ನವೆಂಬರ್‌ ಕ್ರಾಂತಿ : ಹೈಕಮಾಂಡ್​ ಮೇಲೆ ರಾಜ್ಯ ‘ಕೈ’ ನಾಯಕರ ಒತ್ತಡದ ತಂತ್ರ, ರಾಜಣ್ಣ ಯೂಟರ್ನ್‌

ಬೆಂಗಳೂರು: November Revolution: ರಾಜ್ಯದಲ್ಲಿ ನವೆಂಬರ್​ ಕ್ರಾಂತಿಯ ಕೂಗಿನ ಬೆನ್ನಲ್ಲೇ ರಾಜ್ಯದ ಹಿರಿಯ ನಾಯಕರು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ನಿವಾಸಕ್ಕೆ ದೌಡಾಯಿಸಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ನವೆಂಬರ್​ ಕ್ರಾಂತಿಯ ವಿಚಾರವಾಗಿಯೇ ಚರ್ಚೆ ನಡೆದಿರುವ ಸಾಧ್ಯತೆ ಇದೆ ಅನ್ನುವ ಮಾತುಗಳು ಕೇಳಿಬರುತ್ತಿದೆ.

ಬಿಹಾರ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್​ ಹೈಕಮಾಂಡ್​ ರಾಜ್ಯದಲ್ಲಿ ಸಂಪುಟ ಪುನರ್‌ ರಚನೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಯೋಚನೆಯಲ್ಲಿದೆ. ಈ ನಡುವಲ್ಲೇ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಬಿಹಾರ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್​ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್​.ವಿ ದೇಶಪಾಂಡೆ ಖರ್ಗೆಯವರನ್ನು ಭೇಟಿ ಮಾಡಿದ್ದು ಹೈಕಮಾಂಡ್​ ಮೇಲೆ ಒತ್ತಡದ ತಂತ್ರ ಪ್ರಯೋಗಿಸಿದ್ದಾರೆ ಎನ್ನಲಾಗಿದೆ.

Also Read: ಗೃಹಲಕ್ಷ್ಮೀ ಫಲಾನುಭವಿಗಳಿಗೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಯೂಟರ್ನ್‌ ಹೊಡೆದ ಕೆಎನ್‌ ರಾಜಣ್ಣ :

ಇತ್ತ ರಾಜ್ಯದಲ್ಲಿ ನವೆಂಬರ್​ ಕ್ರಾಂತಿಯ ಕಿಚ್ಚು ಹತ್ತಿಸಿದ್ದ ಮಾಜಿ ಸಚಿವ ಕೆ.ಎನ್​ ರಾಜಣ್ಣ ಇದೀಗ ಯುಟರ್ನ್​ ಹೊಡೆದಿದ್ದಾರೆ. ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ರಾಜಕಾರಣ ನಿಂತ ನೀರಲ್ಲ. ಏನೂ ಬೇಕಾದರೂ ಆಗಬಹುದು. ಬೇರೆ ರಾಜ್ಯಗಳಲ್ಲಿ ರಾಜಕೀಯ ಬದಲಾವಣೆಗಳು ಆಗಬಹುದು. ಆದರೆ ನಮ್ಮ ರಾಜ್ಯದಲ್ಲಿ ಖಂಡಿತ ಯಾವುದೇ ಬದಲಾವಣೆ ಆಗದು ಎಂದಿದ್ದಾರೆ.

Also Read: ಜಾತಿಗಣತಿದಾರರಿಗೆ ಹಣ ನೀಡಲು ಚೌಕಾಶಿ : ಮಾತು ತಪ್ಪಿದ ಸರಕಾರ

Exit mobile version