ರಾಜ್ಯದ ನ್ಯಾಯಾಂಗ ವ್ಯವಸ್ಥೆ ಟಾರ್ಗೆಟ್​ ? : ಮಡಿಕೇರಿ, ದಾವಣಗೆರೆ, ಧಾರವಾಡ ಕೋರ್ಟ್​ಗಳಿಗೆ ಬಾಂಬ್​ ಬೆದರಿಕೆ

ಬೆಂಗಳೂರು : State judicial system target: ರಾಜ್ಯದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಕಾಣದ ಕೈಗಳು ಹುನ್ನಾರ ನಡೆಸುತ್ತಿದ್ದು ಬೇಕಂತಲೇ ಟಾರ್ಗೆಟ್ ಮಾಡಲಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ರಾಜ್ಯದ ಮಡಿಕೇರಿ, ದಾವಣಗೆರೆ ಹಾಗೂ ಧಾರವಾಡ ಕೋರ್ಟ್​ಗಳಿಗೆ ಬಾಂಬ್​ ಬೆದರಿಕೆಯ ಸಂದೇಶ ಬಂದಿರುವುದು ಆತಂಕ ಮೂಡಿಸಿದೆ.

ಮಡಿಕೇರಿಯ ನ್ಯಾಯಾಲಯ ಸಮುಚ್ಛಯದ ಇ – ಮೇಲ್​ಗೆ ಅನಾಮಧೇಯ ಮೇಲ್​ ವಿಳಾಸದಿಂದ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿದೆ. ಕೂಡಲೇ ಅಲರ್ಟ್​ ಆದ ಮಡಿಕೇರಿ ಪೊಲೀಸರು ಕೋರ್ಟ್​ನಲ್ಲಿದ್ದ ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಕೋರ್ಟ್​ನಿಂದ ಹೊರಗೆ ಕಳುಹಿಸಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಿಬ್ಬಂದಿ ಜೊತೆ ಪರಿಶೀಲನೆ ನಡೆಸಿದ್ದಾರೆ.

Also read: ಕೆಎಸ್​ಆರ್​ಟಿಸಿಯಿಂದ ಬಿಗ್​ಶಾಕ್ ​: ಲಗೇಜ್​ ದರದಲ್ಲಿ ಏರಿಕೆ

ಇನ್ನು ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಜಡ್ಜ್​ ಅವರ ಇ – ಮೇಲ್​ ಐಡಿಗೆ ತಮಿಳುನಾಡು ಮೂಲದ ವ್ಯಕ್ತಿ ಇ – ಮೇಲ್​ ಮಾಡಿದ್ದಾರೆ. ಈ ಸಂದೇಶದಲ್ಲಿ ಮಧ್ಯಾಹ್ನ 12:30ಕ್ಕೆ ಆರ್​ಡಿಎಕ್ಸ್​ ಬಾಂಬ್​ ಕೋರ್ಟ್​ನಲ್ಲಿ ಸ್ಪೋಟವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ಅದೇ ರೀತಿ ರಾಜ್ಯ ಹೈಕೋರ್ಟ್​ನ ಧಾರವಾಡ ಪೀಠಕ್ಕೆ ಕಳೆದ ತಿಂಗಳಷ್ಟೇ ಬಾಂಬ್​ ಬೆದರಿಕೆ ಸಂದೇಶ ಬಂದಿತ್ತು. ಒಂದು ತಿಂಗಳ ಒಳಗಾಗಿ ಇದೀಗ ಮತ್ತೊಮ್ಮೆ ಹುಸಿ ಬಾಂಬ್​ ಸಂದೇಶ ಕಳುಹಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕಾಗಮಿಸಿದ ಗದಗ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Exit mobile version