂ ಹೌದು. ಪದೇ ಪದೇ ಸ್ಕ್ರಬ್‌ ಬಳಸಿ ತೊಳೆದರೂ ಸ್ಟ್ರೈನರ್‌ ಸ್ವಚ್ಛವಾಗದಿದ್ದಾಗ ಹೊಸತೊಂದನ್ನು ಖರೀದಿಸುವ ನಿರ್ಧಾರ ಮಾಡುತ್ತಾರೆ. ಆದರೆ ಹಾಗೆ ಯೋಚಿಸಬೇಕೆಂದಿಲ್ಲ, ಕೆಲವು ಸರಳ ಟಿಪ್ಸ್‌ ತಿಳಿದುಕೊಂಡರೆ ಚಹಾ ಸ್ಟ್ರೈನರ್ ಅನ್ನು ಹೊಸತರಂತೆ ಹೊಳೆಯುವಂತೆ ಮಾಡಬಹುದು.

ಅಡಿಗೆ ಸೋಡಾ ಮತ್ತು ವಿನೆಗರ್

ಚಹಾ ಸೋಸುವ ಸ್ಟ್ರೈನರ್‌ ಅನ್ನು ಸ್ವಚ್ಛಗೊಳಿಸಲು ಅಡಿಗೆ ಸೋಡಾ ಮತ್ತು ವಿನೆಗರ್ ಬಹಳ ಪರಿಣಾಮಕಾರಿ ಪರಿಹಾರವಾಗಿದೆ. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಅದಕ್ಕೆ ವಿನೆಗರ್, ಅಡಿಗೆ ಸೋಡಾ ಮತ್ತು ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್‌ ಸೇರಿಸಿ. ಕೊಳಕು ಸ್ಟ್ರೈನರ್ ಅನ್ನು ಕುದಿಯುವ ನೀರಿನಲ್ಲಿ ಹಾಕಿ, ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ಅದರಲ್ಲಿ ಸಂಗ್ರಹವಾದ ಕೊಳೆಯನ್ನು ಸಡಿಲಗೊಳಿಸುತ್ತದೆ. ನಂತರ ಒಂದು ಸ್ಕ್ರಬ್‌ ತೆಗೆದುಕೊಂಡು ಉಜ್ಜಿ ನೀರಿನಿಂದ ಸ್ವಚ್ಛಗೊಳಿಸಿ.

ಹಲ್ಲುಜ್ಜುವ ಬ್ರಷ್‌ ಬಳಸಿ

ಸ್ಟ್ರೈನರ್‌ ತೊಳೆಯಲು ಹಲ್ಲುಜ್ಜುವ ಬ್ರಷ್‌ ಬಳಸಬಹುದು. ಟೂತ್ ಬ್ರೆಷ್‌ ಅನ್ನು ಸೋಪಿನ ಪುಡಿಯಲ್ಲಿ ಅದ್ದಿ, ಸ್ಟ್ರೈನರ್‌ ಮೇಲ್ಭಾಗದಲ್ಲಿ ಉಜ್ಜಿ. ರಂದ್ರಗಳಲ್ಲಿ ಶೇಖರಣೆಯಾದ ಹಳೆಯ ಚಹಾ ಕಲೆಗಳು ಸುಲಭವಾಗಿ ಹೊರಹೋಗುತ್ತದೆ. ಮುಚ್ಚಿಹೋಗಿರುವ ರಂಧ್ರಗಳನ್ನು ಹೀಗೆ ಸುಲಭವಾಗಿ ತೆರೆದುಕೊಳ್ಳುವಂತೆ ಮಾಡಬಹುದು.

ಇದನ್ನೂ ಓದಿ: ​ರಾತ್ರಿ 9:30ರ ನಂತರ ಊಟ ಮಾಡಿದರೆ ಈ ಅಪಾಯ ಕಟ್ಟಿಟ್ಟ ಬುತ್ತಿ!

ಸ್ಟ್ರೈನರ್‌ ಹೀಟ್‌ ಮಾಡಿ

ಸ್ಟ್ರೈನರ್ ಸ್ಟೀಲ್‌ನಿಂದ ಮಾಡಲ್ಪಟ್ಟಿದ್ದರೆ. ಅದನ್ನು ಕೆಲವು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಅದು ತಣ್ಣಗಾದ ನಂತರ, ಸ್ಕ್ರಬ್ಬರ್‌ ನ ಸಹಾಯದಿಂದ ಸ್ವಚ್ಛಗೊಳಿಸಿ. ಈ ವಿಧಾನವು ಸಂಗ್ರಹವಾದ ಕೊಳೆಯನ್ನು ತೆಗೆದುಹಾಕುತ್ತದೆ ಮತ್ತು ಸ್ಟ್ರೈನರ್ ಮತ್ತೆ ಹೊಸದಾಗಿ ಕಾಣುವಂತೆ ಮಾಡುತ್ತದೆ.

Exit mobile version